Girl in a jacket

ವಾಹನ ಸಮೇತ ವ್ಯಕ್ತಿ ನೀರುಪಾಲು-ಅಗ್ನಿಶಾಮಕದಳದಿಂದ ಶೋಧಕಾರ್ಯ

 


ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಸುರಿದ ಮಳೆಯಿಂದಾಗಿ ಎಡವಾಲ ಮತ್ತು ಹಿಟ್ಟೂರು ನಡುವಿನ ಹಳ್ಳದ ಸೇತುವೆ ಮುಳಗಿದ್ದು, ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿಯೇ ಬೈಕ್ ನಲ್ಲಿ ಮುಂದೆ ಸಾಗಲು ಯತ್ನಿಸದ ವ್ಯಕ್ತಿ ನೀರು ಪಾಲು ಆಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಯಡವಾಲ ಮತ್ತು ಹಿಟ್ಟೂರು ಕ್ರಾಸ್ ಮಧ್ಯೆ ಇರುವ ಕೊಂಡಜ್ಜಿ ಹಳ್ಳ ನಿನ್ನೆ ರಾತ್ರಿಯ ಮಳೆಯಿಂದಾಗಿ ಮೈದುಂಬಿಕೊಂಡಿದೆ. ಕೊಂಡಜ್ಜಿ ಹಳ್ಳದ ಸೇತುವೆ ಮುಳುಗಿದೆ.
ಸೇತುವೆ ಮುಳುಗಿದ ಬೆನ್ನಲ್ಲೇ ಗ್ರಾಮಸ್ಥರೆಲ್ಲರೂ ನೀರಿನಲ್ಲಿಯೇ ಮುಂದೆ ಸಾಗಲು ಯತ್ನಿಸಿದ್ದಾರೆ. ಅದರಂತೆಯೇ  ಬ್ರಿಡ್ಜ್ ಮೇಲೆ ಬೈಕ್ ಚಾಲನೆ ಮಾಡಿಕೊಂಡು ಬಂದ ಬೈಕ್ ಚಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ನ್ಯಾಮತಿ ತಾಲೂಕು  ಚಿನ್ನಿಕಟ್ಟೆಗೆ ಹೋಗುವಾಗ ಈ ಅವಘಡ ಸಂಭವಿಸಿದೆ.  ನೀರುಪಾಲಾಗಿರುವ ವ್ಯಕ್ತಿಯನ್ನ ಇಕ್ಬಾಲ್ (40) ವರ್ಷ ಎಂದು ಗುರುತಿಸಲಾಗಿದೆ. ಚಿನ್ನಿಕಟ್ಟೆ ವಾಸಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ತಿಳಿದು ಬಂದಿದೆ.



ಬೆಳಿಗ್ಯಿಂದ ಅಗ್ನಿಶಾಮಕದಳದಿಂದ ಶೋಧಕಾರ್ಯ ಆರಂಭಗೊಂಡಿದೆ. ಆದರೆ ಇಕ್ಬಾಲ್ ಅವರ ಸುಳಿವುಸಿಕ್ಕಲ್ಲ. ಮಾಹಿತಿಪ್ರಕಾರ ಸೇತುವೆ ಮುಕ್ಕಾಲು ಭಾಗ ಇಕ್ಬಾಲ್ ಪಾಸ್ ಆಗಿದ್ದಾರೆ. ಯಾವಾಗ ಸೈಲನ್ಸರ್ ಒಳಗೆ ನೀರು ಹೋದ ಪರಿಣಾಮ ಬೈಕ್ ಆಫ್ ಆಗಿದೆ. ನೀರಿನ ರಭಸಕ್ಕೆ ಇಬ್ವರು ಕೊಚ್ಚಿಕೊಂಡು ಹೋಗಿದ್ದಾರೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close