Girl in a jacket

ಚೋರಡಿ ಗ್ರಾಮಸ್ಥರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ..!



ಸುದ್ದಿಲೈವ್/ಶಿವಮೊಗ್ಗ

ಗ್ರಾಮಠಾಣ ಜಾಗವನ್ನ ಚೋರಡಿ ಗ್ರಾಮಪಂಚಾಯಿತಿ ವಶಪಡಿಸಿಕೊಂಡು ಬೇಲಿ ಹಾಕಬೇಕೆಂದು ಹೋರಾಟ ನಡೆಸಿದ ಗ್ರಾಮಸ್ಥರಿಗೆ ಕೊನೆಗೂ ಜಯ ಸಿಕ್ಕಿದೆ. ಗ್ರಾಮ ಠಾಣ ಜಾಗವನ್ನ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಥರೇ ಬೇಲಿ ಹಾಕಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ಸಿಇಒ ಹೇಮಂತ್ ಕುಮಾರ್, ಇಒ, ಅವಿನಾಶ್, ಕುಂಸಿ ಪಿಐ ದೀಪಕ್ ಸಾರಥ್ಯದಲ್ಲಿ ಚೋರಡಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಠಾಣ ಜಾಗವನ್ನ ಒತ್ತುವರಿ ಮಾಡಿಕೊಳ್ಳಲಾಯಿತು. ಈ ಒತ್ತುವರಿ ತೆರವುಗೊಳಿಸಿ ಗ್ರಾಪಂ ವಶಕ್ಕೆ ಪಡೆಯಬೇಕೆಂಬ ಹೋರಾಟ ಗ್ರಾಮದಲ್ಲಿ ನಡೆದಿತ್ತು‌ 

ಕೊನೆಗೂ ಈ ಹೋರಾಟಕ್ಕೆ ಜಯ ದೊರೆತಿದೆ. ಜಾಗವನ್ನ ತೆರವುಗೊಳಿಸಲಾಗಿದೆ. 50×100 ಅಡಿ ಮತ್ತು 35×100 ಅಡಿ ಜಾಗ ಗ್ರಾಮಪಂಚಾಯಿತಿಗೆ ಸೇರಿದೆ. ಅಚ್ಚರಿ ಎಂದರೆ ಈ ಜಾಗ ಗ್ರಾಮ ಪಂಚಾಯಿತಿದು ಎಂದು ಹೇಳಲು ಗ್ರಾಮಸ್ಥರೇ ಧರಣಿ ಮಾಡುವಂತಾಗಿದ್ದು ಮಾತ್ರ ಅಚ್ಚರಿ ಹುಟ್ಟಿಸಿದೆ. 

ಈ ಜಾಗದಲ್ಲಿ ಅಂಗನವಾಡಿ ಮತ್ತು ಸಮುದಾಯ ಭವನ ನಿರ್ಮಾಣ ಮಾಡಲು ಗ್ರಾಮಸ್ಥರು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು