ನೀರುಪಾಲಾಗಿದ್ದ ಮ್ಯಾನೇಜರ್ ಶವವಾಗಿ ಪತ್ತೆ



ಸುದ್ದಿಲೈವ್/ತೀರ್ಥಹಳ್ಳಿ 

ತುಂಗಾ ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್‌ ಬಿಟ್ಟು  ನದಿಗೆ ಇಳಿದಿದ್ದ ಬ್ಯಾಂಕ್ ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳದವರ ತೀವ್ರಶೋಧದ ಬಳಿಕ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ. 

ತಾಲೂಕಿನ ಅರಳಸುರುಳಿಯ ಯೂನಿಯನ್‌ ಬ್ಯಾಂಕ್ ಮ್ಯಾನೇಜರ್ ಶ್ರೀವತ್ಸ (38)  ಸೋಮವಾರ ಬೆಳಗ್ಗೆ ನದಿಯಲ್ಲಿ ಈಜಲು ಹೋಗಿ ನಂತರ ನಾಪತ್ತೆಯಾಗಿದ್ದರು. ನದಿಯ ದಡದಲ್ಲಿ ಮೊಬೈಲ್, ಬಟ್ಟೆ, ಚಪ್ಪಲಿ ಆಧಾರದಲ್ಲಿ ಅವರು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಲಾಗಿತ್ತು.

ತುಂಗಾ ನದಿಯಲ್ಲಿ ಅಗ್ನಿಶಾಮಾಕದಳ, ಪೊಲೀಸರು ಸಿಬ್ಬಂದಿಗಳು ಮಂಗಳವಾರ ಸ್ಥಳದಲ್ಲಿ ಹುಡುಕಾಟ ನಡೆಸಿದ್ದರು. ಬ್ಯಾಂಕ್ ಮ್ಯಾನೇಜ‌ರ್ ಒಬ್ಬರೇ ತೀರ್ಥಹಳ್ಳಿಯಲ್ಲಿ ಇದ್ದರು ಎಂದು ಹೇಳಲಾಗುತ್ತಿದ್ದು ಸಂಬಂಧಿಕರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close