Girl in a jacket

ಮ್ಯಾಕ್ಸಿಮಮ್ ಬಟ್ಟೆ ಅಂಗಡಿಯ ಮಾಲೀಕನ ಮೇಲೆ ಹಲ್ಲೆ

 


ಸುದ್ದಿಲೈವ್/ಶಿವಮೊಗ್ಗ

ಗಾಂಧಿಬಜಾರ್ ನ ಬಟ್ಟೆ ಅಂಗಡಿಯ ಮಾಲೀಕರ ಮೇಲೆ ಹಲ್ಲೆ ನಡೆದಿದೆ.‌ ಹಲ್ಲೆಗೊಳಗಾದ ಮಾಲೀಕರನ್ನ‌ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರನ್ನ ಹೆಚ್ವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ.

ಗಾಂಧಿ ಬಜಾರ್ ನ ಬಟ್ಟೆ ಅಂಗಡಿ ಮಾಲೀಕ ಮೋಹನ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ ಬ್ಯಾಟ್ ನಿಂದ ಹಲ್ಲೆಯಾಗಿದ್ದು, ಅವರನ್ನ ಮೆಗ್ಗಾನ್ ಗೆ ಹೊರ ರೋಗಿಯಾಗಿ ದಾಖಲಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕಳುಹುಸಲಾಗಿದೆ.

ಹಲ್ಲೆ ನಡೆಸಿರುವ ವ್ಯಕ್ತಿಯನ್ನ ಬಟ್ಟೆ ಅಂಗಡಿಯ ಕೆಲಸದವರಲ್ಲೇ ಒಬ್ಬರು ಎಂದು ಶಂಕಿಸಲಾಗಿದೆ ಕಳ್ಳತನದ ಆರೋಪದ ಹಿನ್ನಲೆಯಲ್ಲಿ ಈ ಗಲಟೆನಡೆದಿದೆ ಎನ್ನಲಾಗಿದೆ.  ಬ್ಯಾಟ್ ನಿಂದ ಹಲ್ಲೆ ನಡೆಸಲಾಗಿದ್ದ ಮೋಹನ್ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. 

 ಕೋಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಯಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close