Girl in a jacket

ನಗರದಲ್ಲಿ ನಡೆದ ಗೋಪೂಜೆ


ಸುದ್ದಿಲೈವ್/ಶಿವಮೊಗ್ಗ

ದೀಪಾವಳಿ ಹಬ್ಬದ ಅಂಗವಾಗಿ ಇಂದು ಗೋಪೂಜೆ ನಡೆದಿದೆ. ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಗೋಪೂಜೆ ನಡೆಸಲಾಗಿದೆ. 

ಪ್ರತಿವರ್ಷ ದೀಪಾವಳಿ ಹಬ್ಬವನ್ನ ಮೂರು ಅಥವಾ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಕಾರ್ತಿಕ ಮಾಸದ ಶುಕ್ಷ ಪಕ್ಷದ ಪ್ರತಿಪಾದ ದಿನದಂದು ಗೋಪೂಜೆ ಅಥವಾ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಹೌದು ಉತ್ತರ ಭಾರತದಾದ್ಯಂತ ಗೋವರ್ಧನ ಪೂಜೆಯನ್ನು ಮಾಡಿದರೆ ಈ ಶುಭ ದಿನ ದಕ್ಷಿಣ ಭಾರತದಲ್ಲಿ ಗೋ ಮಾತೆಯನ್ನು ಪೂಜಿಸಲಾಗುತ್ತದೆ.

ಗೋ ಮಾತೆಯ ಮೈ ಮೇಲೆ ಅರಶಿನ ಕುಂಕುಮ, ವಿಭೂತಿಯನ್ನು ಹಚ್ಚಿ, ಹೂವಿನ ಹಾರವನ್ನು ಹಾಕಲಾಯಿತು. ಗೋಮಾತೆಯನ್ನು ಅಲಂಕರಿಸಿದ  ಬಳಿಕ ಶುಭ ಮುಹೂರ್ತದಲ್ಲಿ ಗೋವುಗಳ ಹಣೆಗೆ ಕಾಲಿಗೆ ಅರಶಿನ ಕುಂಕುಮವನ್ನು ಹಚ್ಚಿ, ಆರತಿ ಬೆಳಗಲಾಯುತು. ಈ ಪೂಜೆಯನ್ನ ಕೋಟೆ ದೇವಸ್ಥಾನದ ಅರ್ಚಕ ರಾಮ್ ಪ್ರಸಾದ್ ನಡೆಸಿಕೊಟ್ಟರು. 

ಶಾಸಕ ಚೆನ್ನಬಸಪ್ಪ ಗೋಪೂಜೆಗೆ ವಿಶೇಷವಾಗಿ ನಡೆಸಲಾಯಿತು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಜಿಲ್ಲಾ ಅಧ್ಯಕ್ಷ ವಾಸುದೇವ್ ಜಿಲ್ಲಾ ಉಪಾಧ್ಯಕ್ಷರು ನಟರಾಜ್, ಜಿಲ್ಲಾ ಕಾರ್ಯದರ್ಶಿ ವರ್ಣೇಕರ್, ಬಜರಂಗದಳ ಸಹ ಸಂಚಾಲಕ ಸುರೇಶ್ ಬಾಬು, ನಗರ ಅಧ್ಯಕ್ಷ ವಿನೋದ್ ಕುಮಾರ್ ಜೈನ್, ನಗರ ಕಾರ್ಯದರ್ಶಿ ಅರವಿಂದ್, ಮಾತೃಶಕ್ತಿ ಪ್ರಮುಖ್ ಸುನೀತಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು. 


ನಂತ ಬಸವೇಶ್ವರ ದೇವಸ್ಥಾನ ಹಾಗೂ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಜರುಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close