Girl in a jacket

ಹುಬ್ಬಳ್ಳಿಯಲ್ಲಿ ಅ.7 ರಂದು ಆರ್ ಸಿ ಬಿ ಕುರಿತು ಸಭೆ-ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ

ಆರ್ ಸಿ ಬಿಯ ಕುರಿತು ಹುಬ್ಬಳ್ಳಿಯ ಸ್ವಾತಿ ಹೋಟೆಲ್ ನಲ್ಲಿ ಅ.7 ರಂದು ಸಭೆ ಕರೆಯಲಾಗಿದೆ. ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸಲು ಸಭೆ ತೀರ್ಮಾನಿಸಲಾಗುವುದು ಎಂದು ಮಾಜಿ ಡಿಸಿಎಂ‌ ಈಶ್ವರಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 30 ರಿಂದ 40 ಜನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯ ನಂತರ ಸಾಧು ಸಂತರ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಯಾರು ಭಾಗಿಯಾಗಬೇಕು ಯಾರು ಭಾಗವಹಿಸಲ್ಲ ಎಂಬುದು ಮುಖ್ಯವಲ್ಲ. ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಕರೆ ಮಾಡುತ್ತಿದ್ದಾರೆ. ಆಹ್ವಾನ ಯಾರಿಗೂ ಕರೆದಿಲ್ಲ.ಬರಲು ಹೇಳಿದ್ದೇವೆ ಯಾರು ಬರ್ತಾರೆ ನೋಡಿ ಮುಂದಿನ ಸಭೆ ನಡೆಯಲಿದೆ ಎಂದರು. 

ಕಳೆದ 8 ದಿನಗಳ ಹಿಂದೆ ಜಾತಿ ಜನಗಣತಿಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಇದನ್ನ ಸ್ವಾಗತಿಸಿದ್ದೆ. ಮೂಡಾ ಹಗರಣವನ್ನ ಡೈವರ್ಟ್ ಮಾಡದಂತೆ ಆಕ್ಷೇಪಿಸಿದ್ದೆ ಈಗ‌ ಸಿಎಂ ಧ್ವನಿ ಬದಲಾಗಿದೆ ಎಂದು ಆರೋಪಿಸಿದರು.

ಶಾಸಕರ ಮತ್ತು ಸಚಿವರ ಜೊತೆ ಪರಿಶೀಲನೆ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆ ಜನಗಣತಿ ಮಾಡೇ ಮಾಡುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಈಗ ಪರಿಶೀಲಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ರಚನೆಯ ಬಗ್ಗೆ 140 ಕೋಟಿ ವ್ಯಯವಾಗಿದೆ. 

ಸಿಎಂ ಸಿದ್ದರಾಮಯ್ಯ ಹಿಂದಿನ ವಾರ ಹೇಳಿದ ವಿಷಯದಮೇಲೆ ಮುಂದುವರೆಯಬೇಕು. ಸದನದಲ್ಲಿ ಚರ್ಚಿಸಬೇಕು. ಮೋದಿ ಸರ್ಕಾರವೂ  ಸಹ ಚರ್ಚಿಸಿ ಜನಗಣತಿ ಮಾಡಿ ಎಂದಿದೆ. ಹಾಗೆ ಸಿಎಂ ಸಿದ್ದರಾಮಯ್ಯ ನಡೆಯಬೇಕೆಂದರು. 

ರಾಜಕಾರಣದ ಬಗ್ಗೆ ಬೇಸರವಾಗುವಂತಾಗಿದೆ. ರಾಜಕಾರಣಿಗಳು ಬಳಸುವ ಪದಗಳು ಅಸಹ್ಯ ತಂದಿದೆ. ರಾಜಕಾರಣ ನಿಂತ ನೀರಲ್ಲ. ಯಾರ ಯಾರ ಮೇಲೆ ಎಫ್ಐಆರ್ ಆಗಿದೆ ಕ್ಲೀನ್ ಚೀಟ್ ತಗೆದುಕೊಂಡು ಬನ್ನಿ. ಸಿಎಂ ಪತ್ನಿ ಪಾರ್ವತಮ್ಮ ಮುಗ್ದ ಹೆಣ್ಣುಮಗಳು ಇದ್ದಾರೆ. ಅವರೂ ಸಹ ಕ್ಲೀನ್ ಚೀಟ್ ಪಡೆದುಕೊಂಡು ಬರಲಿ. ದ್ವೇಷದ ರಾಜಕಾರಣ ಮಾಡಬೇಡಿ ಎಂದು ಕಿವಿ ಮಾತು ಆಡಿದರು. 

ಯೋಜನೆಗಳ ಬಗ್ಗೆ, ಸಿದ್ದಾಂತದ ಬಗ್ಗೆ ಬಡವರ ಬಗ್ಗೆಚಿಂತಿಸುತ್ತಿದ್ದ ಕಾಲವಿದ್ದವು.‌ ಈಗ ಮೂರು ಪಕ್ಷದ ರಾಜಕಾರಣಿಗಳು ವಿಶ್ವಾಸ ಪ್ರೀತಿಯಲ್ಲಿರಬೇಕು. ನಾವು ಇಂಡಿಯಾ ಪಾಕಿಸ್ತಾನಿಗಳಾಗಬಾರದು. ರಾಜಕಾರಣದಲ್ಲಿ ನಡವಳಿಕೆ ವಿಚಿತ್ರವಾಗಿದೆ. ಹಿಂದಿನಿಂದ ದೇವೇಗೌಡ, ಕುಮಾರ ಸ್ವಾಮಿ ಯಡಿಯೂರಪ್ಪನವರಿಗೆ ದೇವರ ಮೇಲೆ ನಂಬಿಕೆ ಬಂದಿದೆ. ಈಗ ಸಿದ್ದರಾಮಯ್ಯನವರಿಗೂ ಮೈಸೂರುದಸರಾ ಉದ್ಘಾಟನೆಯಲ್ಲಿ ತಿಲಕ ಇಟ್ಟುಕೊಂಡು ಭಾಷಣ ಮಾಡಿ ನಂಬಿಕೆ ಬಂದಂತೆ ಕಾಣುತ್ತಿದೆ. 

ದಿನೇಶ್ ಗುಂಡೂರಾವ್ ಅವರ ಬ್ಲಡ್ಡೇ ವಿಚಿತ್ರವಾದ ಬ್ಲಡ್, ಭಗವಾನ್ ಪುಸ್ತಕ ಓದಬೇಡಿ, ಇತಿಹಾಸಕಾರರ ಪುಸ್ತಕ ಓದಿದರೆ ಸಾವರ್ಕರ್ ಬಗ್ಗೆ ಗೊತ್ತಾಗುತ್ತದೆ. ಬಿಜೆಪಿ ಮೊದಲು ನಾಲ್ಕು ಸ್ಥಾನ ಗೆದ್ದಾಗ ಗೇಲಿ ಮಾಡಲಾಗುತ್ತಿತ್ತು. ಈಗ ಬಿಜೆಪಿನೇ ದೇಶ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಹೀಗೆ ಹೇಳಿ ಹೇಳಿ ಎಲ್ಲಾಕಡೆ ಜಾಗ ಖಾಲಿ ಮಾಡಿಕೊಂಡು ಹೋಗುತ್ತಿದೆ ಎಂದರು.

ಬಿಜೆಪಿ ಹೋಗಲು ತೀರ್ಮಾನ ಕೈಗೊಂಡಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸಿದರ ಬಗ್ಗೆ ಸ್ಪಷ್ಟತೆ ಸಿಗಬೇಕು. ಹೊಂದಾಣಿಕೆ ಒಂದು ಕೈ ಚಪ್ಪಾಳೆ ಆಗಲ್ಲ. ಡಿಕೆಶಿ ನನ್ನ ಭಿಕ್ಷೆಯಿಂದ ಗೆದ್ದಿದ್ದೀಯ ಎಂದು ವಿಜೇಂದ್ರರಿಗೆ ಹೇಳಿದ್ದೀರಿ. ಡಿಕೆಶಿ ಇದರ ಪ್ರತಿಫಲವಾಗಿ ಪಡೆದರೆ ಸ್ಪಷ್ಟಪಡಿಸಿ.‌ ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಸ್ವಚ್ಚವಾಗಬೇಲು. ಅಪ್ಪ ಮಕ್ಕಳ ಕೈಲಿ ಇರುವ ಬಗ್ಗೆ ಚರ್ಚೆ ಆಗಬೇಕು. ಸಿದ್ದೇಶ್ವರ್, ಸಿಟಿ ರವಿ, ಜೊಲ್ಲೆ ಮೊದಲಾದವರು ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಇದು ಚರ್ಚೆ ಆಗಬೇಕು ನಂತರ ನಾನು ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಚಿಂತಿಸುವೆ ಎಂದರು. 

ಹಾವೇರಿಯ ಶಿಗ್ಗಾವ್ ನ ಉಪಚುನಾವಣೆಯಲ್ಲಿ ಯಾವುದೇ ರಾಷ್ಟ್ರಭಕ್ತರ ಬಳಗದಿಂದ ಸ್ಪರ್ಧಿಸೊಲ್ಲ ಎಂದು ಮಾಜಿ ಡಿಸಿಎಂ ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close