ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ಮೊಸಳೆಯ ಮರಿಯೊಂದು ಪತ್ತೆಯಾಗಿದೆ. ಮೋರಿಯಲ್ಲಿ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.
ತುಂಗ ಭದ್ರಾ ನದಿಗೆ ಸೇರ್ಪಡೆಯಾಗಿರುವ ಮೋರಿಯಲ್ಲಿ ಈ ಮೊಸಳೆ ಪತ್ತೆಯಾಗಿದೆ ಎಂಬುದು ಗ್ರಾಮಸ್ಥರ ಹೇಳಿಕೆಯಾಗಿದೆ. ಹೊಳಲೂರಿನ ಬೇಕರಿ ಹಿಂಭಾಗದ ಮೋರಿಯಲ್ಲಿ ಮೊಸಳೆ ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು. ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದ್ದಾರೆ.
ಎರಡು ಮೂರು ದಿನಗಳಿಂದ ಅರಣ್ಯ ಇಲಾಖೆ ರಕ್ಷಿಸಲು ಯತ್ನಿಸಿದರೂ ಕೆಲ ಅಡಚಣೆಯಿಂದ ಪತ್ತೆಯಾಗಿಲ್ಲ. ಕಾರ್ಯಚರಣೆ ಮೂರುದಿನದಿಂದಲೂ ಮುಂದು ವರೆದಿದೆ.