Girl in a jacket

2026 ರಿಂದ ಕೆಎಫ್ ಡಿಗೆ ವ್ಯಾಕ್ಸಿನ್-ದಿನೇಶ್ ಗುಂಡೂರಾವ್

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಅರಳಗೋಡಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಕೆಎಫ್ ಡಿ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹೊಸನಗರ, ಶಿರಸಿ, ತೀರ್ಥಹಳ್ಳಿ ಸಾಗರ ತಾಲೂಕುಗಳಲ್ಲಿ ಅತಿಹೆಚ್ಚಾಗಿ ಕಾಡುವ ಕಾಯಿಲೆ ಕಳೆದ 7-8 ವರ್ಷದಲ್ಲಿ ಉಲ್ಬಣವಾಗಿತ್ತು. 


ಸಭೆಯಲ್ಲಿ ಡಿಹೆಚ್ ಒ ಡಾ.ನಟರಾಜ್ ಮಾತನಾಡಿ 2019 ರಲ್ಲಿ  109 ಜನರಿಗೆ ಅರಳಗೋಡಿನಲ್ಲಿ ಕೆಎಫ್ ಡಿ ಪಾಸಿಟಿವ್ ಪತ್ತೆಯಾಗಿತ್ತು.  12 ಸಾವಾಗಿದೆ.‌ ಮೂರು ಉತ್ತರಕನ್ನಡ ದಲ್ಲಿ ಸತ್ತಿರುವುದು ಮಾಹಿತಿ ನೀಡಿದರು. 

ಸಭೆಯಲ್ಲಿ ಇದ್ದ ಸಾರ್ವಜನಿಕರು 2019 ರಲ್ಲಿ ಅರಳಗೋಡಿದಲ್ಲಿ  23 ಡೆತ್ ಆಗಿದೆ .   14, ತಾಲಗುಪ್ಪ 1 ಕಾರ್ಗಲ್ ನಲ್ಲಿ ಮೂರು ಸಾವುವಾಗಿದೆ. ಪಕ್ಕದ  ಹಿರೇಮನೆಯಲ ಈ ವರ್ಷ ಏಪ್ರಿಲ್  7 ಜನರಿದ್ದು ಈಗ  ವಾಸಿಯಾಗಿದೆ ಎಂದರು. 

ವಿಡಿಎಲ್ ಅಧಿಕಾರಿ ಮಾತನಾಡಿ, 2023-24 ರಲ್ಲಿ  333 ಕೇಸ್ ಪತ್ತೆಯಾಗಿದೆ. 1 ಸಾವಾಗಿದೆ. ನವೆಂಬರ್ ನಿಂದ ಟಿಕ್ ಸರ್ವೆ ಆಗಲಿದೆ ಲಾರ್ವಾ ಇದೆಯೋ ಅಥವಾ ಅಡಲ್ಟ್ ಇದೆಯೋ ಎಂದು ತಪಾಸಣೆ ಮಾಡಲಾಗುವುದು ಎಂದರು. 

ಐಇಸಿ ಮಾಡಲಾಗುವುದು ಜನರಿಗೆ ಜ್ವರ ಬಂದರೆ ಸರ್ಕಾರಿ ಆಸ್ಪತ್ರೆಗೆ ಸೇರಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಸೇರಿದರೆ ಕಷ್ಟವಾಗುತ್ತದೆ ಎಂದರು. ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಪರ್ಮನೆಂಟ್ ವಾಕ್ಸಿನ್ ತರಬೇಕು. ಇದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೈದ್ರಾಬಾದ್ ಸಂಸ್ಥೆ ಮೆಡಿಸಿನ್ ತಯಾರಿಸಲು ಮುಂದು ಬಂದಿದೆ.  ಇದು ಸಿಎಸ್ಆರ್ ಫಂಡ್ ನಿಂದ 10 ಕೋಟಿ ಕೊಟ್ಟು ಔಷಧಿ ತಯಾರಿಸಲು ಸೂಚಿಸಲಾಗಿದೆ 2026 ಕ್ಕೆ ಔಷಧಿ ತಯಾರಿಸಿಕೊಡಲಾಗುವುದಾಗಿ  ಸಂಸ್ಥೆ ಹೇಳಿದೆ.  ಬೇರೆ ಸಂಸ್ಥೆಗಳು ಮುಂದು ಬರುತ್ತಿಲ್ಲ. ಹಾಗಾಗಿ ಹೈದ್ರಾಬಾದ್ ಕಂಪನಿಗೆ ನೀಡಲಾಗಿದೆ ಎಂದರು. 

ಕಳೆದ ಬಾರಿ ಶಿರಸಿ ಇರಲಿಲ್ಲ ಈ ಬಾರಿ ಹೆಚ್ಚಾಗಿದೆ. ತೀರ್ಥಹಳ್ಳಿಯಲ್ಲಿ 24 ಕೇಸ್ ಬಂದಿದೆ.  ತೀರ್ಥಹಳ್ಳಿಯಿಂದ ಹರಡಿದೆ. ವಿಜಯಕುಮಾರ್ ಮಾಜಿ ಗ್ರಾಪಂ ಉಪಾಧ್ಯಕ್ಷ, ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಿ, ಸಂಚಾರಿ ಆರೋಗ್ಯ ಆಂಬ್ಯುಲೆನ್ಸ್  ಆರಂಭಿಸಲು ಸಭೆಗೆ ಕೋರಿದರು. 

2028-19 ರಲ್ಲಿ ಸಾವಾಗಿದೆ 53 ಜನ ಸತ್ತಿದ್ದಾರೆ 23 ಜನ ಸಾವಾಗಿದೆ ಉಳಿದವರು ಆಸ್ಪತ್ರೆಗೆ ಸೇರದೆ ಸಾವಾಗಿದೆ ಎಂದರು. ಆಗ ಇಬ್ಬರು ಡಾಕ್ಟರ್ ಇದ್ದರು ಈಗ ಒಬ್ವರಿದ್ದಾರೆ. ನರ್ಸ್ ಗಳು ಒಬ್ಬರಿದ್ದಾರೆ. ಈ ಸಿಬ್ಬಂದಿಗಳ ಕೊರತೆ ನೀಗಿಸುವಂತೆ ಕೋರಿದರು. 

ಶಾಸಕ ಗೋಪಾಲ್ ಜಿಲ್ಲೆಯಲ್ಲಿ ಲ್ಯಾಬ್ ಬೇಕಿದೆ. ಸಂಶೋಧನ ಕೇಂದ್ರ ರೀತಿ ಲ್ಯಾಬ್ ಬೇಕಿದೆ ಎಂದು ಶಾಸಕ ಗೋಪಾಲ ಕೃಷ್ಣ ಸಭೆಗೆ ತಿಳಿಸಿದರು. ಇದಕ್ಕೆ ವಿಡಿಎಲ್ ಅಧಿಕಾರಿ ಮಾತನಾಡಿ  ಮಂಕಿ ಮತ್ತು ಟಿಕ್ಸ್ ಗೆ ಪೂಣೆಗೆ ಹೋಗಬೇಕಿದೆ ಎಂದರು.  ಶಿವಮೊಗ್ಗದಲ್ಲಿ ಲ್ಯಾಬ್ ಬೇಡ ಸಾಗರದಲ್ಲಿ ಆರಂಭಿಸಿ ಇದರಿಂದ ಶಿರಸಿ ಸಿದ್ದಾಪುರದವರಿಗೆ ಅನುಕೂಲವಾಗಲಿದೆ ಎಂದರು.‌  

ಮರಣ ಹೊಂದಿದವರಿಗೆ ಕಡಿನೆ ಹಣ ಬಂದಿದೆ ಕನಿಷ್ಟ 10 ಲಕ್ಷ ರೂ. ಪರಿಹಾರ ಬೇಕು. 16 ಜನರಿಗೆ ಪರಿಹಾರವೇ ಬಂದಿಲ್ಲ. ಮಂಗನ ಕಾಯಿಲೆಗೆ ಚಿಕಿತ್ಸೆ ಫ್ರೀ ಮಾಡಿಕೊಡುವಂತೆ ಶಾಸಕರು ಕೇಳಿದರು. ಇದಕ್ಕೆ ಆರೋಗ್ಯ ಸಚಿವರು ಫ್ರೀ ಚಿಕಿತ್ಸೆಗೆ ಆದೇಶವಾಗಿದೆ. ಮಣಿಪಾಲ್ ಗೂ ಆದೇಶವಾಗಿದೆ. ಮೊಬೈಲ್ ಮೆಡಿಕಲ್ ಯುನಿಟ್ ಆರಂಭಿಸುವುದಾಗಿ ಹೇಳಿದರು. ಐದು ನರ್ಸ್ ಇಬ್ವರು ಡಾಕ್ಟರ್ ಬೇಕಿದೆ ಎಂದು ಶಾಸಕರು ಬೇಡಿಕೆ ಇಟ್ಟರು. ಎಲ್ಲಾ ಬೇಡಿಜೆ ಈಡೇರಿಸುವುದಾಗಿ ಭರವಸೆ ನೀಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close