ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ತಹಶೀಲ್ದಾರ್ ಗಿರೀಶ್ ಬಿ.ಎನ್, ಡಿಡಿಪಿಐ ಮಂಜುನಾಥ್ ಬಿಇಒ ರಮೇಶ್ ನಾಯ್ಕ್ ಮತ್ತು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆದಿದ್ದು, ಸಭೆಯಲ್ಲಿ ತಹಶೀಲ್ದಾರ್ ಸಾಮ ಧಾನ ದಂಡದ ಟಾರ್ಗೆಟ್ ನೀಡಿದ್ದಾರೆ.
ತಾಲೂಕಿನ 134 ಶಾಲೆಗಳ ಹೆಚ್ ಎಂ ಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಗಿರೀಶ್ ಶಾಲಾ ಮುಖ್ಯೋಪಧ್ಯಾಯರಿಗೆ ಕೆಲವೊಂದು ಟಾಸ್ಕ್ ನೀಡಿದ್ದಾರೆ.
ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯದಲ್ಲಿ ಶಿವಮೊಗ್ಗ ಮೂರನೇ ಸ್ಥಾನ ಪಡೆದಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ತಾಲೂಕು 5 ನೇ ಸ್ಥಾನ ಪಡೆದಿತ್ತು. ಮೊದಲು ಹೊಸನಗರ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ. ತೀರ್ಥಹಳ್ಳಿ ಎರಡನೇ ಸ್ಥಾನ ಪಡೆದಿದೆ. ಶಿವಮೊಗ್ಗ ತಾಲೂಕು ಐದನೇ ಸ್ಥಾನ ಪಡೆದಿದೆ. ಆದುದರಿಂದ ತಹಶೀಲ್ದಾರ್ ಗಿರೀಶ್ ಐದು ವಿಷಯಗಳಲ್ಲಿ ಶಾಲಾ ಮುಖ್ಯೋಪಧ್ಯಾರಿಗೆ ಟಾರ್ಗೆಟ್ ನೀಡಿದ್ದಾರೆ.
ಏನಿದು ಟಾರ್ಗೆಟ್?
ಎಲ್ಲಾ ಶಾಲೆಗಳು ಸುಣ್ಣಬಣ್ಣ, ದುರಸ್ಥಿ ಮಾಡಿಸುವುದು. ಸ್ವಚ್ಛತೆ ಇರುವ ಹಾಗೂ ಬಳಸಲು ಅರ್ಹರಿರುವ ಶೌಚಾಲಯಗಳನ್ನ ಶಾಲೆಯಲ್ಲಿ ನಿರ್ಮಿಸಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ 2024-25 ನೇ ಶೈಕ್ಷಣಿಕ ವರ್ಷದಿಂದ ಮುಂದಿನ ವರ್ಷಗಳ್ಲಿ ರಾಜ್ಯಕ್ಕೆ ಶಿವಮೊಗ್ಗ ಮೊದಲನೇ ಸ್ಥಾನ ಪಡೆಯಬೇಕು ಜಿಲ್ಲೆಯಲ್ಲಿ ಶಿವಮೊಗ್ಗ ಮೊದಲೇ ಸ್ಥಾನದ ಟಾರ್ಗೆಟ್ ನ್ನ ಫಿಕ್ಸ್ ಮಾಡಿದ್ದಾರೆ.
ಸಭೆಯಲ್ಲಿ ಮಂಗಳೂರು ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. ಅಲ್ಲಿ ಮೀನು ತಿನ್ನುತ್ತಾರೆ ಎಂಬ ಚರ್ಚೆ ಹೆಚ್ ಎಂ ಕಡೆಯಿಂದ ಕೇಳಿ ಬಂದಿದೆ. ಆದರೆ ಉತ್ತರಿಸಿದ ತಹಶೀಲ್ದಾರ್ ಮಂಗಳೂರಿನಲ್ಲಿ ಮೀನು ಸಿಗುವುದು ಸಹಜ ಆದರೆ ಯಾವ ಮಕ್ಕಳು ಐಎಎಸ್ ಪಾಸ್ ಮಾಡಿರುವ ಉದಾಹರಣೆ ಕಡಿಮೆ. ಬೀದರ ಬಿಜಾಪುರ ಕೋಲಾರ ಹೆಚ್ಚು ಇದನ್ನ ತಲೆಯಿಂದ ಕಿತ್ತಾಕಲು ತಿಳಿಸಿದ್ದಾರೆ.
ಸಮಸ್ಯೆ ನಿವಾರಣೆ ಹೇಗೆ?
8, 9 ಹಾಗೂ 10 ನೇ ತರಗತಿಯ ಮಕ್ಕಳಿಗೆ ನಡೆಸುವ ಪರೀಕ್ಷೆಯಲ್ಲಿ ಯಾವ ವಿಷಯದಲ್ಲಿ ಡಲ್ ಇದ್ದಾರೆ ಅವರನ್ನ ಆರಿಸಿಕೊಳ್ಳಿ, ಒಂದುಕಡೆ ಡಲ್ ಮಕ್ಕಳನ್ನ ಸೇರಿಸಿಕೊಟ್ಟರೆ, ಪ್ರತಿ ಒಬ್ಬ ವಿದ್ಯಾರ್ಥಿಗಳನ್ನ ಪ್ರತ್ಯೇಕವಾಗಿ ಭೇಟಿ ಮಾಡಿ ಸಮಸ್ಯೆ ಆಲಿಸುವುದಾಗಿ ತಹಶೀಲ್ದಾರ್ ಗಿರೀಶ್ ತಿಳಿಸಿದ್ದಾರೆ.
ಮನೆ, ಊಟ, ವಸತಿ ಸಮಸ್ಯೆ ಇದ್ದರೆ ತಹಶೀಲ್ದಾರ್ ಸ್ಪಂಧಿಸುವುದಾಗಿ ಭರವಸೆ ನೀಡಿದ್ದಾರೆ. ವಿದ್ಯಾಭ್ಯಾಸದಲ್ಲಿ ಡಲ್ ಇದ್ದರೆ ವೈಯುಕ್ತವಾಗಿ ಮಕ್ಕಳನ್ನಭೇಟಿಯಾಗಿ ವೀಕ್ ಎಂಡ್ ನಲ್ಲಿ ಸ್ಪೆಷಲ್ ಕ್ಲಾಸ್ ಕೊಡಿಸುವುದು. ಪ್ರತಿ ತಿಂಗಳಲ್ಲೂ ಮಕ್ಕಳ ಕಲಿಕೆಯನ್ನ ಪರಿಶೀಲಿಸುವುದರ ಬಗ್ಗೆ ತಹಸೀಲ್ದಾರ್ ಗುರಿ ನೀಡಿದ್ದಾರೆ. ಹೆಚ್ ಎಂ ಗಳಿಗೆ ಸಾಮಾ, ಧಾನ ದಂಡದ ಮೂಲಕ ಗುರಿ ಮುಟ್ಟುವ ಟಾರ್ಗೆಟ್ ನ್ನ ನೀಡಿದ್ದಾರೆ.
ಸಾಮ, ಧಾನ ದಂಡ ಹೇಗಿರುತ್ತೆ?
ಹೆಚ್ ಎಂ ಗಳು ಈ ಟಾರ್ಗೆಟ್ ನ್ನ ನಿರ್ಲಕ್ಷಿಸಿದರೆ ತಿಳಿಹೇಳುವುದು, ಮತ್ತೊಮ್ಮೆಯೂ ನಿರ್ಲಕ್ಷಿಸಿದರೆ ಮತ್ತೊಂದು ಸುತ್ತಿನ ತಿಳುವಳಿಕೆ ನೀಡುವುದು. ಇದನ್ನೂ ನಿರ್ಲಕ್ಷಿಸಿದರೆ ದಂಡದ ಮೂಲಕ ಎಚ್ಚರಿಸುವುದೇ ಈ ಸಾಮಾ, ಧಾನ ಮತ್ತು ದಂಡದ ಸಿದ್ದಾಂತವಾಗಿದೆ.
ಜಿಲ್ಲೆ ಶಿಕ್ಷಣ ಸಚಿವರ ತವರು ಜಿಲ್ಲೆಯಾಗಿರುವುದರಿಂದ ಅವರಿಗೆ ಉತ್ತಮ ಹೆಸರು ನೀಡುವ ನಿಟ್ಟಿನಲ್ಲಿ ಈ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಹೊಡೆಯಲು ಹಾಗೂ ದುರಸ್ಥಿಗೆ ಸಮಸ್ಯೆ ಇದ್ದರೂ ಸ್ಪಂಧಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ.