ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಎನ್‌ಟಿ ಪ್ರೊಫೆಸರ್ ಹುದ್ದೆ ಕಳೆದ ಹತ್ತು ತಿಂಗಳಿಂದ ಖಾಲಿ ಬಿದ್ದಿದೆ. ಯಾರ ನೇಮಕಾತಿ ಇಲ್ಲದೆ ಇಎನ್ ಟಿ ಕೊರ್ಸನ್ನೇ ಅನರ್ಹತೆಗೊಳ್ಳಿಸುವ ಭೀತಿ ಎದುರಾಗಿದೆ. ಇವುಗಳ ನಡುವೆ ಸರ್ಕಾರಿ ಇಲಾಖೆಯಲ್ಲಿ ಇಂತಹ ಭೀತಿ ಮತ್ತು ಅವ್ಯವಸ್ಥೆ ಮಾಮೂಲಿ ಎಂಬ ವಾದವೂ ಕೇಳಿ ಬರುತ್ತಿದೆ.
ಸೀನಿಯರ್ ಟಿ ಲಿಸ್ಟ್ ನಲ್ಲಿ ನೇಮಿಸುವ ಹಿರಿಯ ಇಎನ್ ಟಿ ಸ್ಪೆ ಬಗ್ಗೆ ಸಹ ಪ್ರಾಧ್ಯಾಪಕರ ಕಾರ್ಯನಿರ್ವಹಣೆ 3 ವರ್ಷ ಅತಿಕಳಪೆ 1 ವರ್ಷ ಕಳಪೆ ಇದೆ ಇವರನ್ನು ಮಾಡಲು ಬರುವುದಿಲ್ಲ ಆದರೆ ಇವರನ್ನೇ ಮಾಡಬೇಕು ಎನ್ನುವ ಲಾಬಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವ ಚರ್ಚೆಗಳು ವೈದ್ಯಕೀಯ ವಿದ್ಯಾಲಯ ಸಂಸ್ಥೆಯಲ್ಲಿ ನಡೆಯುತ್ತಿದೆ.
ಒಂದು ವೇಳೆ ಇವರನ್ನೇ ನೇಮಕಾತಿ ಮಾಡಿದರೆ ಈ ವಿಷಯ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇದೆ..?! ನ್ಯಾಯಾಲಯಕ್ಕೆ ಈ ವಿಷಯ ತಲುಪಿದರೆ ಮುಂದಿನ ದಿನಗಳಲ್ಲಿ ಇಲ್ಲಿರುವ ಸ್ನಾತಕೋತ್ತರ ಸೀಟುಗಳು ಅನರ್ಹತೆ ಗೊಳ್ಳುವ ಹಾಗೂ ರದ್ದತಿಯಾಗುವ ಸಂಭವ ಇರುವುದರಿಂದ ಈ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವುದರಿಂದ ಈ ಗೊಂದಲಕ್ಕೆ ತೆರೆ ಎಳೆದು ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಗತಿಗೆ ಮುನ್ನುಡಿ ಬರೆಯಬೇಕು ಎನ್ನುವುದು ಹಲವರ ಆಕಾಂಕ್ಷಿಯಾಗಿದೆ
ಸರ್ಕಾರ ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನ ಹರಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರು ಹಿಂದೆ ಬಡವರಿಗೆ, ದೀನ ದಲಿತರಿಗೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಒಂದು ಬೃಹತ್ ಆಸ್ಪತ್ರೆ ಇರಲಿ ಎನ್ನುವ ಉದ್ದೇಶದಿಂದ ನಗರದಲ್ಲಿ ಈ ಆಸ್ಪತ್ರೆಯನ್ನು ಅವರ ಅಧಿಕಾರ ಅವಧಿಯಲ್ಲಿ ತಂದರು.
ಆದರೆ ಇಲ್ಲಿರುವ ಕೆಲವು ತಿಮಿಂಗಲಗಳು ಎಲ್ಲೆಲ್ಲಿ ಹಣ ತಿನ್ನಲು ಸಾಧ್ಯವೊ ಅಲ್ಲ ಅಲ್ಲೆಲ್ಲಾ ಹಣ ತಿನ್ನುತ್ತಿದ್ದಾರೆ. ಬಡವರಿಗೆ ಸರಿಯಾದ ಚಿಕಿತ್ಸೆಗಳು ಲಭ್ಯವಾಗುತ್ತಿಲ್ಲ, ಔಷಧಿಗಳನ್ನು ಹೊರಗಡೆ ಬರೆದು ಕೊಡುತ್ತಿದ್ದಾರೆ, ಇಲ್ಲಿರುವ ವೈದ್ಯರು ಸರ್ಕಾರಿ ಸಂಬಳ ತೆಗೆದುಕೊಳ್ಳುವುದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸೇವೆ ಸಲ್ಲಿಸಿ ಸಂಬಳಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಂಜೆ ಆದರೆ ಸಾಕು ಯಾವುದೇ ಡಾಕ್ಟರಗಳು ಸರಿಯಾದ ಸಮಯಕ್ಕೆ ಲಭ್ಯವಿರುವುದಿಲ್ಲ ಸ್ವಚ್ಛತೆ ಎನ್ನುವುದು ಕಣ್ಮರೆಯಾಗಿದೆ. ಇದನ್ನೆಲ್ಲಾ ನೋಡಿಕೊಳ್ಳಬೇಕಾದ ಆಡಳಿತ ಹಿಡಿದ ಸಂಸ್ಥೆಯ ಮುಖ್ಯ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಇದೆ.
ಆದರೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ವೈದ್ಯರು ಆಸ್ಪತ್ರೆಯಲ್ಲಿರುತ್ತಾರೆ. ಸಂಜೆ 4ರ ನಂತರ ವೈದ್ಯರು ಅಲಭ್ಯವಾಗುವುದು ಮಾಮೂಲಿ. ವೈಧ್ಯ ಅಧೀಕ್ಷಕ ಡಾ.ತಿಮ್ಮಪ್ಪನವರು ಅಧೀಕ್ಷರಾಗಿ ಬಂದ ನಂತರ ಮೆಗ್ಗಾನ್ ನ ಅವ್ಯವಸ್ಥೆ ತಕ್ಕಮಟ್ಟಿಗೆ ಸುಧಾರಣೆಗೊಂಡಿದೆ. ಅವಧಿ ವೇಳೆಯಲ್ಲಿ ವೈದ್ಯರು ಲಭ್ಯವಾಗುತ್ತಿದ್ದಾರೆ. ಇನ್ನೂ ಹಲವು ಸಮಸ್ಯೆಗಳು ಸುಧಾರಣೆಗೊಳ್ಳಬೇಕಿದೆ. ಬ