Girl in a jacket

ಓರ್ವ ಕಾರ್ಯಕರ್ತನ ಪದತ್ಯಾಗದಿಂದ ಪಕ್ಷಕ್ಕೇನು ನಷ್ಟವಾಗುತ್ತಾ?


ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲವೆಂಬ ಮಾತು ಮತ್ತೊಮ್ಮೆ ಜಗಜ್ಜಾಹೀರವಾಗಿದೆ.  ಜಿಲ್ಲಾ  ಪ್ರಕೋಷ್ಠಗಳ ಸಂಯೋಜಕರಾಗಿದ್ದ ಹೃಷಿಕೇಶ್ ಪೈ ಪದತ್ಯಾಗ ಮಾಡುವ ಮೂಲಕ ಬಿಜೆಪಿಯಲ್ಲಿ ಪ್ರಬಲ ಸಮುದಾಯದ ಮೇಲುಗೈ ಮತ್ತೊಮ್ಮೆ ಬೆಳಕಿಗೆ ಬಂದಿದೆ. 

6 ತಿಂಗಳ ಹಿಂದೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದ ಹೃಷಿಕೇಶ್ ಪೈಯವರ ನೇಮಕಾತಿ ಸುಲಭವಾಗಿ ಇರಲಿಲ್ಲ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಿರಿಯರ ಖಡಕ್ ಮಾರ್ಗದರ್ಶನದ ಹಿನ್ನಲೆಯಿಂದಾಗಿ ಜಿಲ್ಲಾಕಾರ್ಯದರ್ಶಿಯಿಂದ ಪ್ರಕೋಷ್ಠಗಳ ಸಂಯೋಜಕರಾಗಿ ಹೊರ ಹೊಮ್ಮಿದ್ದಾರೆ.   

ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಸ್ಥಾನಕ್ಕೆ  ಹೃಷಿಕೇಶ್ ಪೈ ಪದತ್ಯಾಗ ಮಾಡಿ ಐದು ದಿನಗಳು ಕಳೆದಿದೆ. ಈ ದಿಡೀರ್ ಬೆಳವಣಿಗೆ ಕುರಿತು ಸುದ್ದಿಲೈವ್ ಅವರನ್ನ ಮಾತನಾಡಿಸುವ ಪ್ರಯತ್ನ ಮಾಡಿದಾಗಲೂ ಅಸಮಾಧಾನಕ್ಕೆ ಕಾರಣವೇನೆಂಬುದನ್ನ ಪೈಗಳು ಬಾಯಿಬಿಡಲಿಲ್ಲ‌. 22 ವರ್ಷಗಳ ಸುಧೀರ್ಘವಾಗಿ ಪಕ್ಷ ನಿಷ್ಠರಾಗಿದ್ದ ಪೈಗಳ ನಡೆ ಮಾತ್ರ ಅಚ್ಚರಿ ಮೂಡಿಸಿದೆ. 

ಇಂತಹ ಸನ್ನಿವೇಶಗಳು ಕನಸಿನಲ್ಲೂ ಯೋಚಿಸಿರಲಿಲ್ಲ. ಪಕ್ಷದಲ್ಲಿ ಇದ್ದೇನೆ  ಆದರೆ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ಕಾರಣ ವೈಯುಕ್ತಿಕ ಎಂದು ಮಾತ್ರ ಹೇಳಿದ್ದು ಬಿಟ್ರೆ. ಬೇರೆ ಯಾವ ಬೆಳವಣಿಗೆಯನ್ನ ಮಾತನಾಡುವ ಆಸಕ್ತಿಯನ್ನ ಅವರು ತೋರಲಿಲ್ಲ. 

ಪ್ರಕೋಷ್ಠಗಳ ಸ್ಥಾನದಲ್ಲಿ ಈ ಹಿಂದೆ  ಜ್ಞಾನೇಶ್ವರ್  ಇದ್ದರು.‌ 6 ತಿಂಗಳ ಹಿಂದೆ ಅಷ್ಟೆ ಪೈಗಳಿಗೆ ಹೊಸ ಸ್ಥಾನಮಾನ ದೊರೆತಿತ್ತು. ನಿರಂತರ ಸೇವೆಯ ನಡುವೆಯೂ ಅವರ ಪದತ್ಯಾಗ ಅಚ್ಚರಿ ಮೂಡಿಸಿದೆ. 6 ತಿಂಗಳಲ್ಲೇ ಅವರ ಪದತ್ಯಾಗ ಪಕ್ಷದ  ಆಂತರಿಕದಲ್ಲಿ ಗೊಂದಲ ಇರುವುದನ್ನ ಸೂಕ್ಷಮವಾಗಿ ಬಹಿರಂಗಗೊಂಡಿದೆ. 

ಇದೇ ರೀತಿ ಜಿಲ್ಲಾ ಸ್ಥಾನಮಾನದಲ್ಲಿ ಜಿಲ್ಲೆಯ ಹಿಂದುಳಿದ ಪ್ರಬಲ ಜಾತಿ ಸಮುದಾಯದ ವ್ಯಕ್ತಿಗಳಿಗೆ ನೀಡಿಲ್ಲವೆಂಬ ಕೂಗು ಕೇಳಿ ಬಂದಿತ್ತು. ಆ ಕೂಗು ಜಿಲ್ಲಾ ಬಿಜೆಪಿಯ ಬುಡವನ್ನೇ ಅಲುಗಾಡಿಸಿತ್ತು. ಏಕೆಂದರೆ ಹತ್ತಿರದಲ್ಲೇ ಲೋಕಸಭಾ ಚುನಾವಣೆವಿದ್ದ ಕಾರಣ ಪ್ರಬಲ ಹಿಂದುಳಿದ ವರ್ಗಗಳ ಮತ ಕೈಕೊಡುವ ಭೀತಿಯಲ್ಲಿ ಪಕ್ಷವಿದ್ದಿತ್ತು.

ಕೇವಲ ಪೈಗಳ ಪದತ್ಯಾಗ ಸಧ್ಯಕ್ಕೆ ಪಕ್ಷಕ್ಕಂತೂ ಹಾನಿ ಉಂಟು ಮಾಡೊಲ್ಲವೆಂಬುದು ಅಷ್ಟೇ ಸತ್ಯ. ಆದರೆ ಇದೇ ರೀತಿಯ ಪುನಾರಾವರ್ತನೆ ಜನರಲ್ಲಿ ಮತ್ತು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದಂತು ನಿಜ. ಆಗ ಬಿಜೆಪಿಯವರು ಸಾಕ್ಷಾತ್ ಬ್ರಹ್ಮನನ್ನ ಕರೆಯಿಸಿ ಸ್ಥಾನ ಮಾನ ನೀಡಿದರೂ ಯಾವ ಪ್ರಯೋಜನವೂ ಆಗೊಲ್ಲವೆಂಬುದು ಅಷ್ಟೆ ಸತ್ಯ!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close