ಸುದ್ದಿಲೈವ್/ಶಿವಮೊಗ್ಗ
ಹುಷಾರ್ ಜಮೀರ್... ಶಿವಮೊಗ್ಗಕ್ಕೆ ಬರಬೇಡ ಬಂದ್ರೆ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ಶಾಸಕ ಚೆನ್ನಬಸಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿಯಿಂದ ಸರ್ಕಾರದ ಆಸ್ತಿಯ ಜೊತೆಗೆ ರೈತರ ಆಸ್ತಿಯನ್ನ ಕಬಳಿಸುವ ಮೂಲಕ ರಾಜ್ಯವನ್ನ ಮುಸ್ಲೀಂ ಆಡಳಿತಕ್ಕೆ ತರುವ ಹುನ್ನಾರ ನಡೆಸಿದೆ. ಸಚಿವ ಜಮೀರ್ ಗೆ ನೇರವಾಗಿ ಎಚ್ಚರಿಕೆ ನೀಡಿದ ಸಚಿವರು ಈ ಹಿಂದೆ ವಸತಿ ವಿಷಯದಲ್ಲಿ ಅವರನ್ನ ಆಹ್ವಾನಿಸಲಾಗಿತ್ತು. ಈಗ ವಕ್ಫ್ ವಿಚಾರದಲ್ಲಿ ಬರಬೇಡಿ ಎನ್ನುತ್ತಿರುವುದಾಗಿ ಹೇಳಿದರು.
ಕಾಂಗ್ರೆಸ್ ರಾಜ್ಯದ ಬಹುತೇಕ ಆಸ್ತಿಯನ್ನ ವಕ್ಫ್ ಅಡಿ ತರಲು ಹೊರಟಿದೆ. ಲ್ಯಾಂಡ್ ಮಾಫಿಯಾವನ್ನ ವಕ್ಫ್ ಮೂಲಕ ಮಾಡಲಾಗುತ್ತಿದೆ. ಇದರ ಹಿಂದೆ ಲ್ಯಾಂಡ್ ಜಿಹಾದ್ ನ ಶಂಕೆ ಇದೆ. ಈ ಬಗ್ಗೆ ಚರ್ಚೆ ಆರಂಭವಾಗಿದೆ. ನಾಳೆ ವಕ್ಫ್ ಯಾವ ಜಾಗಕ್ಕೆ ಕಲಿಡುತ್ತಿದೆ ಗೊತ್ತಿಲ್ಲ. ಯಾರ ಆಸ್ತಿಯನ್ನ ವಕ್ಫ್ ಅಂತ ಬೋರ್ಡ್ ಹಾಕುತ್ತಾರೆ ಗೊತ್ತಿಲ್ಲ ಎಂಬ ಆತಂಕ ಶುರುವಾಗಿದೆ ಎಂದರು.
ದೇಶದಲ್ಲಿ ರೈಲ್ವೆ ಮತ್ತು ರಕ್ಷಣ ಇಲಾಖೆ ನಂತರ ವಕ್ಫ್ ಭೂಮಾಲಿಕತ್ವವನ್ನ ಪಡೆದಿದೆ. ಹಿಂದೂ ರಾಷ್ಟ್ರವನ್ನೇ ವಕ್ಫ್ ಆಸ್ತಿ ಮಾಡಲಾಗುತ್ತಿದೆ. ನರೇಂದ್ರ ಮೋದಿಯವರು ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ತರಲಿದ್ದಾರೆ ಎಂಬ ಭಯದಿಂದ ರೈತರ ಜಮೀನನ್ನ ತಿದ್ದುಪಡಿ ತಂದು ವಕ್ಫ್ ಆಸ್ತಿ ಎಂದು ಮೊಹರು ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಒಟ್ಟು 1.2 ಲಕ್ಷ ಕೋಟಿ ವಕ್ಫ್ ಆಸ್ತಿ ಹೊಂದಿದೆ ಎಂದರು.
ಮುಂಚೆ ತಲಾಖ್ ತಲಾಖ್ ಎಂದು ಹೆಂಡತಿಯನ್ನ ಕೈಬಿಡಲಾಗುತ್ತಿತ್ತು. ಈಗ ಲ್ಯಾಂಡ್ ಗಳಿಗೆ ವಕ್ಫ್ ಎಂಬ ಬೋರ್ಡ್ ಹಾಕುವ ಮೂಲಕ ಕ್ಯಾಂಡ್ ಜಿಹಾದ್ ನಡೆಸಲಾಗುತ್ತಿದೆ. ವಕ್ಫ್ ಗೆ ವರ್ಗಾಯಿಸುವ ಲ್ಯಾಂಡ್ ನ್ನ ಅಲ್ಲಾಹುವಿಗೆ ವರ್ಗಾಯಿಸುವುದಾಗಿ ಹೇಳಲಾಗುತ್ತದೆ. ಮೌಲ್ವಿ ಮೂಲಕ ಈ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ಭಾರತ ಬಿಟ್ಟಿ ಬಿದ್ದಿಲ್ಲ ಎಂದು ಗುಟುರ್ ಹಾಕಿದರು.
1850 ರಲ್ಲಿ ಬೆಂಗಳೂರು ಮೈದಾನ ವಕ್ಫ್ ಆಯಿತು. ಕೊಲ್ಕಾತ್ತಾದ ಗಾಲ್ಫ್ ಕ್ಲಬ್, ವಿನ್ಸೆಂಟ್ ಮ್ಯಾನರ್, ತಮಿಳುನಾಡಿನಲ್ಲಿ ತಿರುಚಂದೂರಿನಲ್ಲಿ ಮುಸ್ಲೀಂ ಇಲ್ಲ. ಅಲ್ಲಿನ ಜಮೀನು ವಕ್ಫ್‌ದು ಎನ್ನಲಾಯಿತು. ಸಂಸತ್ ಭವನವನ್ನ ವಕ್ಫ್ ಎಂದು ಹೇಳಲಾಗುತ್ತಿದೆ. ಇದು ದುರ್ದೈವದ ಸಂಗತಿ,ಇದಕ್ಕೆ ಬ್ರೇಕ್ ಹಾಕಲೇ ಬೇಕಿದೆ. ದೇವಸ್ಥಾನಗಳೆ ವಕ್ಫ್ ಆಸ್ತಿ ಆಗುತ್ತಿದೆ ಹೇಗೆ? ಎಂದು ಪ್ರಶ್ನಿಸಿದ ಶಾಸಕರು ಮಲಗಿ ಬೆಳಗಾಗುವುದಾರೊಳಗೆ ವಕ್ಫ್ ಬೋರ್ಡ್ ಹಾಕುತ್ತಿದೆ ಎಂದು ದೂರಿದರು.
ಇದಕ್ಕೆ ಜಮೀರು ಕುಮ್ಮಕ್ಕಿದೆ. ಅಲ್ಲಾಹುವಿನ ಮೇಲೆ ಅಷ್ಟೊಂದು ಭಕ್ತಿ ಇದ್ದರೆ ನಿಮ್ಮ ಬಂಗಲೆ ಬರೆದುಕೊಡಿ ಎಂದ ಶಾಸಕರು ಮುಂದಿನ ದಿನಗಳಲ್ಲಿ ಜಮೀರ್ ನ್ನ ಹುಡುಕಿ ಹುಡುಕಿ ಹೊಡೆಯವ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಎಚ್ಚರಿಕೆ ನೀಡಿದರು. ಸಚಿವ ಜಮೀರ್ ಬಡವರಿಗೆ ಸೂರು ಕೊಡುವ ಬಗ್ಗೆ ಯೋಚಿಸುತ್ತಿಲ್ಲ. ಬಡ ರೈತರ ಆಸ್ತಿಯನ್ನ ವಕ್ಫ್ ಗೆ ತೆಗೆದುಕೊಂಡು ಹೋಗುವ ಬಗ್ಗೆ ಚಿಂತಿಸಲಾಗುತ್ತಿದೆ. ಹಾಗಾಗಿ ನಮ್ಮಗಳ ತಾಳ್ಮೆ ಕಳೆಯಬೇಡಿ ಅಟ್ಟಾಡಿಸಿಕೊಂಡು ಹೊಡೆಯುವ ದಿನಬಹಳ ದೂರವಿಲ್ಲ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಹಸಿರು ಬಾವುಟಗಳು ಬಂಟಿಂಗ್ಸ್ ಕಟ್ಟಲು ಆರಂಭಿಸಲಾಗುತ್ತಿದೆ. ತಲಾಖ್ ಮೂಲಕ ಹೆಣ್ಣುಮಕ್ಕಳನ್ನ ಬಿಟ್ಟು ಲ್ಯಾಂಡ್ ಮೂಲಕ ಜಿಹಾದ್ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ 44 ಎಕರೆ 20 ಗುಂಟೆ ಜಮೀನು ವಕ್ಫ್ ಆಗಿದೆ. 84 ಕಡೆ ವಕ್ಫ್ ಬೋರ್ಡ್ ಹಾಕಲಾಗುತ್ತಿದೆ. ವಕ್ಫ್ ಟ್ರಿಬುನಲ್ ಗೆ ಹೋದವರಿಗೆ ನ್ಯಾಯ ಸಿಗುವ ನಂಬಿಕೆ ಇಲ್ಲ. ವಕ್ಫ್ ತನ್ನ ಆಸ್ತಿ ಅಲ್ಲ ಎಂದು ಹೇಳುತ್ತಾ ಎಂದು ಪ್ರಶ್ನಿಸಿದರು. ಹಾಗಾಗಿ ವಕ್ಫ್ ಕಾಯ್ದೆ ಬದಲಾವಣೆ ಆಗಬೇಕಿದೆ. ವಕ್ಫ್ ಬೋರ್ಡ್ ಬಿದ್ದರೆ ದೇಶದ ಸುಪ್ರೀಂಕೋರ್ಟ್ ಗೆ ಹೋದರೂ ನ್ಯಾಯಸಿಗುವ ಭರವಸೆ ಇಲ್ಲ ಯಾಕೆ ಎಂದರೆ ವಕ್ಫ್ ಟ್ರಿಬುನಲ್ ಗೆ ಹೋಗಬೇಕು. ವಕ್ಫ್ ತನ್ನ ಆಸ್ತಿಯನ್ನ ಬಿಟ್ಟುಕೊಡುತ್ತಾ ಎಂದು ಪ್ರಶ್ನಿಸಿದರು.
ಶಿವಮೊಗ್ಗದ ಡಿಸಿ ಕಚೇರಿನ ಎದುರಿನ ಆಸ್ತಿ ನಗರ ಪಾಲಿಕೆ ಆಸ್ತಿಯಾಗಿದೆ. ಈ ಜಾಗದಲ್ಲಿ ವರ್ಷಕೊಮ್ಮೆ ಮಾತ್ರ ನಮಾಜ್ ಮಾಡಲು ಅವಕಾಶವಿದೆ. ಇದು ಸಾರ್ವಜನಿಕರ ಸ್ವತ್ತು. ಆದರೆ ಇದನ್ನೂ ಕಬ್ಜಾ ಮಾಡಲಾಗಿದೆ. ಮಂಡ್ಲಿ ಹತ್ತಿರ ಆಸ್ತಿಯನ್ನ ಕೆಳದಿ ವಂಶಸ್ಥರ ಜಾಗ ಎಂದು ಹೇಳಿ ಸ್ವಚ್ಛ ಮಾಡಲಾಗಿತ್ತು. ಅದು ಸಧ್ಯಕ್ಕೆ ನ್ಯಾಯಾಲಯದಲ್ಲಿದೆ.
ಗೋಪಾಳದಲ್ಲಿನ ಆಸ್ತಿಯನ್ನ ವಕ್ಫ್ ಆಸ್ತಿ ಎನ್ನಲಾಯಿತು. ಸರ್ಕಾರ ಎಷ್ಟು ಅವರ ಪರವಾಗಿ ಯೋಚಿಸುತ್ತಿದೆ ಎಂದು ಚಿಂತಿಸಬೇಕಿದೆ. ವಿನಾಯಕ ಚಲನಚಿತ್ರಮಂದಿರದ ಪಕ್ಕದ ಸರ್ಕಾರದ ಜಾಗ ಪಾಲಿಕೆ ಜಾಗ ಎಂದು ಕಾಂಪೌಂಡ್ ಕಟ್ಟಿದರೆ ವಕ್ಫ್ ತನ್ನದು ಎಂದಿತು. ಬಹುಕೋಟಿ ಆಸ್ತಿಯನ್ನಕಬಳಿಸುವ ಹುನ್ನಾರ ಇದಾಗಿದೆ. ಬಡವರ ಆಸ್ತಿಯನ್ನ ಕಬ್ಜಾಮಾಡಲು ಬಿಜೆಪಿ ಬಿಡೊಲ್ಲ ಎಂದು ಗುಡುಗಿದರು.
ಇದೇ ರೀತಿಯ ಮನಸ್ಥಿತಿಯನ್ನ ಮುಂದುವರೆಸಿಕೊಂಡು ಹೋದರೆ ಸಚಿವ ಜಮೀರು ಶಿವಮೊಗ್ಗಕ್ಕೆ ಬರಬೇಡಿ. ಬಂದ್ರೆ ಪೆಂಡಿಂಗ್ ಇರುವ ಆಸ್ತಿಯನ್ನ ವಕ್ಫ್ ಗೆ ಬರೆದು ಹೋಗುವ ಭಯವಿದೆ. ಮೊದಲು ಶಿವಮೊಗ್ಗಕ್ಕೆ ಬನ್ನಿ ಎಂದು ಕರೆಯಲಾಗಿತ್ತು. ಆದರೆ ಈಗ ಬರಬೇಡಿ ಎಂದು ಹೇಳುತ್ತಿದ್ದೇವೆ ಎಂದರು
ಸಚಿವ ರಾಮಲಿಂಗರೆಡ್ಡಿ ಅವರಿಗೆ ಮುಜುರಾಯಿ ಇಲಾಖೆಗೆ ಹಣ ಬಿಡುಗಡೆ ಮಾಡಿ ಎಂದರೆ ಹಣವಿಲ್ಲ ಎಂದಿದ್ದರು. ಈಗ ಸರ್ಕಾರ 31,84,50,000 ಆಸ್ತಿಗೆ ಕಾಂಪೌಂಡ್ ಹಾಕಲು ಹಣ ಬಿಡುಗಡೆ ಮಾಡಲಾಗಿದೆ. ಜಮೀರು ಮಾಡುವ ಕೆಲಸವನ್ನ ಹಿಂದೂಗಳ ಮುಜರಾಯಿ ದೇವಸ್ಥಾನಕ್ಕೆ ಹಣವಿಲ್ಲ ಎನ್ನಲಾಗುತ್ತಿದೆ ವಾಗ್ದಾಳಿ ನಡೆಸಿದರು.
ವಕ್ಫ್ ಸ್ವತ್ತು ಸರ್ಕಾರದ ಸ್ವತ್ತಾಗೊಲ್ಲ. ಮುಜರಾಯಿ ಇಲಾಖೆಯ ಆಸ್ತಿ ಸರ್ಕಾರದ್ದಾಗುತ್ತದೆ. ಶಿವಮೊಗ್ಗದ ಆಟೋಕಾಂಪ್ಲೇಕ್ಸ್ ನ ಹಿಂಭಾಗ ವಕ್ಫ್ ಆಸ್ತಿ ಎನ್ನಲಾಗುತ್ತಿದೆ. ಗಾರ್ಡನ್ ಏರಿಯಾವನ್ನ ಮುಂದಿನ ದಿನಗಳಲ್ಲಿ ವಕ್ಫ್ ಆಸ್ತಿಯಾದರೆ ಅಚ್ಚರಿಪಡಿಯುವಂತಿಲ್ಲ. ಸಿಎಂ ರೈತರಿಗೆ ನೀಡಿರುವ ನೋಟೀಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಪಹಣಿಯಲ್ಲಿನ ಹೆಸರು ಯಾರು ತೆಗೆಯಬೇಕು. ವಕ್ಫ್ ಹೆಸರು ತೆಗೆದ್ರೇನೇ ಅದು ರೈತರದ್ದಾಗೋದು. ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುವ ಜಮೀರ್ ನ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ಅವರಿಗೆ ಯಾರಾದರೂ ಬೆಂಕಿ ಹಚ್ಚುತ್ತಾರೆ ಎಂದು ಗುಡುಗಿದರು.
ರಾಜ್ಯ ಸರ್ಕಾರ ಇದಕ್ಕೆ ಸರಿಯಾದ ಕಾನೂನಿನಕೆಲಸ ತರಬೇಲು. ವಕ್ಫ್ ಬೋರ್ಡ್ ಹಾಕಲು ಹೊರಟವರು ಕೈಬಿಡಬೇಕು ಎಂದು ಆಗ್ರಹಿಸಿದರು.