Girl in a jacket

ಶಿಮೂಲ್ ನಲ್ಲಿ ಭ್ರಷ್ಠಾಚಾರದ ಆರೋಪ

ಸುದ್ದಿಲೈವ್/ಶಿವಮೊಗ್ಗ

ಶಿಮೂಲ್ ನಲ್ಲಿ ಭ್ರಷ್ಠಾಚಾರದ ಆರೋಪ ಮಾಡಿರುವ ಬಿಜೆಪಿ ರೈತ ಮೋರ್ಚಾ ಇಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಝೆ ನಡೆಸಬೇಕು ಎಂದು ಆಗ್ರಹಿಸಿತು. 

ಜಿಲ್ಲಾ ರೈತ ಮೋರ್ಚದ ಅಧ್ಯಕ್ಷ ಸಿದ್ದಲಿಂಗಪ್ಪ  ರಾಜ್ಯದಲ್ಲಿ 1500 ಲಕ್ಷ ರೈತರು ಜೀವನೋಪಾಯಕ್ಕೆ ಅನುಕೂಲವಾದ ಹಾಲು ಉತ್ಪಾದನೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಹೈನುಗಾರಿಕೆ ರಾಜ್ಯದ ರೈತರ ಪ್ರಮುಖ ಉದ್ದಿಮೆಯಾಗಿ ಬೆಳೆದಿದೆ. ಆದರೆ  ಶಿವಮೊಗ್ಗ ಹಾಲು ಒಕ್ಕೂಟದಲ್ಲಿ 2 ಕೋಟಿಗೂ ಅಧಿಕ ಹಗರಣದ ಆರೋಪವಾಗಿದೆ ಎಂದು ಆರೋಪಿಸಿದರು. 

ಶಿಮುಲ್ ಮಾರುಕಟ್ಟೆ ವಿಭಾಗದ ಮೂವರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಶಿಮೂಲ್ ಗೆ ಹೋಗುವ ಹಣ ಅಧಿಕಾರಿಗಳ ಅಕೌಂಟ್ ಗೆ ಹೋಗುತ್ತಿದೆ. 6 ತಿಂಗಳು ನಿರಂತರವಾಗಿ ಹಗರಣ ನಡೆದಿದೆ. ಅಕೌಂಟ್ಸ್ ಕಮಿಟಿ ಸಭೆ ನಡೆದರೂ ನಡೆದಿಲ್ಲ ಎನ್ನಲಾಗುತ್ತಿದೆ. ಜವಬ್ದಾರಿ ಇಲ್ಲದ ನಿರ್ದೇಶಕರ ನಡವಳಿಕೆ ಕಂಡು ಬರುತ್ತಿದೆ. ಕೂಡಲೇ ಪ್ರಕರಣವನ್ನ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ನ್ಯಾಯಾಯುತವಾದ ತೀರ್ಮಾನ ಕೈಗೊಳ್ಳಬೇಕು ಎಂದರು. 

ಒಕ್ಕೂಟ ನಷ್ಟವೆಂದು ಹಾಲಿನ ಉತ್ಪಾದಕರ ದರವನ್ನ ಕಡಿಮೆ ಮಾಡಲಾಗಿದೆ. ಎರಡು ಕೋಟಿ ಹಗರಣ ಕಂಡು ಬಂದಿದೆ. ಸರ್ಕಾರ ಗಮನ ಹರಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಯಾವುದೇ ದಾಖಲೆಗಳು ಹೊರಗೆ ನೀಡಲಾಗುತ್ತಿಲ್ಲ. ಮಾರುಕಟ್ಟೆ ವಿಭಾಗದ ಮೂರು ಜನರಾದ ಲಿಂಗರಾಜ್ ನಾಯ್ಕ್, ದೀಪಕ್ ಸೇರಿ ಮೂರು ಜನ ಸಸ್ಪೆಂಡ್ ಆಗಿದ್ದಾರೆ ಎಂದರು. 

ಮಾರುಕಟ್ಟೆ ವಿಭಾಗದಲ್ಲಿ ಪ್ರತಿದಿನದ ವ್ಯವಹಾರದ ಹಣ ತುಂಬಲಾಗುತ್ತದೆ. ಆದರೆ ಈ ಹಣ ಅಧಿಕಾರಿಗಳ ಮೂಲಕ ಉದ್ದಮಿಗಳ ಹೆಸರಿಗೆ ಜಮಾವಾಗಿದೆ. ಎಂಡಿ ಅವರು 6 ತಿಂಗಳಿಂದ  ಸಹ ದಾಖಲಾತಿಗಳಿಗೆ  ಸಹಿ ಹಾಕಿದ್ದಾರೆ. ಇದರಲ್ಲಿ ಎಲ್ಲರೂ ಶಾಮೀಲಾಗಿದ್ದಾರೆ ಎಂದು ದೂರಿದರು. 

ಶಾಸಕ ಚೆನ್ನಬಸಪ್ಪ, ಎಸ್ಟಿ ಮೋರ್ಚಾದ ಹರೀಶ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close