Girl in a jacket

ಸೋರುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಮತ್ತು ಮೊಂಡುತನಕ್ಕೆ ಬಿದ್ದ ವಾಟರ್ ಬೋರ್ಡ್!?


ಸುದ್ದಿಲೈವ್/ಶಿವಮೊಗ್ಗ

ಎಮ್ಮೆ ಚರ್ಮದ ಇಲಾಖೆ ಎಂದರೆ ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಎಂದರೆ ತಪ್ಪಾಗಲಾರದು. ಕಳೆದ ತಿಂಗಳು ಟರ್ಬಿಡಿಟಿ ಎಂದು ಹೇಳಿ ಮುಜುಗರಕ್ಕೂಂಟಾದ ಇಲಾಖೆ ಈಗ ಎಂಆರ್ ಎಸ್ ಭಾಗದ ಜನರ ಹಿಡಿಶಾಪಕ್ಕೆ ಗುರಿಯಾಗಿದೆ. 

ಕಾರಣ ಇಲ್ಲಿನ ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ ಕಾಣದೆ ಸೋರಲಾರಂಭಿಸಿದೆ. ಬಹಳ ವರ್ಷದಿಂದ ಸೋರುತ್ತಿದ್ದರೂ ವಾಟರ್ ಬೋರ್ಡ್ ಗಪ್ ಚುಪ್ಪಾಗಿದೆ. ಅದಕ್ಕೆ ಕಾರಣ ಇದೆ. ಓದ್ತಾ ಹೋಗಿ ಹೇಳ್ತಾ ಹೋಗ್ತೀನಿ!

ನಗರದಲ್ಲಿ ಬಹಳ ಹಳೆಯ ಟ್ಯಾಂಕ್ ಗಳು ಸೋರಲಾರಂಭಿಸುವುದು ಮಾಮೂಲಿ, ಅದರೆ ಇದಕ್ಕೂ ಮುನ್ನ ಟ್ಯಾಂಕ್ ಗಳು ಸೋರುವುದು ಎಷ್ಟು ಎಂಬುದರ ಬಗ್ಗೆ ಮಂಡಳಿಯ ಬಳಿ ಇದೆಯೇ ಎಂಬುದು ಅನುಮಾನವಿದೆ. ಅದೂ ಹೋಗಲಿ ಈ ಟ್ಯಾಂಕ್ ದುರಸ್ತಿ ಮಾಡಲು ಇನ್ನೂ ಎಷ್ಟು ದಿನ ಬೇಕು ಎಂಬುದರ ಲೆಕ್ಕಾಚಾರ ಇದೆಯಾ ಎಂಬ ಪ್ರಶ್ನೆಯೂ ಉಂಟಾಗಿದೆ.

ಈ ಟ್ಯಾಂಕ್ ಗಳು ಯಾವಾಗ ದುರಸ್ತಿ ಆಗಲಿದೆ ಎಂಬುದನ್ನ ನೇರವಾಗಿ ಹೇಳಿಬಿಡಬಹುದು. ಜಯನಗರದ  ಸರ್ವೋದಯ ಶಾಲೆ ಎದುರಿನ ನೆಹರೂ ಕ್ರೀಡಾಂಗಣದಲ್ಲಿ ನೀರಿನ ಟ್ಯಾಂಕ್ ವೊಂದು ದುರಸ್ತಿಗೆ ಬಂದಿತ್ತು. ಬಹಳ ವರ್ಷದಿಂದ ಈ ಟ್ಯಾಂಕ್ ಸೋರ್ತಾ ಇತ್ತು. ಇಚ್ಚಾಶಕ್ತಿಯ ಕೊರತೆಯಿಂದ ಟ್ಯಾಂಕ್ ದುರಸ್ತಿ ಬಂದರೂ ಯಾರೂ ಕೇರೇ ಮಾಡ್ತಿರಲಿಲ್ಲ.

ಬಿಜೆಪಿ ಯಾವಾಗ ಅಧಿಕಾರಕ್ಕೆ ಬಂತೋ ಆಗ ದುರಸ್ತಿಯಾಗಿತ್ತು. ಕಾರಣ ಈ ನೆಹರೂ ಕ್ರೀಡಾಂಗಣದಲ್ಲಿ ಕೆಲ ಬಿಜೆಪಿ ನಾಯಕರು ಬೆಳಿಗ್ಗೆ ಸಂಜೆ ವಾಕ್ ಹೋಗುವುದರಿಂದ ಟ್ಯಾಂಕ್ ಸೋರುವಿಕೆಯಿಂದ ಹಳೆಯದಾಗಿತ್ತು. ಯಾವಾಗ ಅದು ವಾಕ್ ಗೆ ಬರುವರ ಮೇಲೆ ಬೀಳುತ್ತೋ ಎಂಬ ಭೀತಿಯೂ ಶುರುವಾಗಿತ್ತು. ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದು ಬದಲಾಯಿಸಿದರು. 

ಈಗ ಟ್ಯಾಂಕ್ ಸೋರುತ್ತಿರುವುದು ಎಂಆರ್ ಎಸ್ ವೃತ್ತದ ಬಳಿಯಿರುವ ನೀರಿನ ಟ್ಯಾಂಕ್, ಇಲ್ಲಿ ಯಾರಾದರೂ ಆಡಳಿತ ಪಕ್ಷದ ಕಡೆಯವರು ವಾಕ್ ಗೆ ಹೋಗಿ ಅವರ ಮನಸಿಗೆ ಈ ಟ್ಯಾಂಕ್ ಸೋರ್ತಾ ಇದೆಯಲ್ಲಪ್ಪಾ ಎಂದು ಎನಿಸಿದಾಗ ಅಷ್ಟೆ ದುರಸ್ತಿಯಾಗೋದು ಎಂಬುದಕ್ಕೆ ಈ ಉದಾಹರಣೆ ಸೂಕ್ತವಾಗಿದೆ. ಈಗ ಕಾಂಗ್ರೆಸ್ ಸರ್ಕಾರದ ಬಳಿ ಹಣವೇ ಇಲ್ಲ ಎಂಬುವರ ಗುಂಪು ಸಹ ಇದೆ. ಎನಿವೇ...!  ಹಣದ ಕೊರತೆ ಎಂಬುದು ನಾಮಕಾವಸ್ಥೆ ಮಾತ್ರ. ಈಗ ಗೊತ್ತಾಯಿತಲ್ಲಾ ಕೆಲ ಇಲಾಖೆಗಳ ಸಾರ್ವಜನಿಕ ಆಸ್ತಿ ದುರಸ್ಥಿಯಾಗೋದು ಯಾವಾಗ ಅಂತ...

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close