Girl in a jacket

ಶ್ರೀಗಂಧ ಸಾಗಾಣಿಕೆ, ಓರ್ವ ಬಂಧನ



ಸುದ್ದಿಲೈವ್/ಶಿವಮೊಗ್ಗ

ಹೊಸನಗರ ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಿಂದ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ತಯಾರಿಸಿ ಸಾಗಾಣಿಕೆ ಮಾಡುವಾಗ ಆರೋಪಿಯನ್ನ ಅರಣ್ಯ ಇಲಾಖೆ ಬಂಧಿಸಿದ್ದಾರೆ. 

ಹನೀಫ್ ಬಿನ್ ಯಾಕೂಬ್ ಸಾಬ್ ವಯಸ್ಸು 48ವರ್ಷ ಬಾನಿಗಾ ವಾಸಿ ಹೊಸಕೇಸರಿ ಗ್ರಾಮ ಹೊಸನಗರ ತಾಲೂಕು ಇವನಿಂದ 3ಕೆಜಿ 400ಗ್ರಾಂ(3.400ಗ್ರಾಂ )ಹಸಿ ಗಂಧದ ಪೀಸ್ ಹಾಗೂ 3ಗರಗಸವನ್ನು ವಶಕ್ಕೆ ಪಡೆಯಲಾಗಿದೆ. 

ಸದರಿ ದಾಳಿಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಸಬ್ ಇನ್ಸ್ಪೆಕ್ಟರ್ ವಿನಾಯಕ ಹಾಗೂ ಅವರ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಮಾನ್ಯ ವಲಯ ಅರಣ್ಯಧಿಕಾರಿ  ಅನಿಲ್ ಕುಮಾರ್ ಎಸ್ ಹೊಸನಗರ, dyrfo ಆದ ಅನಿಲ್ ಬೆಳ್ಳೆನವರ್, ರಾಘವೇಂದ್ರ ಗೌಡ ಅರಣ್ಯ ರಕ್ಷಕ, ಪುಟ್ಟಸ್ವಾಮಿ, ರಮೇಶ್, ಸುರೇಶ್ ಅರಣ್ಯ ರಕ್ಷಕ ಇವರು ಪಾಲ್ಗೊಂಡಿದ್ದು, ಸದರಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close