ಹೊನ್ನಾಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಎದುರಿನ ರಸ್ತೆ ಅಂತು ಇಂತು ಡಾಂಬರೀಕರಣಗೊಂಡಿದೆ. ಕನ್ನಡ ಹೋರಾಟಗಾರರ ತೀವ್ರತರನಾದ ಪ್ರತಿಭಟನೆಯ ನಡುವೆ ನಿನ್ನೆ ಈ ರಸ್ತೆಯಲ್ಲಿ ಪಿಡಬ್ಲೂಡಿ ಇಲಾಖೆ ಡಾಂಬರ್ ಹಾಕಿದೆ.
ನೆನ್ನೆ ನಡೆದ ಹೋರಾಟ ದ ಫಲವಾಗಿ ಈ ದಿವಸ ಎಂಟು ಮೀಟರ್ ಅಗಲ 75 ಮೀಟರ್ ಉದ್ದದ ಡಾಂಬರೀಕರಣದ ರಸ್ತೆಯನ್ನು ಪಿಡಬ್ಲ್ಯೂಡಿ ವತಿಯಿಂದ ನಿರ್ಮಾಣ ಮಾಡಿದ್ದಷ್ಟೇ ಅಲ್ಲದೆ ಹಲವು ಭಾಗಗಳಲ್ಲಿ ಗುಂಡಿಯನ್ನು ಮುಚ್ಚುವ ಕೆಲಸವು ಕೂಡ ಆಗಿದೆ. ಇದರಿಂದ ದೂಳಿನಲ್ಲಿಯೇ ಜೀವನ ಕಳೆಯ ಬೇಕಿದ್ದ ಇಲ್ಲಿನ ಸ್ಥಳೀಯ ನಿವಾಸಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಈ ಬಗ್ಗೆ ಕನ್ನಡಪರ ಹೋರಾಟಗಾರರ ಸಂಘಟನೆಗೆ ಸಂದ ಜಯವಾಗಿದೆ.
ಡಾಂಬರೀಕರಣಕ್ಕೆ ಕನ್ನಡ ಹೋರಾಟಗಾರರ ಸಂಘಟನೆಯ ಮಧುಸೂದನ್ ಎಸ್ಎಂ , ರವಿಪ್ರಸಾದ್ ನಯಾಜ್ ನೂರುಲ್ಲಾ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ನಡೆದಿತ್ತು. ಪಿಡಬ್ಲ್ಯೂಡಿ ಅಧಿಕಾರಿಯಾದ ಬರಮಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ಹೋರಾಟಗಾರರು ಸ್ಪಂದನೆಗೆ ಸಹಕಾರಿ ಆಗಿದ್ದಕ್ಕೆ ಧನ್ಯವಾದಗಳು ತಿಳಿಸಿದ್ದಾರೆ.
ಎರಡು ಕೋಟಿ ಪ್ರಸ್ತಾವನೆ
ಡಬಲ್ ರಸ್ತೆಯ ಮತ್ತು ರೈಲ್ವೆ ಓವರ್ ಬ್ರಿಡ್ಜ್ ನ ಮರು ಡಾಂಬರೀಕರಣಕ್ಕೆ ಶಾಸಕರ ಅನುದಾನದಲ್ಲಿ 2 ಕೋಟಿ ಹಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡುವುದು ಬಾಕಿ ಉಳಿದಿದೆ. ಅಲ್ಲದೆ ಮತ್ತೆ ಮಳೆಯಾದರೆ ಈ ಡಾಂಬರೀಕರಣ ಕಿತ್ತುಹೋಗುವುದರಿಂದ ಸಮಸ್ಯೆಯಾಗಲಿದೆ.
ಆದರೆ ಇಲ್ಲಿನ ಸ್ಥಳೀಯರೇ ರಸ್ತೆಯಲ್ಲಿ ಹರಿದು ಬರುವ ನೀರಿಗೆ ತಡೆ ಹಾಕುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂಬುದು ಇಲಾಖೆಯ ದೂರಾಗಿದೆ. ಈ ಬಗ್ಗೆ ಪಾಲಿಕೆ ಗಮನಹರಿಸಿ ರಸ್ತೆಯ ನೀರನ್ನ ಪಕ್ಕದಲ್ಲಿಯೇ ಹರಿದು ಹೋಗುವ ಮೋರಿಗೆ ಬಿಡಬೇಕೆಂದು ಇಲಾಖೆ ಸ್ಪಷ್ಟೀಕರಿಸಿದೆ.