Girl in a jacket

ಸಾಲೂರಿನಲ್ಲಿ ನಡೆದ ವ್ಯವಸ್ಥಿತ ಹೋರಿ ಹಬ್ಬ!

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ನಡೆಯುವ ಎರಡು ತಾಲೂಕಿನಲ್ಲಿ ನಢಯುವ ಹೋರಿ ಹಬ್ಬ ನಿಜವಾಗಿಯೂ ಮೈ ನೆವರೇಳಿಸುತ್ತವೆ. ಮೈ ನವರೇಳಿಸುವ ಸ್ಪರ್ಧೆ ನಿಜವಾಗಿಯೂ ಜಿಲ್ಲಾಡಳಿತ ಮುಂಜಾಗೃತ ಕ್ರಮ ಜರುಗಿಸಿರುವುದು ಶ್ಲಾಘನೀಯವಾಗಿದೆ.

2023 ಮತ್ತು 2022 ರಲ್ಲಿ ಆರಂಭದಲ್ಲಿಯೇ ಹೋರಿ ಹಬ್ಬಕ್ಕೆ ಯುವಕರ ಬಲಿ ನಡೆದಿತ್ತು. ಮಾಹಿತಿಯ ಪ್ರಕಾರ 2023 ರಲ್ಲಿ 4-6 ಸಾವಾಗಿದ್ದರೆ, 2022 ರಲ್ಲಿ ಆರಂಭದಲ್ಲಿಯೇ ಮೂರು ಬಲಿಯಾಗಿತ್ತು. ಜನಪ್ರತಿನಿಧಿಗಳ ಬೆನ್ನ ಬಿದ್ದ ಹೋರಿ ಹಬ್ಬ ನಡೆಸಲಾಗುತ್ತಿತ್ತು.

ಕಳೆದ ವರ್ಷದಿಂದ ಈ ಬಾರಿ ಹೋರಿ ಹಬ್ಬಕ್ಕೆ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿದೆ. ಜಲ್ಲಿಕಟ್ಟು ಸಹ ಇದೇರೀತಿಯ ಆಚರಣೆಯಾಗಿದೆ. ಜಲ್ಲಿಕಟ್ಟನ್ನ ಸುಪ್ರೀಂ ಅನುಮತಿ ನೀಡಿದೆ. ಆದರೆ ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ಬೇಕಿದೆ.

ಜಲ್ಲಿಕಟ್ಟಿಗೆ ಗೂಳಿಯ ಬೆನ್ನಿನ ಗೂನನ್ನ ಹಿಡಿದು ನಿಲ್ಲಿಸುವುದು ಸ್ಪರ್ಧೆಯಾದರೆ, ಗೂಳಿಯ ಕುತ್ತಿಗೆಗೆ ಸುತ್ತಿರುವ ಕೊಬರಿ ಗಂಟನ್ನ ಹಿಡಿದು ಎಳೆಯುವುದೇ ಸ್ಪರ್ಧೆಯಾಗಿದೆ. ಈ ಸ್ಪರ್ಧೆ ಗೋವಿನ ತಳಿಯನ್ನ ಪೋಷಿಸುತ್ತವೆ.

ನಿನ್ನೆ ನಡೆದ ಶಿಕಾರಿಪುರ ತಾಲೂಕಿನ ಸಾಲೂರಿನಲ್ಲಿ ಅಚ್ಚುಕಟ್ಟಾಗಿ ಹೋರಿಹಬ್ವದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಅನುಮತಿ ಪಡದು ಹೋರಿ ಹಬ್ಬವನ್ನ ಸುರಕ್ಷಿತವಾಗಿ ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ನ್ನ ಸ್ಥಳದಲ್ಲಿ ನಿಯೋಜಿಸಿ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಈ ತಿಂಗಳು ನಡೆಯುವ ಮುಂದಿನ ಮೂರು ಹೋರಿ ಹಬ್ಬಗಳು ಸುರಕ್ಷಿತವಾಗಿ ಈ ತಿಂಗಳು ನಡೆಯಲಿದೆ ಎಂಬುದೇ ಮನಸ್ಸಿಗೆ ನೆಮ್ಮದಿ ನೀಡುವ ವಿಷಯವಾಗಿದೆ.

ಈ ಹಬ್ಬಸಂಕ್ರಮಣದ ವರೆಗೆ ಜೋರಾಗಿ ನಡೆಯಲಿದೆ. ಅದರಂತೆ ಮುಂದಿನಗಳಲ್ಲಿ ನಡೆಯಲಿ ಎಂಬುದೇ ವಿಷಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close