Girl in a jacket

ವಿದ್ಯುತ್ ಶಾಕ್ ನಿಂದ ರೈತ ಸಾವು-ಮೆಸ್ಕಾಂ ಅಧಿಕಾರಿಗಳ ವಿರುದ್ಧ ಬಿತ್ತು ಕೇಸ್!



ಸುದ್ದಿಲೈವ್/ಆನವಟ್ಟಿ

ಮೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳ ಯಡವಟ್ಟಿನಿಂದ ರೈತನೋರ್ವ ಅಸುನೀಗಿರುವ ಘಟನೆ ವರದಿಯಾಗಿದೆ. ಮೆಸ್ಕಾಂ ನ ಸೆಕ್ಷನ್ ಆಫೀಸರ್ ಮತ್ತು ಸಿಬ್ಬಂದಿಗಳ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಸೊರಬ ತಾಲೂಕಿನ ಲಕ್ಕವಳ್ಳಿ ಗ್ರಾಮದ ಮಲ್ಲೇಶಪ್ಪ ಎಂಬುವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಗಿರೀಶ್ ಹಾಗೂ ಎರಡನೇಯವನು ಮಹೇಶ್ ಆಗಿದ್ದಾರೆ, ಗಿರೀಶ್ ಶಿವಮೊಗ್ಗದಲ್ಲಿ ವಕೀಲರಾಗಿದ್ದಾರೆ. ಮಹೇಶ್(28) ಕೃಷಿಕನಾಗಿದ್ದು ಮಲ್ಲೇಶಪ್ಪನವರ ಜೊತೆ ವಾಸವಾಗಿದ್ದಾರೆ. ಮಲ್ಲೇಶಪ್ಪನವರಿಗೆ ಲಕ್ಕವಳ್ಳಿ ಸರ್ವೆ ನಂಬರ್ 72 ರಲ್ಲಿ 2 ಎಕರೆ ತರಿ ಜಮೀನು ಹೊಂದಿದ್ದಾರೆ. 

ಜಮೀನಿನಲ್ಲಿ ಭತ್ತ ಬೆಳೆದ ಪರಿಣಾಮ ರೈತ ಮಹೇಶ್ ಔಷಧಿ ಹೊಡೆಯಲು ಹೋಗಿದ್ದಾರೆ.‌ ಔಷಧಿ ಹೊಡೆಯಲು ತೆರಳಿದ ಮಗ ಮದ್ಯಾಹ್ನ 2 ಗಂಟೆಯಾದರೂ ಊಟಕ್ಕೆ ಬಂದಿಲ್ಲವೆಂದು ಹುಡುಕಿಕೊಂಡು ಹೋದಾಗ ಮಹೇಶ್ ಗದ್ದೆಯಲ್ಲಿ ಬಿದ್ದಿದ್ದನ್ನ ನೋಡಿದ್ದಾರೆ. 

ಮಗನ ಬಳಿ ಹೋದಾಗ ಮಹೇಶಪ್ಪನವರು ಹೋಗಲು ಯತ್ನಿಸಿದಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಮೆಸ್ಕಾಂನ ಸಿಬ್ಬಂದಿಗೆ ಕರೆ ಮಾಡಿದಾಗ ಸೆಕ್ಷನ್ ಆಫೀಸರ್ ಗೆ ಕರೆ ಮಾಡಲು ತಿಳಿಸಿದ್ದಾರೆ. ಸೆಕ್ಷನ್ ಆಫೀಸರ್ ಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.


ವಿದ್ಯುತ್ ತಂತಿಗಳು ಗದ್ದೆಯಲ್ಲಿ ತುಂಡಾಗಿ ಬಿದ್ದರೂ ಮೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮಗ ಮಹೇಶ್ ಅಸು ನೀಗಿರುವುದು  ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ತಂತಿಗಳು ಮಹೇಶ್ ಕಾಲಿಗೆ ಸಿಲುಕಿ ಶಾಕ್ ಹೊಡೆದ ಪರಿಣಾಮ ಮಹೇಶ್ ಅಸು ನೀಗಿದ್ದಾರೆ. ಮಗನ ಸಾವಿಗೆ ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರಣವೆಂದು ಮಲ್ಲೇಶಪ್ಪ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close