ಸುದ್ದಿಲೈವ್/ಶಿವಮೊಗ್ಗ
ಬೇಡಿಕೆ ಈಡೇರಿಸಿಲ್ಲವೆಂಬ ಕಾರಣಕ್ಕೆ ಡಿಎಆರ್ ಪೊಲೀಸರಿಗೆ ಹಾವಳಿಯಿಟ್ಟ ಖೈದಿ ಮುಬಾರಕ್ ಯಾನೆ ಡಿಚ್ಚಿ ಮುಬಾರಕ್ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿಎಆರ್ ಪೊಲೀಸರಿಗೆ ತಳ್ಳಾಡಿರುವುದು, ಕೈ ಸನ್ನೇ ಮಾಡಿ ಹೊರಗೆ ಬಂದ ಮೇಲೆ ನಿಮ್ಮನ್ನ ನೋಡಿಕೊಳ್ಳುವುದಾಗಿ ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಈ ಹಿಂದೆ ಭದ್ರಾವತಿ ಶಾಸಕನ ಪುತ್ರನ ಕೊಲೆ ಪ್ರಯತ್ನಕ್ಕೆ ಯತ್ನಿಸಿ ಮುಬಾರಕ್ ಅಂದರ್ ಆಗಿದ್ದ, ಆತನನ್ನ ಭದ್ರಾವತಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದುಕೊಂಡು ಹೋಗುವಾಗ ಕರ್ತವ್ಯ ನಿರತ ಡಿಎಆರ್ ಸಿಬ್ಬಂದಿಗೆ ತೊಂದರೆ ಕೊಟ್ಟಿದ್ದಾನೆ.
ಘಟನೆಯ ವಿವರ
ಡಿ.ಎ.ಆರ್ ಶಿವಮೊಗ್ಗದಲ್ಲಿ ಎ.ಹೆಚ್.ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯತೀಶ್ ಮತ್ತು ಮಂಜುನಾಥ್ ಎಂಬುವರು ಡಿ.ಎ.ಆರ್ ಡಿ.ಎಸ್.ಪಿ ರವರ ಆದೇಶದ ಮೇರೆಗೆ ಬಂಧಿ ಬೆಂಗಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ನ.16 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಭದ್ರಾವತಿಯ ಮುಬಾರಕ್(30) ಈತನನ್ನ ಭದ್ರಾವತಿಯ 2ನೇ ಅಪರ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಕರಸದುಕೊಂಡು ಹೋಗಲಾಗಿತ್ತು. ಗೌ|| ಮಾನ 2ನೇ ಅಪರ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಭದ್ರಾವತಿಗೆ ಹಾಜರುಪಡಿಸಿ ಬಳಿಕ ಮಧ್ಯಾಹ್ನ 2-00 ಗಂಟೆಗೆ ಸಾರ್ವಜನಿಕ ಸಾರಿಗೆ ಮೂಲಕ ಭದ್ರಾವತಿಯಿಂದ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಮಲವಗೊಪ್ಪ ಕ್ರಾಸ್ ವರೆಗೆ ಬಂದು ನಂತರ ಮಧ್ಯಾಹ್ನ 2-30 ಗಂಟೆ ಸಮಯದಲಿ, ಮಲವಗೊಪ್ಪ ಜೈಲ್ ಕ್ರಾಸ್ ನಿಂದ ಡಿ.ಎ.ಆರ್ ಪೊಲೀಸ್ ಇಲಾಖೆ ವಾಹನದಲ್ಲಿ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗುವಾಗ ಆರೋಪಿ ಮುಬಾರಕ್ ನು ವಾಹನವನ್ನು ಹತ್ತಲು ನಿರಾಕರಿಸಿದ್ದಾನೆ.
ಊಟಕ್ಕೆ ಖಾಸಗಿ ರೆಸ್ಟೋರೆಂಟ್ ಗೆ ಕರೆದೊಯ್ಯಲು ಹಾಗೂ ಧೂಮಪಾನ ಮಾಡಲು ಅವಕಾಶಕ್ಕಾಗಿ ಬೇಡಿಕೆ ಇಟ್ಟ ಮುಬಾರಕ್ ಗೆ ಬೆಂಗಾವಲು ಸಿಬ್ಬಂದಿಗಳಾದ ಯತೀಶ್ & ಮಂಜುನಾಥ್ ಗೆ ನಿಯಮ ಬಾಹಿರವಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ನಿನ್ನ ಬೇಡಿಕೆಗಳಿಗೆ ಅವಕಾಶ ಇಲ್ಲಾ ಎಂದಾಗ ಅವರುಗಳೊಂದಿಗೆ ಮುಬಾರಕ್ ವಾಗ್ವಾದಕ್ಕೆ ಇಳಿದಿದ್ದಾನೆ.
ನಂತರ ಆರೋಪಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿ ಜೈಲಿನ ಕಡೆಗೆ ಪ್ರಯಾಣಿಸುತ್ತಿರುವಾಗ ಕರ್ತವ್ಯ ನಿರತರಾದ ಸಿಬ್ಬಂದಿಯವರಿಗೆ ಬೆದರಿಕೆ ಹಾಕಿದ್ದಾನೆ. ಹೊರಗಡೆ ಬಂದಾಗ ನಿಮ್ಮನ್ನು ಬಿಡುವುದಿಲ್ಲ ನೋಡಿಕೊಳ್ಳುವುದಾಗಿ ಧಮ್ಕಿ ಹಾಕಿದ್ದಾನೆ. ಪೊಲೀಸ್ ವಾಹನದಲ್ಲಿ ಕೂಗಾಡಿ ಕಿರುಚಾಡಿ ಕರ್ತವ್ಯ ನಿರತರಿಗೆ ಅಶ್ಲೀಲ & ಅವ್ಯಾಚ್ಯಾ ಶಬ್ದಗಳಿಂದ ನಿಂದಿಸಿದ್ದಾನೆ ಹಾಗೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಸಮವಸ್ತ್ರದಲ್ಲಿ ಇದ್ದವರು ಮುಬಾರಕ್ ನನ್ನು ನಿಯಂತ್ರಿಸಲು ಮುಂದಾದಾಗ ನಮಗೆ ತಳ್ಳಾಡಿ, ಕೈ ಸನ್ನೆ ಮಾಡುತ್ತಾ ಕೈಗಳಿಂದ ಹಲ್ಲೆ ಮಾಡಿರುವುದಾಗಿ ದುರಿನಲ್ಲಿ ಆರೋಪಿಸಲಾಗಿದೆ. ಮುಬಾರಕ್ ನು ಜೈಲು ತಲುಪುವವರೆಗೂ ಪೊಲೀಸ್ ವಾಹನದಲ್ಲಿ ಅವ್ಯಾಚ್ಯಾ ಪದಗಳಿಂದ ಬೆಂಗಾವಲಿನವರನ್ನು ಬೈಯುವುದನ್ನು ಮುಂದುವರೆಸಿಕೊಂಡು ಬಂದಿದ್ದಾನೆ. ಈ ಬಗ್ಗೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.