Girl in a jacket

ಅಧಿಕಾರಿಗಳಿಂದ ಹೋರಾಟ ಹತ್ತಿಕ್ಕುವ ಪ್ರಯತ್ನ-ಮಹಾ ಒಕ್ಕೂಟ ಆರೋಪ



ಸುದ್ದಿಲೈವ್/ಶಿವಮೊಗ್ಗ

ಸಚಿವರ ಭರವಸೆ ಮೇರೆಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.11 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ  ಅನಿರ್ಧಿಷ್ಠಾವಾಧಿ ಹೋರಾಟವನ್ನ  ಸ್ಥಗಿತಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ, ಸಖಿಯರ ಮಹಾ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ತಿಳಿಸಿದರು. 

ಸುದ್ದಿಯಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶದ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ, ಹಗಲೂ ರಾತ್ರಿ ಶ್ರಮಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರ ಮತ್ತುಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಮತ್ತು ಸಖಿಯರಿಗೆ ಸರಿಯಾದ ವೇತನ ನೀಡಿ ಸಂಘಗಳಾಧಾರದ ಮೇಲೆ ಗ್ರೇಡಿಂಗ್ ಮಾಡಿ ವೇತನ ನೀಡಲು ಅದೇಶ ಮಾಡಿರುವ ಸುತ್ತೋಲೆಯನ್ನ ತಕ್ಷಣ ಹಿಂಪಡೆದು ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು. 

ಮುಖ್ಯ ಪುಸ್ತಕ ಬರಹಗಾರರಿಗೆ 20 ಸಾವಿರ ರೂ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 15 ಸಾವಿರ ರೂ. ಮಾಸಿಕ ಗೌರವಧನ ನೀಡಬೇಕೆಂಬ ಬೇಡಿಕೆಯೂ  ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಅನಿರ್ದಿಷ್ಠಾವಧಿ ಹೋರಾಟ ನಡೆಸುತ್ತಿದ್ದು ಸಚಿವರು ನ.25 ರಂದು ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. 

ಒಂದು ವೇಳೆ ಸಭೆಯಲ್ಲಿ ಬೇಡಿಕೆಗಳು ಈಡೇರಿಕೆಗೆ ನಿರ್ಧಾರ ಕೈಗೊಳ್ಳದಿದ್ದಲ್ಲಿ ಅನಿರ್ದಿಷ್ಟ ಹೋರಾಟವನ್ನ ನಡೆಸಲಾಗುವುದು ಎಂದರು. ನಮ್ಮ ಹೋರಾಟವನ್ನ ಹತ್ತಿಕ್ಕಲು ಕೆಲ ಜಿಲ್ಲೆಗಳಲ್ಲಿ ಜಿಪಂ ಮತ್ತು ತಾಪಂನ ಉನ್ನತ ಅಧಿಕಾರಿಗಳು ಹೋರಾಟ ಕೈಬಿಡದಿದ್ದಲ್ಲಿ ಕೆಲಸದಿಂದ ತೆಗೆದುಹಾಕಲು ನೋಟೀಸ್ ನೀಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದರು.

ಜಿಲ್ಲಾಧ್ಯಕ್ಷೆ ದೇವಿ ಬಾಯಿ, ಕಾರ್ಯದರ್ಶಿ ಭಾಗ್ಯ, ತಾಲೂಕು ಸದಸ್ಯೆ ವಿನುತ, ಲತಾ, ರೋಜಾ ಮತ್ತು ಶೃತಿ‌, ಸವಿತಾ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close