ಮಹಿಳೆ ನಾಪತ್ತೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ ಗ್ರಾಮ ವಾಸಿ ಶ್ರೀಮತಿ ಗಾಯತ್ರಿ ಬಿ. ಕೋಂ ಪ್ರಕಾಶ್‌ಕುಮಾರ್ ಪಿ.ಆರ್. ಎಂಬ 51 ವರ್ಷದ ಮಹಿಳೆ ಅ.03 ರಂದು ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.  

ಈಕೆಯ ಚಹರೆ ಸಮಾರು 5.00 ಅಡಿ ಎತ್ತರ, ದುಂಡುಮುಖ, ದಪ್ಪನೆಯ ಮೈಕಟ್ಟು, ಕನ್ನಡಕ ಧರಿಸಿರುತ್ತಾರೆ.  ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೀರೆ ಮತ್ತು ಹಳದಿ ಬಣ್ಣದ ರವಿಕೆ ಧರಿಸಿರುತ್ತಾರೆ.

ಈಕೆಯ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261418/ 261410/ 261422/ 9480803350 ಅಥವಾ ಕಂಟ್ರೋಲ್ ರೂಂ ನಂ. 100 ಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close