Girl in a jacket

ಕಳಪೆ ಕಾಮಗಾರಿಯ ಆರೋಪ-ಇಂಜಿನಿಯರ್ ನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು



ಸುದ್ದಿಲೈವ್/ಹೊಳೆಹೊನ್ನೂರು 

ಅರಬಿಳಚಿಯಲ್ಲಿ ನಿರ್ಮಾಣವಾಗುತ್ತಿರುವ ಹೆರಿಗೆ ಆಸ್ಪತ್ರೆ ಕಟ್ಟಡ ಕಳಪೆಯಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಸ್ಥಳಕ್ಕೆ ಬೇಟಿ ನೀಡಿದ ಆರೋಗ್ಯ ಇಲಾಖೆ ಇಂಜಿನಿಯರ್‌ನನ್ನು ತರಾಟೆಗೆ ತೆಗದುಕೊಂಡು ಮಾತಿನ ಚಕಮಕಿ ನಡೆಸಿದರು. 

ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬುಧವಾರ ಶಾಸಕಿ ಶಾರದ ಪರ‍್ಯಾನಾಯ್ಕ್ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಶಾಸಕಿ ಶಾರದ ಪರ‍್ಯಾ ನಾಯ್ಕ್ ಕಟ್ಟಡದ ಗೋಡೆಯನ್ನು ಬೆರಳಿನಿಂದ ಕೆರೆದು ಪರೀಕ್ಷಿಸಿದರು. ಗೋಡೆ ಪದರ ಕಳಚಿ ಬರುವುದನ್ನು ಕಂಡು ಅಲ್ಲೆ ಪಕ್ಕದಲ್ಲಿದ್ದ ಆರೋಗ್ಯ ಇಲಾಖೆ ಇಂಜಿನಿಯರ್ ಹರೀಶ್‌ನನ್ನು ತಿರ್ವವಾಗಿ ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರು ಮಾತನಾಡಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಮಾಗಾರಿಯ ಇಂಜಿನಿಯರ್ ಅನ್ನು ಕೂಡಲೆ ಅಮಾನತ್ತು ಮಾಡಿ ಕಟ್ಟಡದ ದಕ್ಷತೆಗಾಗಿ ಗುಣ ನಿಯಂತ್ರಣ ಪ್ರಾಧಿಕಾರಕ್ಕೆ ಅಧಿಕಾರಿಗಳಿಂದ ಪರೀಕ್ಷೆ ಮಾಡಿಸಬೇಕೆಂದು ಶಾಸಕರಿಗೆ ಒತ್ತಾಯಿಸಿದರು. ಕಟ್ಟಡದ ಗೀಲಾವ್ ಅನ್ನು ಸಂಪೂರ್ಣವಾಗಿ ಕಿತ್ತು ಹೊಸದಾಗಿ ಮಾಡಬೇಕು ಪಟ್ಟುಹಿಡಿದರು. ದೀಪಾವಳಿ ನಂತರ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. 

ಮಾಜಿ ಶಾಸಕ ಅಶೋಕ ನಾಯ್ಕ್ ಬೇಟಿ ನೀಡಿ ತಪಾಸಣೆ ನಡೆಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಗುತ್ತಿಗೆದಾರನಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ವಿಚಾರಿಸಿದರು. ಹೊಸ ಕಟ್ಟಡ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕೆಲ ಕಾಮಗಾರಿಗಳನ್ನು ನಡೆಸಿದರೆ ಸೋರಿಕೆ ಸಮಸ್ಯೆ ಅತೋಟಿಗೆ ಬರುತ್ತದೆ. ಸಂಸದ ರಾಘವೇಂದ್ರ ಬಳಿ ಮಾತನಾಡಿ ಕಟ್ಟಡದ ಮೇಲೆ ತಗಡು ಅಳವಡಿಸಲು ಪ್ರಯತ್ನಿಸುವುದಾಗಿ ಗ್ರಾಮಸ್ಥರನ್ನು ಸಮಾದಾನ ಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close