ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರಕ್ಕೆ ಆಗಮಿಸಿದ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಗೆ ಭವ್ಯ ಸ್ವಾಗತ ಕೋರಲಾಗಿದೆ. ಬಸ್ ನಿಲ್ದಾಣದಲ್ಲಿ ತೀರ್ಥಹಳ್ಳಿಯಿಂದ ಬಂದ ರಥವನ್ನ ಸ್ವಾಗತಿಸಲಾಯಿತು.
ನವೆಂಬರ್ 6ನೇ ರಂದು ಶೃಂಗೇರಿಯಿಂದ ಪ್ರಾರಂಭಗೊಂಡ "ನಿರ್ಮಲ ತುಂಗಾ-ಭದ್ರ ಅಭಿಯಾನ" ಪಾದಯಾತ್ರೆಯೂ ಇಂದು ಶಿವಮೊಗ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಅಶೋಕ ವೃತ್ತದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಅಭಿಯಾನದ, ಶಂಕರ್ ಗಿರೀಶ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.
ಹೂಮಳೆ ಸುರಿಸಿ ಪಾದಯಾತ್ರೆಯ ವಾಹನವನ್ನ ಸ್ವಾಗತಿಸಲಾಯಿತು, ನಾಳೆ ಬೆಳಿಗ್ಗೆ ಪ್ರಬುದ್ಧರ ಸಭೆ, ಸಂಜೆ ತುಂಗಾರತಿ, ಮರುದಿನ ಬೈಕ್ ರ‌್ಯಾಲಿ ಮೂಲಕ ಹೊಳಲೂರು ಮೂಲಕ ಮುಂದಿನ ಊರಿಗೆ ಸಾಗಲಿದೆ. ಸ್ವಾಗತದ ನಂತರ ನಗರದಲ್ಲಿ ಪಾದಯಾತ್ರೆ ಸಾಗಿದೆ.