ಸುದ್ದಿಲೈವ್/ಶಿವಮೊಗ್ಗ
ನವಂಬರ್ ಬಂತು ಎಂದರೆ ಕನ ್ನಡ ರಾಜ್ಯೋತ್ಸವ ದಿನವೂ ಆಚರಿಸಲಾಗುತ್ತದೆ. ಅದರಂತೆ ಇಂದು ಕನ್ನಡ ಹೋರಾಟಗಾರ ಮಧುಸೂಧನ್ ನೇತೃತ್ವದಲ್ಲಿ ಬೈಕ್ ರ‌್ಯಾಲಿ ನಡೆದಿದೆ.
ಈ ದಿನ ಬಸವನಗುಡಿ ಜಯನಗರ ಮುಖ್ಯ ರಸ್ತೆಯಲ್ಲಿರುವ ಕನ್ನಡ ಧ್ವಜ ಸ್ತಂಭದಲ್ಲಿ ಕರ್ನಾಟಕ ಬಾವುಟವನ್ನು ಹಾರಿಸುವುದರ ಮೂಲಕ ಕನ್ನಡ ಹೋರಾಟಗಾರ ಮುಖಂಡರಾದ ಮಧುಸೂದನ್ ಎಸ್ ಎಂ ಬಾವುಟವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಐವತ್ತಕ್ಕೂ ಹೆಚ್ಚು ವಾಹನಗಳಲ್ಲಿ ಕನ್ನಡದ ಜಾಗೃತಿಗಾಗಿ ಬೈಕ್ ರ್ಯಾಲಿಯನ್ನು ಧ್ವಜಸ್ಥಂಭದ ಸ್ಥಳದಿಂದ ಪ್ರಾರಂಭಗೊಂಡು ಶಿವಮೂರ್ತಿ ಸರ್ಕಲ್, ಸವಳಂಗ ರಸ್ತೆ ಅಕ್ಕಮಹಾದೇವಿ ಸರ್ಕಲ್, ನವ್ಯಶ್ರೀ ಪಕ್ಕದ ರಸ್ತೆಯಿಂದ ಜಯನಗರ ರಾಮ ಮಂದಿರದ ಮುಖಾಂತರ ಹಾದು ಬಸವನಗುಡಿಗೆ ಬಂದು ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ರ ಮುಖಂಡರಾದ ರವಿಪ್ರಸಾದ್ ರವರು ಅತಿ ಶೀಘ್ರದಲ್ಲಿ ಸಂಘಟನೆಗೆ ಹೊಸ ಹೆಸರನ್ನು ಇಡುವುದರ ಮೂಲಕ ರಾಜ್ಯ ವ್ಯಾಪಿ ಸಂಘಟಿಸುವುದಾಗಿ ಘೋಷಣೆಯನ್ನು ಮಾಡಿದರು ಇದೇ ಸಂದರ್ಭದಲ್ಲಿ ರಘುನಂದನ್, ನೂರುಲ್ಲಾ, ರವಿಕುಮಾರ್, ನಯಾಜ್, ಮತ್ತಿತರರು ಪಾಲ್ಗೊಂಡಿದ್ದರು