ಸುದ್ದಿಲೈವ್/ತೀರ್ಥಹಳ್ಳಿ
ಪುನೀತ್ ಬ್ರಿಗೇಡ್, ವಿಶ್ವಮಾನವ ಕನ್ನಡ ವೇದಿಕೆ ಹಾಗೂ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಸಹಯೋಗದೊಂದಿಗೆ ತೀರ್ಥಹಳ್ಳಿಯ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಿಧನ ದಿನವಾದ ಅ.29ರಂದು ಅವರ ಸ್ಮರಣಾರ್ಥ ಪುನೀತ್ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ಹಾಗೂ ನೂತನ ತಹಶೀಲ್ದಾರ್ ರಂಜಿತ್ ಅವರು ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು.
ತೀರ್ಥಹಳ್ಳಿಯ ಅನೇಕ ಯುವ ಕಲಾವಿದರು, ಸಮಾಜ ಸೇವಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಮಾರ್ಗದರ್ಶಕರು ಆದ ಸೂರ್ಯನಾರಾಯಣ ಚಿಡುವ, ವಿಶ್ವ ಮಾನವ ಕನ್ನಡ ವೇದಿಕೆಯ ಸಂಚಾಲಕರು ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಸಂಚಾಲಕರು ಆದ ಸುಧಾಕರ್ ಕುಪ್ಪಳ್ಳಿ ಹಾಜರಿದ್ದು ಪುನೀತ್ ಅವರಿಗೆ ನುಡಿ ನಮನ ಅರ್ಪಿಸಿದರು.
ಸಾಧಕರು, ಕಲಾವಿದರು, ಸೇವಕರಿಗೆ ಸನ್ಮಾನ
ತೀರ್ಥಹಳ್ಳಿಯಲ್ಲಿ ಸುಮಾರು 65ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡುವ ಮೂಲಕ ಸೇವೆ ಮಾಡುತ್ತಿರುವ ಕೆ.ಪಿ.ಎಸ್.ಸ್ವಾಮಿ, ಗಾಯಕ ಶಶಿಕುಮಾರ್ ಕಾರಂತ್, ಸಮಾಜ ಸೇವಕರು ಹಾಗೂ ನದಿಯಲ್ಲಿ ಬಿದ್ದವರನ್ನು ರಕ್ಷಣೆ ಮಾಡುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ಪ್ರಮೋದ್ ಕುರುವಳ್ಳಿ, ಬದನೆಹಿತ್ಲು, ತುಡ್ಕಿ ಶೌರ್ಯ ತಂಡ, ರಾಮಕೃಷ್ಣಪುರದ ಸಮರ್ಪಣಾ ತಂಡ, ಪುನೀತ್ ಹಾಡು ರಚನೆಕಾರರಾದ ಗಣೇಶ್ ಭಟ್,
ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ದಯಾನಂದ್ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ರಾಜ್ಯದಲ್ಲಿ ಪ್ರಸಿದ್ಧಿಯಾಗಿರುವ ತೀರ್ಥಹಳ್ಳಿಯ ಕಲಾವಿದ ಶೈಲೇಶ್, ರಾಜ್ಯಮಟ್ಟದಲ್ಲಿ ಎನ್ ಜಿ ಓ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತೀರ್ಥಹಳ್ಳಿಯ ಸ್ಪಂದನ ಸೇವಾ ಸಂಸ್ಥೆಯಾದ ಹಬೀಬ್, ರಂಗಾಯಣ ಕಲಾವಿದ ಗಾಯಕ ಶಿವಕುಮಾರ್,
ಗಾಯಕಿ ನಿಧಿ ಸುರೇಶ್ ಹಾಗೂ ಕ್ರೀಡೆಯಲ್ಲಿ ರಾಷ್ಟ್ರಮಟ್ಟವನ್ನ ಪ್ರತಿನಿಧಿಸಿರುವ ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿ ಪಾವನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಣ್ಯರು ಪುನೀತ್ ಅವರ ಸ್ಮರಣಾರ್ಥ ಇಂತಹ ಮಾದರಿ ಕಾರ್ಯಕ್ರಮಗಳು ನಡೆಯಬೇಕು ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಕೃಷ್ಣಮೂರ್ತಿ ಕೊಪ್ಪ, ನಿವೃತ್ತ ಸೈನಿಕ ಸುರೇಂದ್ರ, ಸತೀಶ್ ಚಿಡುವ, ರಾಘವೇಂದ್ರ ಚಿಡುವ, ಪ್ರವೀಣ್, ಪ್ರತೀಕ್, ನವನೀತ್ ಭಟ್, ನಾಗರಾಜ್, ಮಂಜುನಾಥ್ ಶಿರುಪತಿ, ಅಧಿಕಾರಿಗಳಾದ ಸುಧೀರ್, ಸುಗುಮೇಶ್, ಕಿರಣ್ ಸೇರಿದಂತೆ ಹಲವರು ಇದ್ದರು.
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ ಸಂಪಾದಕರಾದ ರಾಘವೇಂದ್ರ ತೀರ್ಥಹಳ್ಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.