ಸುದ್ದಿಲೈವ್/ಶಿವಮೊಗ್ಗ
ಈ ಬಾರಿ ದೀಪಾವಳಿಗೆ ಪಟಾಕಿಗಳ ಮಾರಾಟ ಫ್ರೀಡಂ ಪಾರ್ಕ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮೊದಲ ಬಾರಿಗೆ ಪಟಾಕಿ ಮಾರಲು ಫ್ರೀಡಂ ಪಾರ್ಕ್ ನಲ್ಲಿ ಸ್ಟಾಲ್ ಗಳನ್ನ ಹಾಕಲಾಗಿದೆ.
ಕಳೆದ ಬಾರಿ ಸೈನ್ಸ್ ಮೈದಾನ ಮತ್ತು ನೆಹರೂ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಈ ಸ್ಥಳಗಳಲ್ಲಿ ಪಟಾಕಿ ವ್ಯಾಪಾರವನ್ನ ಸ್ಥಗಿತಗೊಳಿಸಿ, ಫ್ರೀಡಂ ಪಾರ್ಕ್ ನಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಡಿಸಿ ಕಚೇರಿಯಲ್ಲಿ ಪರವಾನಗಿ ಪಡೆದವರಿಗೆ ಪಟಾಕಿ ಸ್ಟಾಲ್ ಹಾಕಲು ಅವಕಾಶ ನೀಡಲಾಗಿದೆ.
84 ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಸಧ್ಯಕ್ಕೆ 69 ಸ್ಟಾಲ್ ಗಳಲ್ಲಿ ಪಟಾಕಿ ವ್ಯಾಪಾರ ಹಾಕಲಾಗಿದೆ. ಈ ಅಂಗಡಿಗಳಿಗೆ ತಹಶೀಲ್ದಾರ್ ಗಿರೀಶ್ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರವಾನಗಿ, ಅಂಗಡಿ ಮಾಲೀಕರ ಗುರುತಿನ ಚೀಟಿ, ವೆಂಡರ್ ಗಳ ಗುರತಿನ ಚೀಟಿ, ಬಾಲಕಾರ್ಮಿಕರನ್ನ ನೇಮಿಸಿಲ್ಲ ಎಂಬುದರ ಬಗ್ಗೆ ತಪಾಸಣೆ ನಡೆಸಿದ್ದಾರೆ.
ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆ ಮತ್ತು ವಾಹನಗಳನ್ನ ಸ್ಟಾಲ್ ಬಳಿ ಇಟ್ಟುಕೊಳ್ಳದಂತೆ ಸೂಚನೆ ನೀಡಲಾಯಿತು.
ಫೈರ್ ಬಕೆಟ್ ಎಸ್ಟಿಗ್ವಿಷನ್, ಡ್ರಮ್ ಬಕೆಟ್ ನಲ್ಲಿ ಮರಳಿರಬೇಕು ಒಂದು ಅಂಗಡಿಯಿಂದ ಇನ್ನೊಂದು ಪಟಾಕಿ ಅಂಗಡಿಗೆ 8-10 ಅಡಿ ದೂರವಿರಬೇಕು. ತಗಡು ಶೀಟಲ್ಲೇ ಅಂಗಡಿ ಕಟ್ಟಿಕೊಳ್ಳಬೇಕಿದೆ.