ಸುದ್ದಿಲೈವ್/ಶಿವಮೊಗ್ಗ
ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ಉತ್ಸಾಹ ಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಗ್ಯಾರಂಟಿಗಳು ವರ್ಕ್ ಆಗುತ್ತಿದೆ.ಅಭಿವೃದ್ದಿ ಕೆಲಸಗಳು ಶುರುವಾಗಿದೆ. ಹಿಂದಿನ ಸರ್ಕಾರದ ಸಾಲ ಸಹ ತೀರಿಸಿ ಆಗಿದೆ. ಟೀಕಾ ಟಿಪ್ಪಣಿ ಮಾಡುವ ಬದಲು ಇದನ್ನ ಹೇಳಬೇಕಾಗುತ್ತೆ. ಜನರಿಗೆ ಶುದ್ದವಾದ ತಿಳುವಳಿಕೆ ಹೋದಾಗ ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುತ್ತೇನೆ ಎನ್ನುವ ಶಾಸಕ ಯೋಗೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜೆಡಿಎಸ್ಸೇ ಯಾಕೆ ಬಿಜೆಪಿಯಿಂದ ಕರೆತರಬಾರದಾ? ಅದು ಶಿವಮೊಗ್ಗದಿಂದಲೇ ಯಾಕ್ ಆಗಬಾರದು?ಜೆಡಿಎಸ್ ಅಂತ ಮಾತ್ರ ಯಾಕೇ ಹೇಳ್ತಿರಾ ಜೆಡಿಎಸ್ ನಿಮಗೆ ಫ್ರೀಯಾಗಿ ಸಿಕ್ಕಿದೆಯಾ ಎಂದು ಮಾಧ್ಯಮಗಳನ್ನೆ ಪ್ರಶ್ನಿಸಿದರು.
ಜೆಡಿಎಸ್ ದೊಡ್ಡ ನ್ಯಾಷನಲ್ ಪಾರ್ಟಿ ಆಮೇಲೆ ರಿಜಿನಲ್ ಪಾರ್ಟಿ ಆಗಿ ಕುಳಿತುಕೊಂಡಿದೆ. ಯೊಗೇಶ್ವರ್ ಚನ್ನಪಟ್ಟಣದಿಂದ ಗೆಲುವಿನ ಹುಮ್ಮಸ್ಸಿನಿಂದ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರು ಬರಬಹುದು. ಶಾಸಕರು ಬರಬಹುದು, ಕಾರ್ಯಕರ್ತರು ಬರಬಹುದು. ಶಾಸಕರನ್ನ ತಯಾರಿ ಮಾಡೋದೆ ಮುಖಂಡರು ಮತ್ತು ಕಾರ್ಯಕರ್ತರು ಅವರು ಪಕ್ಷಕ್ಕೆ ಬರಬೇಕು ಎಂದರು.
ನಾನು ಬೇರೆ ಪಕ್ಷದಲ್ಲಿ ಇದ್ದೆ ಚುನಾವಣೆ ಪೂರ್ವವಾಗಿ ಕಾಂಗ್ರೆಸ್ ಗೆ ಬಂದು ಸೇರಿಕೊಂಡೆ. ತತ್ವ ಸಿದ್ದಾಂತದ ಮೇಲೆ ನಡೆದುಕೊಂಡು ಹೋಗುತ್ತಿದ್ದೇನೆ. ಗೌರವ ಕೊಟ್ಟಿದ್ದಾರೆ ಸ್ಥಾನಮಾನ ಕೊಟ್ಟಿದ್ದಾರೆ. ಕೆಟ್ಟ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯವರು ಬಂದು ಸೇರಿಕೊಳ್ಳಬೇಕು. ಕಾಂಗ್ರೆಸ್ ಒಳ್ಳೆ ಪಕ್ಷ ದೇಶದ ಬಡವರ ಚಿಂತನೆ ಮಾಡುತ್ತದೆ ಎಂದರು.
ಗ್ಯಾರಂಟಿ ಅನುಷ್ಟಾನ ಮಾಡುವ ಚಿಂತನೆ ಮಾಡುತ್ತದೆ. ಬೇರೆ ಪಕ್ಷದವರು ತದ್ವಿರುದ್ದವಾಗಿ ರಾಜಕೀಯಕ್ಕಾಗಿ ಕೆಲಸ ಮಾಡ್ತಾರೆ. ನಾವು ಮತಕ್ಕಾಗಿ ಅಲ್ಲ ಜನರಿಗಾಗಿ ಕೆಲಸ ಮಾಡುತ್ತೇವೆ ಎಂದರು.
ವಕ್ಫ್ ತಿದ್ದುಪಡಿ ಮಸೂದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಗೆ ಈ ವಿಷಯದಲ್ಲಿ ತಲೆ ಕೆಟ್ಟಿದೆ ಮನಸ್ಸಿಗೆ ಬಂದ ಹಾಗೇ ಮಾಡ್ತಾರೆ. ಜನ ಹಾಳಾದರೆ ಏನಂತೆ ಧರ್ಮ ಧರ್ಮಗಳಲ್ಲಿ ಭೇಧಭಾವ ಆದರೆ ಏನಂತೆನಿನ್ನೆ ಯಾರು ವಕ್ಫ್ ಬಗ್ಗೆ ಹೇಳಿಕೆ ಕೊಟ್ಟಿದ್ದಾರೋ ಅವರಿಗೆ ರಿವರ್ಸ್ ಆಗಿದೆ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿದರೇ ಒಂದು ದಿನ ಸಿಕ್ಕಾಕಿಕೊಳ್ಳುತ್ತೀರಾ ಎಂದು ಬುದ್ದಿವಾದ ಹೇಳಿದರು.
ಸರ್ಕಾರ ಇದ್ದಾಗ ನೀವೇನು ಕತ್ತೆ ಕಾಯುತ್ತಿದ್ದರಾ? ಎಂದು ವಾಗ್ದಾಳಿ ನಡೆಸಿದ ಸಚಿವರು ಬಿಜೆಪಿ ಪಕ್ಷವನ್ನು ಯಾವಾಗ ಇವರು ಕಟ್ಟಿದ್ದಾರೆ. ನಾನಾದರೂ ಹೋಗಿ ಸೋತು ಬಂದಿದ್ದೇನೆ. ಇವರು ಪಕ್ಷದ ಬಾವುಟ ಸಹ ಹಿಡಿದುಕೊಂಡಿಲ್ಲ. ಮಾನ ಮರ್ಯಾದೆ ಬಿಟ್ಟಿರುವವರಿಗೆ ಏನು ಹೇಳಲು ಆಗುವುದಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.