ಸುದ್ದಿಲೈವ್/ಶಿವಮೊಗ್ಗ
ಈ ಬಾರಿ ವಾಲ್ಮೀಕಿ ಜಯಂತಿಯನ್ನ ನಡೆಸಲು ಸರ್ಕಾರಕ್ಕೆ ಯಾವ ನೈತಿಕತೆಯಮೇಲೆ ಆಚರಿಸುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಹಗರಣ ನಡೆಸಿ ಬುಡಕಟ್ಟು ಜನಾಂಗದ ಹಣವನ್ನ ನುಂಗಿದ ಸರ್ಕಾರ ಯಾವ ನೈತಿಕತೆಯ ಮೇಲೆ ಈ ಬಾರಿಯ ಜಯಂತಿಯನ್ನ ನಡೆಸುತ್ತಿದೆ ಎಂದು ಕೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಚಂದ್ರಶೇಖರನ್ ಹಗರಣದಲ್ಲಿ ಸಚಿವರ ಹೆಸರು ಬ ರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಎಸ್ಐಟಿ ರಚನೆ ಮಾಡಿ ಸರಕಾರ ಪ್ರಕರಣ ಮುಚ್ಚಿಹಾಕಲು ಯತ್ನಿಸಿತ್ತು. ಆದರೆ ಜಾರಿನಿರ್ದೇಶನಾಲಯ ಸಚಿವ ನಾಗೇಂದ್ರರನ್ನೇ ಬಂಧಿಸಿದ್ದು ಎರಡು ದಿನಗಳ ಹಿಂದೆ ಈಗ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. 187 ಕೋಟಿ ಹಣದಲ್ಲಿ 84 ಕೋಟಿ ಹಣ ಹಗರಣದ ಲೆಕ್ಕಾಚಾರವನ್ನ ಬಯಲು ಮಾಡಲಾಗಿದೆ ಎಂದರು.
ಆದರೆ ಬಳ್ಳಾರಿ ಮತ್ತು ತೆಲಂಗಾಣ ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂದು ಇಡಿ ತಿಳಿಸಿದೆ. ಮತದಾರರಿಗೆ ಹಣ ಹಂಚಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರಿಗೆ ತಲಾ 10 ಸಾವಿರ ರೂ ಹಣ ಹಂಚಲಾಗಿದೆ. ಕಾಂಗ್ರೆಸ್ ರಚಿಸಿರುವ ಎಸ್ಐಟಿಯಲ್ಲಿ ಇದರ ಉಲ್ಲೇಕವಿಲ್ಲ. ಇದನ್ನ ಸಿಬಿಐಗೆ ಕೊಡಬೇಕು ಎಂಬ ನಮ್ಮವರ ಬೇಡಿಕೆ ಇತ್ತು ಎಂದರು.
ಆದರೆ ಎಸ್ಐಟಿ ಇವೆಲ್ಲಾ ಅಂಶವನ್ನ ಕೈಬಿಟ್ಟಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಪತ್ನಿಯ ಹೇಳಿಕೆಯನ್ನ ಮೂರು ಬಾರಿ ತಿದ್ದಲಾಗಿದೆ. ಡಿವೈಎಸ್ಪಿ ಮೂಲಕ ಬರೆಯಿಸಿ ಸಹಿ ಹಾಕಿಸಲಾಗಿದೆ. ನಾಗೇಂದ್ರ ಅವರ ಕೈಬಿಟ್ಟಿದ್ದು ಚಂದ್ರಶೇಖರನ್ ಪತ್ನಿ ಹೇಳಿಕೆ ಮೇಲೆ ಕೈಬಿಡಲಾಗಿದೆ ಎಂದು ಸಿಎಂ ತಿಳಿಸಿದ್ದರು. ಡೆತ್ ನೋಟ್ ಸಿಗದಿದ್ದರೆ. ಈ ಪ್ರಕರಣ ಮುಚ್ಚಿಹಾಕಲಾಗುತ್ತಿತ್ತು. ಬಡವಿದ್ಯಾರ್ಥಿ, ಬಡವಿದ್ಯಾರ್ಥಿನಿ, ಹಾಸ್ಟೆಲ್ ನಿರ್ವಹಣೆಗೆ ಇಟ್ಟ ಹಣವನ್ನ ಮಾರ್ಚ್ ಕೊನೆಯಲ್ಲಿ ಕರ್ಚು ಮಾಡಬೇಕು. 187 ಕೋಟಿಯನ್ನ ಮಾರ್ಚ ಮುಗಿದರೂ ಬಳಸಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಹಣ ದರೋಡೆ ಮಾಡಲು ಚುನಾವಣೆ ಹಿನ್ನಲೆಯಲ್ಲಿ ಬ್ಲೂಪ್ರಿಂಟ್ ತೆಗೆದಂತೆ ತೆಗೆಯಲಾಗಿದೆ. ಅಕೌಂಟ್ ಬದಲಾವಣೆ ಮಾಡಿ ಕಮಿಷನ್ ಹಂಚಿ ಹಣವನ್ನ ಬಳಸಿಕೊಳ್ಳಲಾಗಿದೆ. ಮೂಡಾ ಹಗರಣವಿರಬಹುದು. ವಕ್ಫ್ ಬೋರ್ಡ್ ಹಗರಣ, ಅಭಿವೃದ್ಧಿ ಶೂನ್ಯತೆ, ಗುತ್ತಿಗೆದಾರರು ಹಣಪಡೆಯದೆ ಆತ್ಮಹತ್ಯೆ ಪ್ರಕರಣ ಅಂಗನವಾಡಿ ಸಹಾಯಕಿಯರಿಗೆ ಸರಿಯಾದ ಸಂಬಳ ಸಿಕ್ತಾ ಇಲ್ಲ. ಆಡಳಿತವೇ ಇಲ್ಲವಾಗಿದೆ. ಸುಳ್ಳು, ಹಗರಣದಲ್ಲಿ ಪಾಲುಗಾರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ವಾಲ್ಮೀಕಿ ಜನಾಂಗದ ಕ್ಷಮೆ ಕೇಳಬೇಕು ಮತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಸ್ವತಃ ಅಪರಾಧಿಯಲ್ಲಿ ಭಾಗಿಯಾದ ಆರೋಪಿ ನಾಗೇಂದ್ರ ಇಡಿ ಬಲವಂತವಾಗಿ ಅರೆಸ್ಟ್ ಮಾಡಿದೆ ಎಂಬ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರು ಈ ಹೇಳಿಕೆ ನ್ಯಾಯಾಲದ ಉಲ್ಲಂಘನೆಯಾಗಲಿದೆ. ಇಡಿ ಏನೋನೋ ಮಾಡಲು ಸಾಧ್ಯವಿಲ್ಲ ಎಂದರು.
ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಹೆಸರು ಇನ್ನೆರಡು ಮೂರು ದಿನಗಳಲ್ಲಿ ಕ್ಲಿಯರ್ ಆಗಲಿದೆ. ಯಾವ ಗೊಂದಲವೂ ಇರಲ್ಲ ಎಂದರ ಶಾಸಕರು ತೀರ್ಥಹಳ್ಳಿ ತಹಶೀಲ್ದಾರ್ ನಿಧನ ನೋವಾಗಿದೆ. ಅವರು ಏಸಿಯಾಗಿ ಪ್ರಮೋಷನ್ ಆಗಲಿದ್ದರು. ಚೆನ್ನಮ್ಮಾಜಿ ರಥ ಬಂದಾಗ ಚೆನ್ನಮ್ಮರ ವಂಶಸ್ತರು ಎಂದು ನೆನಪಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಚೆನ್ನಬಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ, ದತ್ತಾತ್ರಿ, ಶಿವರಾಜ್, ಜ್ಞಾನೇಶ್ವರ್, ಚಂದ್ರಶೇಖರ್ ಹಾಗೂ ಅಣ್ಣಪ್ಪ ಉಪಸ್ಥಿತರಿದ್ದರು.