ಭದ್ರಾವತಿಯಲ್ಲಿ ಮುಂದುವರೆದ ಗಾಂಜಾ ದಾಳಿ, ಕೆಜಿಗಟ್ಟಲೆ ಗಾಂಜಾ ಪತ್ತೆ!


ಸುದ್ದಿಲೈವ್/ಶಿವಮೊಗ್ಗ

ಹೊಳೆಹೊನ್ನೂರು, ಭದ್ರಾವತಿ ಹೊಸಮನೆ ಪೊಲೀಸರ ಖಡಕ್ ದಾಳಿ ಬೆನ್ನಲ್ಲೇ ಭದ್ರಾವತಿ ಉಪವಿಭಾಗದ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಗಾಂಜಾ ದಾಳಿ ನಡೆದಿದೆ. ಹೊಳೆಹೊನ್ನೂರಿನಲ್ಲಿ 5 ಕೆಜಿಗೂ ಅಧಿಕ ಹಾಗೂ ನ್ಯೂಟೌನ್ ನಲ್ಲಿ 1 ಕೆಜಿಗೂ ಅಧಿಕ ಗಾಂಜಾ ಪತ್ತೆಯಾದರೆ

ಹಳೇನಗರ ಪೊಲೀಸ್ ಠಾಣೆಯಲ್ಲಿ 6 ಜನ ಆರೋಪಿಗಳನ್ನ ಬಂಧಿಸಲಾಗಿದೆ. 1.300 ಕೆಜಿ ಗಾಂಜಾ ಪತ್ತೆಯಾಗಿದೆ. ಇಬ್ಬರು ಬೈಕ್ ನಲ್ಲಿ ಬಂದ ವ್ಯಕ್ತಿಗಳು ಗಾಂಜಾ ಮಾರಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿದ ಖಾಕಿಪಡೆ ಭರ್ಜರಿ ಭೇಟೆಯನ್ನೇ ಆಡಿದೆ.  

ನಿನ್ನೆ ಮಧ್ಯಾಹ್ನ ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆ ಹೊನ್ನೂರು ಕ್ರಾಸ್ ನಿಂದ ಸೀಗೆಬಾಗಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ  2 ದ್ವಿಚಕ್ರವಾಹನದಲ್ಲಿ ಬಂದ  ಅಪರಿಚಿತ ವ್ಯಕ್ತಿಗಳು ಮಾದಕ ವಸ್ತು ಗಾಂಜಾವನ್ನು  ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಲಭಿಸಿದೆ.  

ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ, ಹಳೇನಗರ ಪೊಲೀಸ್ವಠಾಣೆಯ ಪಿ ಎಸ್ ಐ ಚಂದ್ರಶೇಖರ ನಾಯ್ಕ್ ಮತ್ತು ಸಿಬ್ಬಂಧಿಗಳ ತಂಡ ಸ್ಥಳಕ್ಕೆ ಧಾವಿಸಿತ್ತು.‌ 

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಾದ ಮಂಗಳೂರಿನ ಕೃಷ್ಣಾಪುರದ 1) ನವೀನ್ ಯಾನೆ ನವೀನ್ ಬಾಬು ಬಿ, ಯಾನೆ ಬಿ ಡಿ ನವೀನ, (24 ) 2) ಭದ್ರಾವತಿಯ ಕಾಳಿಂಗನಹಳ್ಳಿಯ

ದರ್ಶನ್ (19), 3) ಭದ್ರಾವತಿಯ ಕಂಚಿಬಾಗಿಲಿನ ವಿಷ್ಣು ಗವಾಡೆ ಎಂ ವಿ ಯಾನೆ ಬೆಣ್ಣೆ (24),  4) ಭದ್ರಾವತಿ ಹೊಸಮನೆಯ ಮಂಜು ಯಾನೆ ಸಣ್ಣ ಮಂಜ ಯಾನೆ ಮಂಜುನಾಥ, (24), 5) ಚಿಕ್ಕಮಗಳುರಿನ ಸಿಡಕನಹಳ್ಳಿ ನಿವಾಸಿ ಸಚಿನ್ ಎಸ್, (23),  

6) ಭದ್ರಾವತಿ ಹೊಸಮನೆಯ ಪ್ರಸಾದ್ ಎಸ್, (23) ವರ್ಷ, ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿತರಿಂದ ಅಂದಾಜು ಮೌಲ್ಯ 30,000/-  ರೂ ಗಳ ಒಟ್ಟು 1 ಕೆಜಿ 300 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close