ಸುದ್ದಿಲೈವ್/ಭದ್ರಾವತಿ
ಭದ್ರಾವತಿ ಹೊರವಲಯದಲ್ಲಿ ಕರಡಿ ದಾಳಿ ನಡೆಸಿದ್ದು, ಕರಡಿ ದಾಳಿಯಿಂದ ವ್ಯಕ್ತಿಯೋರ್ವ ಬಜಾವ್ ಆಗಿ ಬಂದಿರುವ ಅಪರೂಪದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಅಂತರಗಂಗೆ ಯಿಂದ ಸ್ವಲ್ಪ ದೂರವಿರುವ ಕೆಹೆಚ್ ನಗರದ ನಿವಾಸಿ ದೇವೇಂದ್ರಪ್ಪ(52) ಕರಡಿ ದಾಳಿಗೆ ಒಳಗಾಗಿದ್ದು, ಗಂಭೀರ ಗಾಯಗಳಾಗಿವೆ. ಅವರನ್ನ ಮೆಗ್ಗಾನ್ ಗೆ ಶಿಫ್ಟ್ ಮಾಡಲಾಗಿದೆ. ಅವರು ಕರಡಿ ದಾಳಿಯಿಂದ ಬಜಾವಾಗಿ ಬಂದಿರುವುದೆ ಅಚ್ಚರಿ ಎನಿಸಿದೆ.
ಕೆ.ಹೆಚ್ ನಗರದಿಂದ ಬಿಸಿಲು ಮನೆಯಲ್ಲಿ ಜಮೀನು ಕೆಲಸಕ್ಕೆ ಹೋದಾಗ ಕರಡಿ ದಾಳಿ ನಡಸಿದೆ. ಜಮೀನು ಕೆಲಸ ಮುಗಿಸಿ ಮನೆಗೆ ವಾಪಾಸಾಗುವಾಗ ಜಮೀನಿನ ಬಳಿಯೇ ದಾಳಿ ನಡೆಸಿದೆ. ದೇವೇಂದ್ರಪ್ಪ ಮೂಲತಃ ಟೈಲರಿಂಗ್ ಕೆಲಸ ಮಾಡುವವರಾಗಿದ್ದಾರೆ.
ಟೈಲರಿಂಗ್ ಕೆಲಸ ಜೀವನೋಪಯಾಕ್ಕೆ ಸಾಗುತ್ತಿಲ್ಲವಾದುದರಿಂದ ಕೃಷಿ ಕೂಲಿ ಕೆಲಸಕ್ಕೆ ದೇವೇಂದ್ರಪ್ಪ ಹೋಗುತ್ತಿದ್ದರು.
ಇದಕ್ಕೂ ಮೊದಲು ದೇವೇಂದ್ರಪ್ಪ ಜಮೀನು ಗುತ್ತಿಗೆ ಹಿಡಿದು ಜೀವನ ನಡೆಸುತ್ತಿದ್ದರು. ಇವರಿಗೆ ಮಕ್ಕಳಿಬ್ವರಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕರಡಿ ದಾಳಿಗೆ ದೇವೇಂದ್ರಪ್ಪನವರ ಮುಖದ ಮೇಲೆ ಗಂಭೀರ ಗಾಯಗಳಾಗಿವೆ.
ಮೂಗಿನ ಎಡಭಾಗ ತೀವ್ರ ಸ್ವರೂಪದಲ್ಲಿ ಗಾಯವಾಗಿದೆ. ಭುಜ ಮತ್ತು ಪಕ್ಕೆಗೆ ಗಾಯಗಳಾಗಿವೆ. ಭದ್ರಾವತಿ ಸರ್ಕಾರಿ ಆಸ್ಪತ್ರೆಯಿಂದ ಮೆಗ್ಗಾನ್ ಗೆ ಅವರನ್ನ ಶಿಫ್ಟ್ ಮಾಡಲಾಗಿದೆ.
ಮಾಹಿತಿ ಪ್ರಕಾರ 25 ಕ್ಕೂ ಹೆಚ್ಚು ಹೊಲಿಗೆ ಹಾಕಲಾಗುತ್ತಿದೆ. ಈ ಬಗ್ಗೆ ವೈದ್ಯರ ವರದಿಗಾಗಿ ಕಾಯಬೇಕಿದೆ. ಆದರೆ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿಯೇ ಇಲ್ಲದಿರುವುದೆ ಅಚ್ಚರಿ ಉಂಟು ಮಾಡಿದೆ.