Girl in a jacket

ಕಾಲಾ ವಸೀಂ, ಛೇವಂಗ್ಲಿ, ಶಾಬಾಜ್ ವಿರುದ್ಧ ಬೆದರಿಕೆಯ ಆರೋಪ


ಸುದ್ದಿಲೈವ್/ಶಿವಮೊಗ್ಗ

ಪ್ರಕರಣವೊಂದರಲ್ಲಿ ಸಾಕ್ಷಿಯಾಗಿದ್ದ ಹಳೇ ಮಂಡ್ಲಿಯ ಹುಡುಗನಿಗೆ ಕಾಲಾ ವಸೀಂ, ಛೇವಂಗ್ಲಿ ವಸೀಂ ಮತ್ತು ಶಾಬಾಜ್ ರಿಂದ ಬೆದರಿಕೆ ಕರೆ ಬಂದಿದೆ.

ಕಾಲಾ ವಸೀಂ, ಛೇವಂಗ್ಲಿ ವಸೀಂ ಮತ್ತು ಶಾಬಾಜ್ ಮೂವರು ರೌಡಿ ಶೀಟರ್ ಆಗಿದ್ದು ನ್ಯಾಯಾಲಯದ ಪ್ರಕರಣದಲ್ಲಿ ಈ 22 ವರ್ಷದ ಯುವಕನಿಗೆ ಸಾಕ್ಷಿ ಹೇಳುವಂತಿಲ್ಲ. ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಯುವಕನಿಗೆ ಬೆದರಿಕೆ ಹಾಕಿದ್ದಾರೆ. 

ಎದರು ಪಾರ್ಟಿಗಳು ಗಳು ಸಹ ಸಾಕ್ಷಿ ಹಾಕದಂತೆ ಬೆದರಿಕೆ ಹಾಕುತ್ತಿದ್ದು, ನ.19  ರಂದು ರಾತ್ರಿ ಈ ಮೂವರು ರೌಡಿ ಶೀಟರ್ ಗಳು ಬೆದರಿಕೆ ಹಾಕಿರುವುದಾಗಿ ಮತ್ತು ನ್ಯಾಯಾಲಯದ ಆದೇಶದಂತೆ ರಕ್ಷಣೆ ನೀಡುವಂತೆ ಕೋರಿ ಯುವಕ ದೊಡ್ಡಪೇಟೆ ಪೊಲೀಸ್ ಠಾಣೆಯಿಂದ ದೂರು ದಾಖಲಾಗಿದೆ. 

ಯುವಕನ ಫೋಟೊ ಹಿಡಿದು ಕೊಂಡು ಬಂದು ವಿಚಾರಣೆ

ಮತ್ತೊಂದು ಪ್ರಕರಣದಲ್ಲಿ ಹೈದರಾಬಾದ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗದ ಯುವಕನ ಫೊಟೊ ಹಿಡಿದುಕೊಂಡು ಬಂದು ವಿಚಾರಿಸುತ್ತಿದ್ದ ಪ್ರಕರಣವೊಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಪಾದಖಲಾಗಿದೆ. ಯುವಕ ಹುಡುಗಿಯೊಂದಿಗೆ ಓಡಿಹೋಗಿದ್ದಾನೆ ಆತ ಸಿಕ್ಕರೆ ಬಿಡುವುದಿಲ್ಲ ಎಂಬ ಧಮ್ಕಿ ಹಾಕಿದ್ದು ಸೀಗೆ ಹಟ್ಟಿ ವೃತ್ತದಲ್ಲಿ ವಿಚಾರಿಸುತ್ತಿದ್ದು ಆತನ ಸ್ನೇಹಿತನ ಬಗ್ಗೆಯೂ ವಿಚಾರಣೆ ಮಾಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close