ಸುದ್ದಿಲೈವ್/ಶಿವಮೊಗ್ಗ
ಅಬಕಾರಿ ಸಚಿವರನ್ನ ಟೀಕಿಸುವ ಭರದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದವನ್ನು ಸೃಷ್ಠಿಸಿಕೊಂಡರಾ ಎಂಬ ಅನುಮಾನಕ್ಕೆ ಅವರ ಹೇಳಿಕೆ ಎಡಮಾಡಿಕೊಟ್ಟಿದೆ.
ತೀರ್ಥಹಳ್ಳಿಯಲ್ಲಿ ಅಬಕಾರಿ ಹಗರಣ ನಡೆದಿದೆ ಎಂದು ವಾಗ್ದಾಳಿ ನಡೆಸಿರುವ ಆರಗ ಜ್ಞಾನೇಂದ್ರ ಅಬಕಾರಿ ಸಚಿವರು ತೀರ್ಥಹಳ್ಳಿಗೆ ಬಂದಿದ್ದರು. ಸಚಿವರು ತೀರ್ಥಹಳ್ಳಿಗೆ ಬಂದಿದ್ದರು ಅಂತಾನೇ ಪ್ರತಿ ಬ್ರಾಂದಿ ಅಂಗಡಿಯಿಂದ ಹಣ ಎತ್ತಿದ್ದಾರೆ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಕ್ಯಾಬಿನೆಟ್ ನಲ್ಲಿ ಇದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನ ಸೃಷ್ಠಿಸಿಕೊಂಡ್ರಾ ಎಂಬ ಅನುಮಾನಕ್ಕೆ ಅವರ ಹೇಳಿಕೆ ದಾರಿ ಮಾಡಿಕೊಟ್ಟಿದೆ.
ಕೋವಿಡ್ ಸಂದರ್ಭದಲ್ಲಿ ಹಗರಣ ಆಗಿದೆ ಅಂತೇಳಿ ಎಸ್ ಐಟಿ ರಚನೆ ಮಾಡಿ ಬಿಜೆಪಿ ವಿರುದ್ಧ ಹಗೆ ತೀರಿಸಿಕೊಳ್ಳುತ್ತಿದ್ದಾರೆ. ಸದಾ ಕಾಂಗ್ರೆಸ್ ಪಕ್ಷವೇ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಂತೆ ಕಾಣುತ್ತಿದೆ.ರಾಜಕೀಯ ಜಿದ್ದು ಹತಾಶೆಯಿಂದ ಈ ರೀತಿ ಮಾಡ್ತಿದ್ದಾರೆ ಎಂದು ಹರಿಹಾಯ್ದರು.
ಕೋವಿಡ್ ಸಂಧರ್ಭದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇರಲಿಲ್ಲ.ಮಾಸ್ಕ್ ಪಿಪಿಇಕಿಟ್ ಇರಲಿಲ್ಲ. ರಾತ್ರಿ ಮಲಗಿದರೆ ಬೆಡ್ ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿತ್ತು. ಜನರನ್ನು ಬದುಕಿಸೋದು ಮುಖ್ಯ ಆಗಿತ್ತು. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಜನರ ಸಾವು ಬದುಕಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ಇದನ್ನು ಜನ ನೋಡ್ತಿದ್ದಾರೆ ಇದು ಯಾವ್ದು ನಡೆಯುವುದಿಲ್ಲ. ಮುಡಾ ಹಗರಣದ ನಂತರ ಡೈವರ್ಟ್ ಮಾಡಲು ಈ ರೀತಿ ಮಾಡ್ತಿದ್ದಾರೆ. ಗ್ಯಾರೆಂಟಿ ಘೋಷಣೆ ಮಾಡಿದ್ರು, ಈಗ ಅದನ್ನು ಕೊಡಲು ಸರ್ಕಾರಕ್ಕೆ ಆಗ್ತಿಲ್ಲ. ಗ್ಯಾರೆಂಟಿ ಯೋಜನೆ ಜಾರಿ ಮಾಡಿ ಬೆಲೆ ಏರಿಕೆ ಮಾಡಿದರು ಎಂದು ದೂರಿದರು.
ಉಪ ಚುನಾವಣೆಯಲ್ಲಿ ಮೂರು ಸ್ಥಾನವನ್ನ ಎನ್ ಡಿಎ ಗೆಲ್ಲುತ್ತದೆ. ಎಲ್ಲಾ ಸಚಿವರು ವಿಧಾನಸೌಧಕ್ಕೆ ಬೀಗ ಹಾಕಿಕೊಂಡು ಪ್ರಚಾರಕ್ಕೆ ಹೋಗಿದ್ದರು ಎಂದು ಹೇಳಿದ ಅವರು, ಪ್ರಿಯಾಂಕ ಖರ್ಗೆ ಅವರು ರಜಾಕಾರರು ಮುಸ್ಲಿಂರಲ್ಲ ಅಂದಿದ್ದಾರೆ ನನಗೆ ಬಹಳ ಆಶ್ಚರ್ಯ ಆಯ್ತು, ಖರ್ಗೆ ಅವರ ಕುಟುಂಬ ಸಹ ಅವರಿಂದ ತೊಂದರೆಗೆ ಒಳಪಟ್ಟ ಕುಟುಂಬವಾಗಿದೆ ಎಂದರು.