ಸುದ್ದಿಲೈವ್/ಶಿವಮೊಗ್ಗ
ನಟ ದೃವ ಸರ್ಜಾ ಮಾರ್ಟಿನ್ ಸಿನಿಮಾ ಪ್ರದರ್ಶನಕ್ಕೆ ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಲನಚಿತ್ರ ಮಂದಿರಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಮಾರ್ಟಿನ್ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
2021 ರಲ್ಲಿ ಪೊಗರು ಸಿನಿಮಾ ಬಿಡುಗಡೆಯ ನಂತರ ದೃವ ಸರ್ಜಾರ ಸಿನಿಮಾಗಳು ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಮೂರು ವರ್ಷಗಳ ನಂತರ ಸರ್ಜರ ಸಿನಿಮಾ ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. 2012 ರಲ್ಲಿ ಅದ್ಧೂರಿ ಮೂಲಕ ಕನ್ನಡ ಸಿನಮಾರಂಗಕ್ಕೆ ಕಾಲಿಟ್ಟ ದೃವ ಸರ್ಜಾ ಹಿಂದೆ ನೋಡಿರುವ ಪ್ರಮಯವೇ ಇರಲಿಲ್ಲ.
ನಾಯಕನಟರಾಗಿ ಆರಂಭಿಸಿದ ದೃವ ಸರ್ಜಾರಿಗೆ ಆಕ್ಷನ್ ಪ್ರಿನ್ಸ್ ಎಂಬ ಬಿರುದು ಸಹ ಇದೆ. 2012 ರಲ್ಲಿ ಆರಂಭಗೊಂಡ ಅದ್ಧೂರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ಬಂದ ಬಹದ್ದೂರು, ಭರ್ಜರಿ, ಪ್ರೇಮಬರಹ ಪೊಗರು ಸಿನಿಮಾ ನಂತರ ಮಾರ್ಟಿನ್ ಬಿಡುಗಡೆಗೆ ಅಭಿಮಾನಿಗಳು ಕಾತುರ ಹೆಚ್ಚಿಸಿದೆ.
ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಮಾರ್ಟಿನ್ ಚಿತ್ರದ ಅಬ್ಬರ ಶುರುವಾಗಿದೆ. ಕನ್ನಡದ ಬಹು ನಿರೀಕ್ಷಿತ ಚಿತ್ರ ಮಾರ್ಟಿನ್ ಚಿತ್ರವು ಇದೆ ಅಕ್ಟೋಬರ್ 11 ಅಂದರೆ ನಾಳೆ ಶುಕ್ರವಾರ ಮುಂಜಾನೆ ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಗಾಗಿ ಪ್ರದರ್ಶನಗೊಳ್ಳುತ್ತಿದೆ. ಮಾನ್ ನಲ್ಲೂ ನಾಳೆಯಿಂದ ಮಾರ್ಟಿನ್ ಪ್ರದರ್ಶನಗೊಳ್ಳುತ್ತಿದೆ.