ಸುದ್ದಿಲೈವ್/ಶಿವಮೊಗ್ಗ
ಮಹಾರಾಷ್ಟ್ರ ಮತ್ತು ಜಾರ್ಖಂಡ್ ಮತದಾನ ಆಗಿದೆ. ರಾಜ್ಯ ದ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಎಕ್ಸಿಟ್ ಫೋಲ್ ಸಹ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.
ಇಂದು ಭರತ್ ಸಿನಿಮಾ ಮಾಲ್ ನಲ್ಲಿ ದ ಸಬರಮತಿ ರಿಪೋರ್ಟ್ ಸಿನಿಮಾ ನೋಡಲು ಬಂದಾಗ ಮಾಧ್ಯಮಗಳ ಜೊತೆ ಮಾತನಾಡಿ, ಜಾರ್ಖಂಡ್ ನಲ್ಲಿ ಬಹುಮತ ಬರಲಿದೆ. ಸ್ಪಷ್ಟ ಬಹುಮತ ಬರಲಿದೆ. ಎಕ್ಸಿಟ್ ಪೋಲ್ ಸಹ ಇದನ್ನೇ ಹೇಳಿತ್ತು. ನಮ್ಮ ಲೆಕ್ಕಾಚಾರವೂ ಇದೇ ಇದೆ ಎಂದರು.
ಕಳೆದ ಲೋಕಸಭೆ ಚುನಾವಣೆ ಬಳಿಕ ಎನ್ ಡಿಎ , ಇಂಡಿಯಾ ಆರ್ಭಟ ನೋಡಿದರೆ ಆರ್ಭಟ ಇತ್ತು.ಹರಿಯಾಣ ಬಳಿಕ ಕಡಿಮೆಯಾಗಿದೆ. ರಾಜ್ಯದಲ್ಲಿ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಷಕಾರಿಹಾವು ಎಂದು ಖರ್ಗೆ ಹೇಳಿರುವುದು ಸರಿಯಲ್ಲ. ಮನಬಂದಂತೆ ಮಾತನಾಡುವುದು ಸರಿಯಲ್ಲ. ಸಂಘ ಪರಿವಾರದ ಕುರಿತು ಮಾತನಾಡಿದ್ದು ಖರ್ಗೆಗೆ ಶೋಭೆ ತರುವುದಿಲ್ಲ ಎಂದು ಆರೋಪಿಸಿದರು. ರಾಜ್ಯಕ್ಕೆ ಅನುದಾನ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತಹತ್ಯೆ ಮಾಡಬೇಕು ಅಂತಾ ಶಾಸಕ ರಾಜು ಕಾಗೆ ಹೇಳಿದ್ದಾನೆ. ಮತ್ತೊಬ್ಬ ರು ಶಾಸಕ ಆಗಿರುವುದು ದುರ್ದೈವ ಎಂದಿದ್ದಾರೆ.
ಗ್ಯಾರಂಟಿ ಅನುಷ್ಠಾನ ದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದಾರೆ. ಹಣ ಕೂಡಿಡಲು ಸಾಧ್ಯವಾಗುತ್ತಿಲ್ಲ. ಕೈ ನಲ್ಲಿ ಅಸಮಾಧಾನ ಹೆಚ್ಚಿದೆ. ಬಿಪಿಎಲ್ ವಕ್ಪ್ ವಿಚಾರದಲ್ಲಿ ಬಡವರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಬಡವರ ಪರವಾಗಿದೆ. ಅವಕಾಶ ಮಾಡಿಕೊಡಲ್ಲ. ಅರ್ಹ ರನ್ನು ರದ್ದು ಮಾಡಿದ್ದು ದಿವಾಳಿ ಆಗಿದೆ ಎಂದರು.