Girl in a jacket

ಮೈಸೂರಿನಿಂದ ಬಂದವನು ಶಿವಮೊಗ್ಗದ ಲಾಡ್ಜ್ ನಲ್ಲಿ ಡೆತ್‌ನೋಟ್ ಬರೆದು ಆತ್ಮಹತ್ಯೆ


ಸುದ್ದಿಲೈವ್/ಶಿವಮೊಗ್ಗ

ಲಾಡ್ಜ್ ಒಂದರಲ್ಲಿ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಘಟನೆ ನಿನ್ನೆ ನಡೆದಿದೆ.

ಗಾರ್ಡನ್ ಏರಿಯಾದಲ್ಲಿರುವ ಲಾಡ್ಜ್ ನಲ್ಲಿ ಮೈಸೂರಿನಿಂದ ಬಂದಿದ್ದ ರವಿ ಕುಮಾರ್ ಗೌಡ (50) ಎಂಬುವರು ಕಿಟಕಿಗೆ ನೇಣಿನ ಹಗ್ಗ ಬಿಗಿದುಕೊಂಡು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಸಾಲದ ವಿಚಾರದಲ್ಲಿ ಮನನೊಂದು ಸಾಲಕೊಟ್ಟವನ ಹೆಸರನ್ನ ಡೆತ್ ನೋಟ್ ನಲ್ಲಿ ಬರೆದು ನೇಣಿಗೆ ಶರಣಾಗಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆದು ಮೈಸೂರಿಗೆ ವಾಪಾದ್ ಕಳುಹಿಸಲಾಗಿದೆ. ಡೆತ್ ನೋಟ್ ಬರೆದ ಕಾರಣ ಈ ಪ್ರಕರಣ ಎಫ್ಐಆರ್ ಆಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close