Girl in a jacket

ಕಡವೆ ಭೇಟೆಯಾಡಿದವನಿಗೆ ನ್ಯಾಯಾಂಗ ಬಂಧನ



ಸುದ್ದಿಲೈವ್/ಭದ್ರಾವತಿ

ಕಡವೆಯನ್ನ ಭೇಟೆಯಾಡಿದ ಆರೋಪಿಯನ್ನ ಭದ್ರಾವತಿಯ ಉಪ ವಲಯ ಅರಣ್ಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಭದ್ರಾವತಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ತಂಡ ಕಡವೆ ಬೇಟೆಗಾರ‍ನನ್ನ ಹಿಡಿದು, ಉಳಿದ ಆರೋಪಿಗಳನ್ನ ಬೆನ್ನಟ್ಟಿದೆ. ಅರೆಬಿಳಚಿ ಕ್ಯಾಂಪ್ ನ ಮಂಜುನಾಥ್ ಸೆರೆಸಿಕ್ಕಿದ್ದು ಮೂವರು ತಲೆಮರೆಸಿಕೊಂಡಿದ್ದಾರೆ. ದಾನವಾಡಿ ಅರಣ್ಯದಲ್ಲಿ ಮಂಜುನಾಥ್ ಸಂಗಡಿಗರು ಕಡವೆ ಬೇಟೆಯಲ್ಲಿ ನಿರತರಾಗಿದ್ದರು‌. ಈ ವೇಳೆ ಅಧಿಕಾರಿಗಳು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಭದ್ರಾವತಿ ವಲಯದ ಕೂಡ್ಲಿಗೆರೆ ಶಾಖೆಯ ಹೊಸೂರು ಗ್ರಾಮದ ಸರ್ವೆ ನಂ.22ರ ದಾನವಾಡಿ ಕಿರು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಯಾದ ಕಡವೆಯನ್ನು ಬೇಟೆಯಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.  ಕೃತ್ಯವನ್ನು ಪತ್ತೆಹಚ್ಚಿ ಅರಣ್ಯ ಇಲಾಖೆ ದಾಳಿ ನಡೆಸಿದ್ದಾರೆ. 

ಪ್ರಕರಣವನ್ನು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಶಿಶ್ ರೆಡ್ಡಿ, ಚನ್ನಗಿರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ರತ್ನಪ್ರಭ ಇವರ  ಮಾರ್ಗದರ್ಶನದಲ್ಲಿ, 

ವಲಯ ಅರಣ್ಯಾಧಿಕಾರಿಗಳಾದ ದುಗ್ಗಪ್ಪ ಬಿ.ಹೆಚ್, ರವರ ನೇತೃತ್ವದಲ್ಲಿ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಸದರಿ ಪ್ರಕರಣವನ್ನು ಶ್ರೀ ಶೇಖರ್ ಎ ಚೌಗುಲೆ, ಉಪ ವಲಯ ಅರಣ್ಯಾಧಿಕಾರಿ, ಕೂಡ್ಲಿಗೆರೆ ಶಾಖೆ, ಶ್ರೀ ಹನುಮಂತರಾಯ ಜಿ, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಚಂದ್ರಶೇಖರ್ ಸಿ, ಶ್ರೀ ಕಾಂತೇಶ್ ನಾಯ್ಕ, ಶ್ರೀ ಪ್ರತಾಪ್ ಕೆ.ವಿ ಗಸ್ತು ಅರಣ್ಯ ಪಾಲಕರುಗಳು ಹಾಗೂ ಕೊಠಿ, ಅವಿನಾಶ, ಮಂಜು ದಿನಗೂಲಿ ನೌಕರರುಗಳ ಪ್ರಕರಣ ಬೇದಿಸುವಲ್ಲಿ ಸಹಕಾರಿಸಿರುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close