ಸುದ್ದಿಲೈವ್/ಶಿವಮೊಗ್ಗ
ಅಪ್ರಾಪ್ತ ಬಾಲಕಿಗೆ ಆಕೆಯ ತಾಯಿ ಮತ್ತು ಅವರ ಸ್ನೇಹಿತ ಮದ್ಯಪಾನ ಮಾಡಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಈ ಘಟನೆ ಕುರಿತಂತೆ ಅಪ್ರಾಪ್ತ ಬಾಲಕಿಗೆ ಮದ್ಯಪಾನ ಮಾಡಿಸಿ ಆಕೆಯ ಕೊಲೆಗೆ ಯತ್ನಿಸಿದ ಘಟನೆ ವಿರುದ್ಧ ಹಿಂದೂ ಸಂಘಟನೆ ತೀವ್ರವಾಗಿ ಖಂಡಿಸಿದೆ. ಅಪ್ರಾಪ್ತೆ ಬಾಲಕಿಗೆ ಮದ್ಯಪಾನ ಮಾಡಿಸಿರುವುದು ಅನ್ಯಕೋಮಿನ ವ್ಯಕ್ತಿಯಾಗಿದ್ದರಿಂದ ಘಟನೆಯ ವಿರುದ್ಧ ನಾಳೆ ಹಿಂದೂ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ.