Girl in a jacket

ಕೋಳಿ ಸಾಕಾಣಿಕೆಯ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸಿಬ್ಬಂದಿಯಿಂದ ವಂಚನೆಯ ಆರೋಪ


ಸುದ್ದಿಲೈವ್/ಶಿವಮೊಗ್ಗ

ಕೋಳಿ ಸಾಕಾಣಿಕೆ ಸಂಸ್ಥೆಯಾಗಿರುವ ಮೆ|| ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಸಿಬ್ಬಂದಿಯಿಂದ ಹಣದ ದುರುಪಯೋಗವಾಗಿದೆ ಎಂದು ಆರೋಪಿಸಿ ಸಂಸ್ಥೆಯ ಸಹಾಯಕ ಸಂಸ್ಥಾಪಕರು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

1.ವಿನಯ್ ಕುಮಾರ್ ರವರನ್ನು ದಿನಾಂಕ: 21.04.2010ರಂದು ಸೂಪರ್ವೈಸರ್ ವೆಯ್ ಮೆಂಟ್ ನನ್ನಾಗಿ ನೇಮಕ ಮಾಡಿಕೊಳ್ಳಲಾಗಿದ್ದು,  ತದನಂತರದಲಿ ದಿನಗಳಲ್ಲಿ, 01.04.2017 ರಂದು ಹಿರಿಯ ಅಧಿಕಾರಿ-ಮಾರುಕಟ್ಟೆ ದರ್ಜೆಯನ್ನಾಗಿ ಬಡ್ತಿ ಪಡೆದು ಶಿವಮೊಗ್ಗ ಶಾಖಾ ವಿಭಾಗದಲ್ಲಿ ಕೋಳಿಗಳನ್ನು ಮಾರಾಟ ಮಾಡುವ ಮತ್ತು ವರ್ತಕರಿಂದ ಹಣಕಾಸನ್ನು ಸಂಗ್ರಹಿಸುವ ಜವಾಬ್ದಾರಿಗಳನ್ನು ಪಡೆದಿದ್ದರು.‌

ಶಿವಮೊಗ್ಗ ಶಾಖಾ ವ್ಯಾಪ್ತಿಯಲ್ಲಿನ ವಿವಿಧ ವರ್ತಕರಿಂದ ಕೋಳಿ ಮಾರಟ ಮಾಡಿದ ಹಣವನ್ನು ಸಂಗ್ರಹಿಸುವ ಮತ್ತು ಅದನ್ನು ಸಂಸ್ಥೆಯ ಖಾತೆಗೆ ಜಮಾಗೊಳಿಸುವ ಜವಾಬ್ದಾರಿಯೊಂದಿಗೆ, ವಿನಯ್ ಕುಮಾರ್ ರವರಿಗೆ ಭತ್ಯೆಗಳನ್ನೂ ಒಳಗೊಂಡಂತೆ ರೂ.24,794/- ರೂಪಾಯಿಗಳ ವೇತನವನ್ನು ಪಡೆಯುತ್ತಿದ್ದರು.  

ಕೋಳಿ ಸಾಕಣಾ ವ್ಯವಹಾರದಲಿ.. ತೊಡಗಿರುವ ಯಾವುದೇ ಮೂರನೇ ವಹಿವಾಟುದಾರರೊಂದಿಗೆ ಯಾವುದೇ ರೀತಿಯ ವ್ಯವಹಾರವನ್ನು ಹೊಂದಿರುವುದನ್ನು ಸಂಸ್ಥೆಯು ನಿರ್ಬಂಧಿಸಲಾಗಿದ್ದರೂ ಅವರೊಂದಿಗೆ ವ್ಯವಹಾರ ಮಾಡಿರುವ ಆರೋಪವೂ ಅವರ ಮೇಲೆ ಕೇಳಿ ಬಂದಿದೆ. 

2. ವಿನಯ್ ಕುಮಾರ್ ರವರು ಏಪ್ರಿಲ್-1 2023 ರಿಂದ ಸೆಪ್ಟೆಂಬರ್-30 2023 ರ ಅವಧಿಯಲ್ಲಿ ಟ್ರೇಡರ್ ಗಳಾದ ವಿವಿಧ ಚಿಕನ್ ಸೆಂಟರ್, ಪೌಲ್ಟ್ರಿಫಾರಂಗಳಲ್ಲಿ 84,71,938/- ವ್ಯವಹಾರ ನಡೆಸಿರುವ ವಿನಯ್ ತನಿಖೆಯಲ್ಲಿ ಒಪ್ಪಿಕೊಂಡಿದ್ದು, ಅದರಲ್ಲಿ 39,88,788/- ರೂ.ಗಳನ್ನ ಸಂಸ್ಥೆಗೆ ಸಂದಾಯ ಮಾಡಿರುತ್ತಾರೆ. ಇನ್ನು ಬಾಕಿ 44,83,150/-ರೂ ಗಳನ್ನ ಸಂಸ್ಥೆಗೆ ಕಟ್ಟದೆ ನಷ್ಟ ಉಂಟುಮಾಡಿರುತ್ತಾರೆ. ಹಾಗು ಅವರ ಕೆಲಸದ ಅವಧಿಯಲ್ಲಿ ವರ್ತಕರಿಗೆ ನೀಡಿದ ಕೋಳಿಯ ಹಣವನ್ನು ಸಹ ಅವರಿಂದ ಪಡೆದು ಕಂಪನಿಗೆ ಜಮಾ ಮಾಡಿರುವುದಿಲ್ಲ ಎಂದು ಆರೋಪಿಸಲಾಗಿದೆ. 

3. 2013 ರಿಂದ ಅಕ್ಟೋಬರ್ 2023ರ ಅಧಿಯಲ್ಲಿ ಸಂಸ್ಥೆಗೆ ಸರಿಯಾಗಿ ಮೊತ್ರವನ್ನು ಪಾವತಿಸದ ಕಾರಣ ಸಂಸ್ಥೆಯು ಹಲವು ವರ್ತಕರನ್ನು ನಿರ್ಬಂಧಿಸಲಾಗಿತ್ತು. ಆದಾಗ್ಯೂ ವಿನಯ್ ಕುಮಾರ್ ರವರು ನಿರ್ಬಂಧಿತ ವಹಿವಾಟುದಾರರಾದ ನೂರಲ್ಲಾ.. ಶಿರಸಿ ಮತ್ತು ರಂಗನಾಥ ಟ್ರೇಡರ್ಸ್ ಭದ್ರಾವತಿ ರವರೊಂದಿಗೆ 31,03,731/-ವ್ಯವಹರಿಸಿರುವುದು ಕಂಡುಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

4. ತದನಂತರ ಸಂಸ್ಥೆಯು ಸದರಿ ವಿನಯ್ ರವರ ಅಂತರಿಕ ವಿಚಾರಣೆಯನ್ನು ಕೈಗೊಂಡಾಗ ಅಂತರಿಕ ವಿಚಾರಣೆಯಲ್ಲಿ ಕಂಡುಬರುವಂತೆ ವಿನಯ್ ರವರು ವಿವಿಧ ಮೂಲಗಳಿಂದ ರೂ.12,58,97,416/- ಗಳಷ್ಟು ಮೊತ್ತದ ವಹಿವಾಟು ನಡೆದಿರುವುದು ಕಂಡುಬಂದಿದ್ದು, ವಿನಯ್ ಗೆ 10 ವರ್ಷದಲ್ಲಿ ಸಂಬಳದಲ್ಲಿ 13 ಲಕ್ಷ  ರೂ. ಹಣ ಬಂದಿದೆ. ಆದರೆ 12,58,97,416 ರೂ ವಹಿವಾಟು ಆಗಿದೆ. 

5. ವಿನಯ್ ಕುಮಾರ್ ಆರ್ಡನ್ ಷರತ್ತುಗಳನ್ನ ಪಾಲಿಸಿಲ್ಲ,  ವ್ಯವಹಾರಗಳಿಗೆ ಅವರ ಹಾಗೂ ಅವರ ಹೆಂಡತಿ ಹೆಸರೂ ಸೇರಿದಂತೆ ಐದು ಬ್ಯಾಂಕ್ ಅಕೌಂಟ್ ನಲ್ಲಿ ಹಣ ವ್ಯವಹಾರ ನಡೆದಿದೆ. ಎಂದು ದೂರಲಾಗಿದೆ. 

ಈ ವಿಚಾರವಾಗಿ ವಿನಯ್ ಕುಮಾರ್ ರವರಿಗೆ ಸಂಸ್ಥೆ  ಕೇಳಿದಾಗ ಅವರು ಸಂಪೂರ್ಣ ಮಾಹಿತಿ ನೀಡದೆ ಉದ್ದೇಶ ಪೂರ್ವಕವಾಗಿ ನಿರ್ಲಕ್ಷತೆಯನ್ನು ತೋರಿರುವುದಾಗಿ ಆರೋಪಿಸಿದೆ. ಇದರಿಂದಾಗಿ  ಸಂಸ್ಥೆಗೆ 44,83,150/- ರೂ ಹಣ ಕಟ್ಟದೆ ನಮ್ಮ ಸಂಸ್ಥೆಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close