Girl in a jacket

ಶ್ರೀ ವಿಜಯದಾಸರ ಹಾಗೂ ಶ್ರೀ ಸತ್ಯವೀರತೀರ್ಥ ಶ್ರೀಪಾದಂಗಳವರ ಆರಾಧನೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ಕೆ.ಆರ್.ಪುರಮ್ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ಗೆಳೆಯ ವೃಂದದ ವತಿಯಿಂದ ಇಂದು  ಶ್ರೀ ವಿಜಯದಾಸರ ಹಾಗೂ ಶ್ರೀ ಸತ್ಯವೀರತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ನಡೆಸಲಾಯಿತು. 

ಸಂಜೀವಾಂಜನೇಯ ದೇವಸ್ಥಾನದಿಂದ ಕೆ.ಆರ್.ಪುರಮ್ ರಸ್ತೆ, ತಿಮ್ಮಪ್ಪನ ಕೊಪ್ಪಲು, ತುಮಕೂರು ಶ್ಯಾಮರಾವ್ ರಸ್ತೆಯಲ್ಲಿ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು. ಯಾಯಿವಾರದಲ್ಲಿ  ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಸಲಾಗಿತ್ತು. 

ಪಂಡಿತ ರಾಯಚೂರು ಕೃಷ್ಣಾಚಾರ್ ಮತ್ತು ಪಂ. ಶ್ರೀನಿಧಿ ಗುಡಿ ಇವರಿಂದ ಶ್ರೀ ವಿಜಯದಾಸರ ಕೃತಿಗಳ ಬಗ್ಗೆ, ಹಾಗೂ ಶ್ರೀ ಸತ್ಯವೀರ ತೀರ್ಥರ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ಚಿತ್ರದಲ್ಲಿ ಗೆಳೆಯ ವೃಂದದ ಹೆಚ್.ಎಸ್.ನಾಗೇಂದ್ರ, ಸತ್ಯನಾರಾಯಣ, ಪ್ರಹ್ಲಾದ, ಕುಷ್ಟಗಿ ಅನಂತಾಚಾರ್, ಅನಂತ ರಾಮದ್ಯಾನಿ, ಬಿಂದು ಮಾಧವ, ಶ್ರೀಧರ,

ಅಚ್ಯುತ, ಪಲ್ಲಕ್ಕಿ ಮಧುಸೂಧನಾಚಾರ್, ರಾಯಚೂರು, ಕೃಷ್ಣಾಚಾರ್, ಕುಷ್ಟಗಿ ವಾಸುದೇವ ಮೂರ್ತಿ, ಮುರಳೀಧರ, ಗೀತ, ಸುಧಾ, ಇನ್ನಿತರ ಪ್ರಮುಖರು ಈ ಯಾಯಿವಾರದಲ್ಲಿ ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close