Girl in a jacket

ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣ ವೇದಿಕೆಯವತಿಯಿಂದ ಆಟೋ ಚಾಲಕ ಕಾರ್ಮಿಕರ ಘಟಕ ಲೋಕಾರ್ಪಣೆ


ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕಾರ್ಮಿಕರ ಇಲಾಖೆಯ ವತಿಯಿಂದ ಇಂದು ಆಟೋ ಪ್ರಚಾರದ ಮೂಲಕ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಮಾಡಿಸಲು ಕಾರ್ಮಿಕರ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಸಮೂಹದಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣ ವೇದಿಕೆಯವತಿಯಿಂದ ಆಟೋ ಚಾಲಕ ಕಾರ್ಮಿಕರ ಘಟಕವನ್ನ ಲೋಕಾರ್ಪಣೆ ಮಾಡಿಕೊಳ್ಳಲಾಯಿತು.  ಈ ಕಾರ್ಯಮವು ಗೋಪಾಳ ಗೌಡ ಬಡಾವಣೆಯಲ್ಲಿ ನಡೆದಿದೆ. 

ಪದಾಧಿಕಾರಿಗಳು 


ಚಾಲಕ ಕಾರ್ಮಿಕ ಘಟಕ ದ ಅಧ್ಯಕ್ಷರಾಗಿ ಸಂತೋಷ್, ಚಾಲಕ ಕಾರ್ಮಿಕ ಘಟಕದ ಉಪಾಧ್ಯಕ್ಷರಾಗಿ  ಸತೀಶ್, ಚಾಲಕ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಉಮೇಶ್, ಕಾರ್ಯದರ್ಶಿಯಾಗಿ ರುದ್ರೇಶ್, ಖಜಾಂಚಿಯಾಗಿ ರಾಜು.ಎಂ, 

ಸಂಘಟನಾಕಾರ್ಯದರ್ಶಿಯಾಗಿ ಲೋಕೇಶ್, ಈರೇಶ್ ನಾಯ್ಕ್ ಸಂಘಟನಾಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ ಸುಬಾನ್ ಖಾನ್, ನಿರಂಜನ್, ಮಲ್ಲೇಶಪ್ಪ  ಅವರನ್ನ ಆಯ್ಕೆ ಮಾಡಲಾಯಿತು. 

ಈ ಕಾರ್ಯಕ್ರಮದಲ್ಲಿ ವೇದಿಕೆ ರಾಜ್ಯಾಧ್ಯಕ್ಷರಾದ ಸತೀಶ್.ಎಚ್( ದೇವು), ರಾಜ ಸಂಘಟನಾ ಕಾರ್ಯದರ್ಶಿಯಾಗಿ ರಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದಂತಹ ಕುಮಾರ್, ಜಿಲ್ಲಾ ಸಹಕಾರ್ಯದರ್ಶಿ ರಮೇಶ್, ನಗರ ಅಧ್ಯಕ್ಷರಾದ ಶ್ರೀನಿವಾಸ್, ನಗರ ಉಪಾಧ್ಯಕ್ಷರಾದ ಸಮಿವುಲ್ಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದಂತಹ ಮುರುಳಿ ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close