ಸುದ್ದಿಲೈವ್/ಶಿವಮೊಗ್ಗ
ಇ-ಸ್ವತ್ತಿನಿಂದ ಉಂಟಾಗಿರುವ ಅನಾನುಕೂಲದ ವಿರುದ್ಧ ಮಲೆನಾಡು ಕೇಸರಿ ಪಡೆ ಸಿಡಿದಿದ್ದಿದೆ. ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘಟನೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನಿರ್ಲಕ್ಷತನ ಮತ್ತು ಪಾಲಿಕೆಯ ಭ್ರಷ್ಠಾಚಾರದಿಂದ ಜನಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ರಾಜು ಅವರ ನೇತೃತ್ವದಲ್ಲಿ ಸಂಘಟನೆ ಮನವಿ ಸಲ್ಲಿಸಿದೆ. ಪ
ರಾಜ್ಯ ಸರ್ಕಾರವು ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಸರ್ಕಾರಿ ಮತ್ತು ಖಾಸಗಿ ಸ್ವತ್ತುಗಳು ಅಕ್ರಮ ಪರಭಾರೆ ಮತ್ತು ಖಾತೆಯಾಗುವುದನ್ನು ತಡೆಗಟ್ಟಲು 2018 ರಿಂದ ಇ-ಸ್ವತ್ತನ್ನು ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ಅಳವಡಿಸಲು ಸುತ್ತೋಲೆಯನ್ನು ಹೊರಡಿಸಿತ್ತು.
ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಜಾರಿಗೊಳಿಸದೇ ಇರುವುದನ್ನು ಗಮನಿಸಿ 2023 ರಂದು ತಂತ್ರಾಂಶವನ್ನು ಅಳವಡಿಸಲೇಬೇಕೆಂದು ಸರ್ಜಾರ ಸೂಚಿಸಿದರ ಪರಿಣಾಮ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು 15ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡು ಜಾಗೃತಿ ಕಾರ್ಯ ಪ್ರಾರಂಬಿಸಿತು.
ಅನೇಕ ಖಾತೆದಾರರು ಸಾವಿರಾರು ಸಂಖ್ಯೆಯಲ್ಲಿ ಅವರು ಸೂಚಿಸಿರುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿಯನ್ನೂ ಪಡೆದಿರುತ್ತಾರೆ. ಆದರೆ ಈಗ ಮಹಾನಗರ ಪಾಲಿಕೆಯು ಕೊಟ್ಟ ದಾಖಲೆಗಳು ಅಪ್ಲೋಡ್ ಆಗಲು ತಾಂತ್ರಿಕ ದೋಶವೆಂದು ಸಬೂಬು ಹೇಳುತ್ತಾ ಮತ್ತೆ 2 ಲಕ್ಷಕ್ಕೂ ಹೆಚ್ಚು ಖಾತೆದಾರರಿಗೆ ಪುನ: ದಾಖಲಾತಿಗಳನ್ನು ಕೊಡಿ ಎಂದು ಪಾಲಿಕೆ ತಿಳಿಸುತ್ತಿದೆ.
ಈಗ ಸರ್ಕಾರದ ಆದೇಶದಂತೆ ಇ-ಸ್ವತ್ತು ಇಲ್ಲದೇ ನೋಂದಣಿ ಆಗದೇ ಇರುವುದರಿಂದ ತುರ್ತಾಗಿ ಮದುವೆ, ಆಸ್ಪತ್ರೆ ಖರ್ಚು ಭರಿಸಲು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಲು ಸಾಲದ ಅಗತ್ಯ ಇರುವವರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ನಿವೇಶನ ಕೊಳ್ಳುವವರಿಗೆ ಮತ್ತು ಮಾರಾಟ ಮಾಡುವವರಿಗೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಆಗದೇ ಪರಿತಪಿಸುತ್ತಿದ್ದಾರೆ.
ಇದರಿಂದ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಸಾಲಗಳು ಸಿಗದೆ ಆರ್ಥಿಕ ವ್ಯವಸ್ಥೆಯಮೇಲೆ ಪರಿಣಾಮ ಬೀರುತ್ತಿದೆ. ನೋಂದಣಿಗೆ ಅಗತ್ಯ ಇರುವವರಿಗೆ ಆದ್ಯತೆ ಮೇರೆಗೆ ನಿಗದಿತ ಸಮಯದ ಒಳಗೆ ಇ-ಸ್ವತ್ತು ನೀಡಲು ಸೂಚಿಸಬೇಕು ಎಂದು ಸಂಘಟನೆ ಡಿಸಿಯನ್ನ ಒತ್ತಾಯಿಸಿದೆ.
ಮಹಾನಗರ ಪಾಲಿಕೆಯಲ್ಲಿ ಇದನ್ನು ಗಮನಿಸಲು ಹಾಗೂ ಸಾರ್ವಜನಿಕ ದೂರನ್ನು ಸ್ವೀಕರಿಸಲು ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಹಾಗೂ ಈಗಾಗಲೆ ಇ-ಸ್ವತ್ತು ಮಾಡಿಕೊಡಲು ಹಣದ ಬೇಡಿಕೆ ಇಡುತ್ತಿರುವ ನೌಕರರ ಮೇಲೆ ನಿಗಾ ವಹಿಸಬೇಕು. ಹಿಂದೆ ಕೊಟ್ಟ ದಾಖಲಾತಿಗಳನ್ನು ನಿಯಮಾನುಸಾರ ಅಪ್ಲೋಡ್ ಮಾಡದೆ ಕರ್ತವ್ಯ ಲೋಪವ್ಯಸಗಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.