Girl in a jacket

ಪ್ರಾವಿಜನ್ ಸ್ಟೋರ್ ನಲ್ಲಿ ಕಳ್ಳತನ



ಸುದ್ದಿಲೈವ್/ಶಿವಮೊಗ್ಗ

ನಗರದ ಗಾಂಧಿ ಬಜಾರ್ ನಲ್ಲಿರುವ ಪ್ರತಿಷ್ಠಿತ ಪ್ರಾವಿಜನ್ ಸ್ಟೋರ್ ನಲ್ಲಿ ಕಳ್ಳತನ ನಡೆದಿದೆ. ಗಾಂಧಿ ಬಜಾರ್ ನ ಪ್ರತಿಷ್ಠಿತ ಪ್ರಾವಿಜನ್ ಸ್ಟೋರ್‌ನ ಮೂರನೇ ಮಹಡಿಯ ಗ್ರಿಲ್ ಮುರಿದು ಲಕ್ಷಾನುಗಟ್ಟಲೆ ನಗದು ಹಾಗೂ ಬೆಳ್ಳಿ ನಾಣ್ಯ ಕಳುವಾಗಿದೆ.

ಪ್ರಾವಿಜನ್ ಸ್ಟೋರ್ ಪಕ್ಕದಲ್ಲಿರುವ ಸಿದ್ದಪ್ಪ ಕಾಂಪ್ಲೆಕ್ಸ್ ಮೂಲಕ ಟೆರೆಸ್ ಗೆ ಬಂದು ಟೆರೆಸ್ ನ ಗ್ರಿಲ್ ಮುರಿದು, ಅಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ, ಡಿವಿಆರ್ ಹಾಗೂ ಕೇಬಲ್  ಗಳನ್ನ ಹಾನಿಗೊಳಿಸಿ ಅಲ್ಲಿಂದ ಪ್ರಾವಿಜ್ ಸ್ಟೋರ್ ಗೆ ಬಂದು ಅಲ್ಲಿದ್ದ 1,10,000 ರೂ. ಹಾಗೂ 10 ಸಾವಿರ ರೂ. ಬೆಲೆಬಾಳುವ ಬೆಳ್ಳಿ ಕಾಯಿನ್ ನ್ನ ಕಳುವು ಮಾಡಲಾಗಿದೆ. 

ವೀರಭದ್ರ ಪ್ರಾವಿಜನ್ ಸ್ಟೋರ್ ನ ಮಾಲೀಕ ವಿಜಯ ಕುಮಾರ್ ಅಂಗಡಿ ಕಳ್ಳತನದ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close