ಸುದ್ದಿಲೈವ್/ಶಿವಮೊಗ್ಗ
ಚಿತ್ರ ಹಿಂಸೆ ಆಗ್ತಿದೆ. ಆ ಚಿತ್ರ ಹಿಂಸೆಗೆ ಹೆಣ್ಣು ಮಗಳು ತಾಯಿ ಸ್ಥಾನದಲ್ಲಿ ಇರೋರು ಯಜಮಾನರಿಗೆ ತೊಂದರೆ ಆಗಬಾರದು ಅಂತಾ ಆ ಭಾವನೆಯಲ್ಲಿ ಮೂಡಾ ಸೈಟ್‌ಗಳನ್ನ ವಾಪಸ್ ಕೊಟ್ಟಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಬಗ್ಗೆ ರೀಟ್ವೀಟ್ ಮಾಡಿದ್ದಾರೆ. 12 ವರ್ಷದ ಹಿಂದಿನ ಪ್ರಕರಣ ತಗೊಂಡು ಹೋಗಿ ಒಂದೇ ಸರಿಗೆ ನಮ್ಮ ಯಜಮಾನರಿಗೆ ನನ್ನಿಂದ ತೊಂದರೆ ಆಗ್ತಿದೆ ಎಂದು ತಿಳಿದ ಸಿಎಂ ಪತ್ನಿ 14 ಮೂಡಾ ಸೈಟ್‌ಗಳನ್ನ ವಾಪಾಸ್ ನೀಡ್ತಿದ್ದಾರೆ. ಇವತ್ತಿನವರೆಗೆ ಸಿದ್ದರಾಮಯ್ಯನವರ ಬಗ್ಗೆ ಕಳಂಕ ಬಂದಿರಲಿಲ್ಲ. ಹಿಂದುಳಿದ ವರ್ಗದವರು ಎರಡನೇ ಬಾರಿಗೆ ಸಿಎಂ ಆಗಿ ಚೆನ್ನಾಗಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಬಿಜೆಪಿಯವರ ಹಣೆಬರಹಕ್ಕೆ ಒಳ್ಳೆಯ ಕೆಲಸ ಇಲ್ಲಿಯವರೆಗೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಸಚಿವರು, ಸೈಟು ವಾಪಸ್ ಕೊಟ್ಟ ತಕ್ಷಣ ಬಿಜೆಪಿ ತಪ್ಪು ಮಾಡಿದ್ದರಿಂದ ವಾಪಾಸ್ ಕೊಟ್ಟಿದ್ದಾರೆ ಅಂದಿವೆ. ಆದರೆ ವಾಪಾಸ್ ಮಾಡಿರುವುದು ಇವರ ಹಿಂಸೆ ತಡೆಯಲಾರದೇ ಕೊಟ್ಟಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ಕಾನೂನು ಇದೆ. ಕಾನೂನು ಕ್ರಮ ಜರುಗಿಸುತ್ತದೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಕಾನೂನು ಇದೆ. ಎಫ್ ಐಆರ್ ದಾಖಲಾಗಿದೆ, ಕಾನೂನು ಪ್ರಕಾರ ಏನಾಗುತ್ತದೆ ಅದು ಆಗ್ತದೆ. ರಾಜೀನಾಮೆ ಕೊಡಬೇಕು ಅಂತಾ ರೂಲ್ಸ್ ಇದೆಯಾ ಎಂದು ಪ್ರಶ್ನಿಸಿದರು.
ರಾಜೀನಾಮೆ ಕೊಡುವವರು ಯಾರು? ಕಾನೂನು ಹೋರಾಟ ಮಾಡ್ತೇವೆ. 136 ಜನ ಶಾಸಕರು ಸಿದ್ದರಾಮಯ್ಯ ಜೊತೆ ಇದ್ದೇವೆ. ನಮಗೆ ಅದೇ ಶಕ್ತಿ, ಅವರಿಗೂ ಅದೇ ಶಕ್ತಿ. ಸಿದ್ದರಾಮಯ್ಯ ರಾಜೀನಾಮೆ ಕೇಳ್ತರಲ್ಲ ವಿಜಯೇಂದ್ರ ಅವರಿಗೆ ನಾಚಿಕೆ ಆಗಲ್ವಾ?ಸರಕಾರದ ಮೇಲೆ ಭ್ರಷ್ಟ ಸರಕಾರ ಅಂತಾರಲ್ಲ? ಇಂತಹರಿಗೆ ಏನು ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರಕಾರ ಕ್ಲೀನೆಸ್ ಸರಕಾರ ಅಂತಾ ಅಜೀಂ ಫ್ರೇಮ್ ರಾಜ್ಯದ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಹಣ ಕೊಡ್ತಿದ್ದಾರೆ. ಇಡಿ ದೇಶದಲ್ಲಿ ಬಿಜೆಪಿಯವರಿಗೆ ಇಂತಹ ಒಂದು ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ. ಸುಳ್ಳು ಆರೋಪ ಮಾಡುವುದರಲ್ಲಿ ಬಿಜೆಪಿ ನಿಸ್ಸೀಮಾವೆನಿಸಿಕೊಂಡಿದೆ. 1591 ಕೋಟಿ ರೂ ಹಣವನ್ನು ಸಿದ್ದರಾಮಯ್ಯ ಮೇಲೆ ವಿಶ್ವಾಸ ಇಟ್ಟು ಅಜೀಜ್ ಪ್ರೇಮ್ ಜೀ ಸಂಸ್ಥೆ ಕೊಟ್ಟಿದೆ. ಪ್ರತಿದಿನ 57 ಲಕ್ಷ ಮೊಟ್ಟೆ ಕೊಡ್ತಿದ್ದೇವೆ. ಇವೆಲ್ಲಾ ಸಾಧನೆ ಆಗಲಿವೆ.
ಆದರೆ ಬಿಜೆಪಿ ಟ್ವೀಟ್ ಮಾಡೋದು ದೊಡ್ಡ ಸಾದನೆ ಎಂದು ಬಣ್ಣಿಸುತ್ತಿವೆ. ವಿಜಯೇಂದ್ರ ಟ್ವೀಟ್ ಮಾಡಿದ ಅಂತಾ ಇನ್ನೊಬ್ಬ ಮಾಡ್ತಾನೆ. ಜೆಡಿಎಸ್ ನವರು ಮಾಡ್ತಾರೆ. ಅವನು ಸಿ.ಟಿ.ರವಿ ವಿಜ್ಹಲ್ ಹೊಡೆದುಕೊಂಡು ಕೂರುತ್ತಾನೆ. ಅವರಲ್ಲಿ ನಾ ಮುಂದೆ, ತಾ ಮುಂದೆ ಅಂತಾ ಟ್ವೀಟ್ ಮಾಡುವುದರಲ್ಲಿ ಕಾಂಪಿಟೇಷನ್ ಇದೆ. ಟ್ವೀಟ್ ಮಾಡುವುದೇ ದೊಡ್ಡ ಸಾಧನೆನಾ? ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಡ್ತಾರೆ. ಜನರು ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಎಫ್ ಐಆರ್ ಆಗಿದೆ ಕಾನೂನು ರೀತಿ ಹೋರಾಟ ಮಾಡ್ತಾರೆ. ಕಾನೂನು ರೀತಿಯಲ್ಲಿ ಗೆಲುವನ್ನು ಸಾಧಿಸುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಸಿಎಂ ಸಿದ್ದರಾಮಯ್ಯರವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು.