Girl in a jacket

ನಗರಗಳಲ್ಲಿ ಮುಂದಿನ‌ಮೂರು ವರ್ಷಗಳಲ್ಲಿ ಎಸ್ ಟಿಪಿ ಪ್ಲಾಂಟ್ ಸ್ಥಾಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ-ಬಿ.ವೈ.ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ಆಂದೋಲನಗಳಲ್ಲಿ ತುಂಗಭದ್ರಾ ಪಾದಯಾತ್ರೆ ಕೂಡ ಒಂದಾಗಲಿದೆ. ವಿಜ್ಞಾನ ಇಷ್ಟೊಂದು ಮುಂದುವರಿದ ಸಂದರ್ಭದಲ್ಲಿ ಈ ಅಭಿಯಾನ ಜನರ ಕಣ್ಣು ತೆರೆಸುವ ಕೆಲಸ ಮಾಡುವಂತಾಗಲಿ ಎಂದು ಸಂಸದ ರಾಘವೇಂದ್ರ ಅಭಿಪ್ರಾಯ ಪಟ್ಟರು. 

ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾದ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಕೆ‌ ಮಾಡಬೇಕಿದೆ. ೮-೧೦ ವರ್ಷದಲ್ಲಿ ಪರಿಸರ ಮೇಲೆ ಅಗುತ್ತಿರುವ ದಬ್ಬಾಳಿಕೆ ತಡೆಯುವ ಪ್ರಯತ್ನ ಆಗುತ್ತಿದೆ.  ಒಂದು ಎಸ್ ಟಿಪಿ ಗೆ ಕನಿಷ್ಠ ಸಾವಿರ ಕೋಟಿ ಬೇಕಾಗುತ್ತದೆ. ಸಾವಿರಾರು ಕೋಟಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಎಲ್ಲ ನಗರಗಳಲ್ಲಿ ಮುಂದಿನ‌ಮೂರು ವರ್ಷಗಳಲ್ಲಿ ಎಸ್ ಟಿಪಿ ಪ್ಲಾಂಟ್ ಸ್ಥಾಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. 

ಸಮಾಜದಲ್ಲಿ ಜಾಗೃತಿ ಅಗಬೇಕಿದೆ.‌ಅದು ಅಂಧೋಲನದ‌ ಮೂಲಕ ಆಗುತ್ತಿದೆ. ನದಿ‌ ಶುದ್ಧೀಕರಣ ರಾಷ್ಟ್ರೀಯ ಮಹತ್ವದ ಯೋಜನೆ ಆಗಬೇಕಿದ್ದು ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಪಕ್ಷಾತೀತವಾಗಿ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದರು.

ಅಭಿಯಾನದ ಪ್ರಮುಖ ಎಂ.ಶಂಕರ್‌ ಪ್ರಸ್ತಾವಿಕ ಮಾತನಾಡಿ, ಎರಡು ವರ್ಷಗಳಿಂದ ವಿವಿಧ ಆಯಾಮಗಳಲ್ಲಿ ಜನಜಾಗೃತಿ ಮಾಡಲಾಗುತ್ತಿದ್ದೇವೆ. ೪೫೦ ಕಿ.ಮಿ ವ್ಯಾಪ್ತಿಯಲ್ಲಿ ಜನಸಮಪರ್ಕ ಸಬೆ ಮಾಡೊದ್ದೆವೆ. ನಾಗರಿಕ ಸಂಘಟನೆ, ರೈತರು, ವಿವಿಧ ಸಂಘಸಂಸ್ಥೆಗಳೊಂದಿಗೆ ಚರ್ಚೆನಡೆಸಿದ್ದು ನದಿ ಕಲುಷಿತಗೊಂಡಿರುವ ವಿಷಯ ತಿಳಿಯಿತು.

ಅಭಿಯಾನಕ್ಕೆ ಪ್ರಬುದ್ಧರ ಸಲಹೆ, ಸಹಕಾರ ಅಗತ್ಯವಾಗಿದೆ. ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿ ೬೫೦ ಕಿ.ಮೀ.ಹರಿಯುತ್ತದೆ. ನದಿ ಪಾತ್ರದಲ್ಲಿ ೧.೫ ಕೋಟಿ ಜನರಿದ್ದಾರೆ. ಫಲಾನುಭವಿಗಳ ಸಂಖ್ಯೆ ಸುಮಾರು ೩ ಕೋಟಿ ದಾಟಿದೆ. ನದಿಯ ರಕ್ಷಣೆ ಮಾಡಬೇಕಿದೆ. ಇದು ಸದ್ಭಾವನ ನದಿಯಾಗಿದೆ. ಚಿತ್ರದುರ್ಗದ ವರೆಗೆ ಕುಡಿಯುವ ನೀರು ಕೊಂಡೊಯ್ಯಲಾಗಿದೆ. ಆಂಧ್ರದವರೆಗೆ ಹರಿದಿದೆ‌‌. 

ಪುಣ್ಯದ, ಸದ್ಭಾವನ, ಸತ್ಯದ ನದಿ ಇದಾಗಿದೆ. ಪಾದ ಯಾತ್ರೆ ಮಾಡಿದೆ ನದಿ ಶುದ್ಧವಾಗುವುದಿಲ್ಲ.‌ ಆದರೆ ಪಾದಯಾತ್ರೆ ಮೂಲಕ ನಾಗರಿಕ ಸಮಾಜ, ಸರ್ಕಾರವನ್ನು ಎಚ್ಚರಿಸುವ ಕೆಲಸವಾಗಿದೆ. ಇದು ಚಳುವಳಿ, ಹೋರಾಟವಲ್ಲ. 

ಮನೆ ಬಳಕೆಗೆ ವರ್ಷಕ್ಕೆ ೧೨ ಟಿಎಂಸಿ ನೀರು ಬಳಸಲಾಗುತ್ತಿದೆ. ಚರಿತ್ರಾರ್ಹ ಪಾದಯಾತ್ರೆ ಇದಾಗಿದೆ. ಶೃಂಗೇರಿ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಐದು ಸಾವಿರ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಮೂರು, ನಾಲ್ಕನೇ‌ ತರಗತಿ ಮಕ್ಕಳು ಬರಿಗಾಲಲ್ಲಿ ಹೆಜ್ಜೆ ಹಾಕಿದರು. ಅದು ನಮಗೆ ಉತ್ಸಾಹ ನೀಡಿದೆ ಎಂದರು.

ಪ್ರತಿಯೊಂದು ಗ್ರಾಮಸ್ಥರಲ್ಲೂ ನದಿ ಉಳಿಸುವ ಕಾಳಜಿ ಇದೆ. ಶಿವಮೊಗ್ಗದಲ್ಲಿ ಎರಡು ಕಡೆ ಎಸ್ ಟಿಪಿ ಪ್ಲಾಂಟ್‌ಇದೆ. ೧೮ ವೆಟ್ ವೆಲ್ ಇದೆ. ಇನ್ನು ಎರಡು ಪ್ಲಾಂಟ್ ಗೆ ಸರ್ಕಾರಕ್ಕೆ‌ ಮನವಿ ಸಲ್ಲಿಸಲಾಗಿದೆ.ಟಿಪ್ಪುನಗರ, ಶರಾವತಿ ನಗರ ಚಾನಲ್ ಗೆ ೧೦೮ ಕಡೆ ಕೊಳಚೆ ನೀರು‌ ಸೇರುತ್ತಿದೆ. ಮೂರು ವರ್ಷದಲ್ಲಿ ಶಿವಮೊಗ್ಗದ ಒಂದು ಹನಿ ಅಶುದ್ಧ ನೀರು ಕೂಡ ನದಿ ಸೇರುವುದಿಲ್ಲ.‌ಇದು ಇಡೀ ರಾಜ್ಯಕ್ಕೆ‌ ಮಾದರಿಯಾಗಲಿದೆ. 

ಸಂಸದ ರಾಘವೇಂದ್ರ ಅವರು ತುಂಗಭದ್ರಾ ನದಿ ಶುದ್ಧೀಕರಣವನ್ನು ರಾಷ್ಟ್ರೀಯ ಮಹತ್ವದ ಯೋಜನೆಯನ್ನಾಗಿ ತೆಗೆದುಕೊಂಡರೆ ಇಡೀ ದೇಶಕ್ಕೆ ಮಾದರಿ ಆಗಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close