Girl in a jacket

ಸಚಿವರ ಭೇಟಿಯ ವೇಳೆ ಸದ್ದು ಮಾಡಿದ ಇಂದಿರಾ ಕ್ಯಾಂಟೀನ್

 


ಸುದ್ದಿಲೈವ್/ಶಿವಮೊಗ್ಗ

ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಡಿಡಿಪಿಐ ಕಚೇರಿ ಬಳಿ ಇರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಯಾವಾಗಲೂ ಗೊಂದಲದಲ್ಲಿರುವ ಕ್ಯಾಂಟೀನ್ ಸಚಿವರ ಪರಿಶೀಲನೆ ವೇಳೆ  ಉತ್ತಮವಾಗಿದ್ದಿದ್ದು ಅಚ್ಚರಿ ಮೂಡಿಸಿದೆ.

ನಂತರ ಮಾಧ್ಯಮಗಳಿಗೆ ಮಾತನಾಡಿದ ಸಚಿವರು, ಪಾಲಿಕೆಯಲ್ಲಿ ಪರಿಶೀಲನೆ ಸಭೆಇದೆ. ಸಭೆಗೂ ಮುನ್ನ ಭೇಟಿ ನೀಡಿರುವುದಾಗಿ ತಿಳಿಸಿದರು.
ಮೊದಲಬಾರಿಗೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ  200 ಕ್ಯಾಂಟೀನ್ ನೀಡಿದ್ದರು. ಈಗ ಮತ್ತೆ ಹೊಸದಾಗಿ 200 ಕ್ಯಾಂಟೀನ್ ನೀಡಿದ್ದಾರೆ.ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಕುಡಿಯುವ ನೀರುಫಿಲ್ಟರ್ ಇಲ್ಲ ಗುತ್ತಿಗೆದಾರನಿಗೆ ಹಾಕಲು ಸೂಚಿಸಿರುವುದಾಗಿ ತಿಳಿಸಿದರು.

ವಿಐಪಿ ಬಂದಾಗ ಊಟ ಸರಿಯಿರುತ್ತದೆ ನಂತರ ಊಟ ಸರಿಯಿಲ್ಲ ಎಂಬ ದೂರಿದೆ. ಈಬಗ್ಗೆ ಮಾಧ್ಯಮ ಪ್ರಶ್ನೆಗೆ  ಉತ್ತರಿಸಿದ ಸಚಿವರು, ಈ ಬಗ್ಗೆ ರಿವ್ಯೂವ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಗುತ್ತಿಗೆ ದಾರ ದಿನದ ಮೆನು ಸಹ ಹಾಕದೆ ಇರುವುದು  ಗಮನಕ್ಕೆ ಬಂದಿದೆ ಎಂದರು.

ಇವತ್ತು  ಒಳ್ಳೆ ಟೇಸ್ಟ್ ಇದೆ. ಮೊದಲು ಬರಿ ಅನ್ನ ಸಂಬಾರ್ ಇತ್ತು. ಈಗ ಪರಿಶೀಲಿಸಿ ಚಪಾತಿ ನೀಡಲಾಗುತ್ತಿದೆ ಎಂದ ಸಚಿವರು ಸಂಸತ್ ನಲ್ಲಿ ಚಳಿಗಾಲದ ಅಧಿವೇಶನ ಡಿ.9 ರಿಂದ ನಡೆಯಲಿದೆ. ವಕ್ಫ್ ತಿದ್ದುಪಡಿ ಬಗ್ಗೆ ಮಾತನಾಡಿದ ಸಚಿವರು ದಾನಕೊಟ್ಟಾಗ ಬೇಕಾದ  ದಾಖಲನ್ನ ಮಾಡುವುದೇ ವಕ್ಫ್ ಕೆಲಸ ವಾಗಿದೆ.

ಯಾರಿಗೆ ಮಕ್ಕಳಿಲ್ಲ, ಯಾರು ಹತ್ತಿರ ಹಣವಿದೆ ಅವರು ದಾನ ಮಾಡುತ್ತಾರೆ.  ಅವರು ವಕ್ಫ್ ಗೆ ದಾನ ಕೊಡ್ತಾರೆ. ಶಿವಮೊಗ್ಗದ ಎಕ್ಸಾಂಪಾಲ್ ಗೊತ್ತಿಲ್ಲ‌ ಬೀದರ್ ನಲ್ಲಿ 70 ವರ್ಷದ ಹಿಂದೆ 400 ಎಕರೆ ಇತ್ತು. ಈಗ 10 ಎಕರೆ ವಕ್ಫ್ ನಲ್ಲಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ನಾಳೆ ವಕ್ಫ್ ತಿದ್ದುಪಡಿ ಬಿಲ್ ಮಂಡನೆ ಇದೆ. ಆದರೆ ಇದನ್ನ ನಿತಿಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರೆ ತಿರಸ್ಕರಿಸಲಿದ್ದಾರೆ ಎಂದು ಹೇಳಿದ ಅವರು ಬಿಜೆಪಿಗೆ ವಿಷಯಗಳಿಲ್ಲ ರಾಮ ಮಂದಿರ ಮುಗಿಯಿತು. ಹಿಜಾಬ್ ಸ್ಟಾರ್ಟ್ ಮಾಡಿದರು ಅದು ಮುಗಿಯಿತು. ಈಗ ವಕ್ಫ್ ವಿಷಯ ಎತ್ತಿಕೊಂಡಿದ್ದಾರೆ ಎಂದು ದೂರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close