Girl in a jacket

ಲಕ್ಷ್ಮಣ್ ಆತ್ಮಹತ್ಯೆ-ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕ ಸೇರಿ ಮೂವರ ವಿರುದ್ಧ ಎಫ್ಐಆರ್



ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಮಾಜಿ ನಗರ ಸಭೆ ಸದಸ್ಯ ಆರ್ ಲಕ್ಷ್ಮಣ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ. 

ವಿನೋಬ ನಗರದ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕ ಮೋಹನ್.ಜಿ, ಮೋಹನ್ ಜಿ ಮತ್ತು ವೆಂಕಟೇಶ್ ವಿರುದ್ಧ ದೂರು ದಾಖಲಾಗಿದೆ. ಆರ್ ಲಕ್ಷ್ಮಣ್ ಬಡ್ಡಿಗೆ ಇವರಿಂದ ಹಣ ಪಡೆದಿದ್ದರು. ಹಣ ಪಡೆದಿದ್ದ ಕಾರಣ ಬಡ್ಡಿ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು  ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಶಿವಮೊಗ್ಗದ ಮಾಜಿ ಕಾರ್ಪರೇಟರ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಿಷ ಸೇವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಕೊನೆ ಉಸಿರು ಎಳೆದಿದ್ದಾರೆ.  

ಬಿಜೆಪಿಯ ಮಾಜಿ ಕಾರ್ಪರೇಟರ್ ಲಕ್ಷ್ಮಣ್ ಆರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಳದ ಪಾರ್ಕ್ ವೊಂದರಲ್ಲಿ ವಿಷ‌ಸೇವಿಸಿದ್ದ ಲಕ್ಷ್ಮಣ್ ನಂತರ ಒದ್ದಾಡಲಿಕ್ಕೆ ಶುರುಮಾಡಿದ್ದರಿಂದ ನಂತರ ಖುದ್ದಾಗಿ ತಾವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಕರೆಯಿಸಿಕೊಂಡಿದ್ದರು.

ಯಾರೂ ಇಲ್ಲದ ಕಾರಣ ಅಂಬ್ಯುಲೆನ್ಸ್ ಅವರೇ ಫೊಟೊ ತೆಗೆದು ವಾಟ್ಸಪ್ ಗ್ರೂಪ್ ಗೆ ಹಾಕಿದ್ದಾರೆ. ಇದನ್ನ ಪೊಲೀಸ್ ಅಧಿಕಾರಿಯೊಬ್ಬರು ಗುರುತಿಸಿ  ನಂತರ ಇವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಲಕ್ಷ್ಮಣ್ ಹೊಸಮನೆ ನಿವಾಸಿಯಾಗಿದ್ದಾರೆ. ರೌಂಡ್ ಅಪ್ ನ್ನ ಪಾರ್ಸಲ್ ಪಡೆದುಕೊಂಡು ಬಂದು  ಗೋಪಾಳದ ಪಾರ್ಕ್ ಗೆ ಹೋಗಿ ವಿಷ ಸೇವಿಸಿದ್ದರು. ನಿನ್ನೆ ಹಣಕಾಸಿನ ವಿಚಾರದಲ್ಲಿ ಲಕ್ಷ್ಮಣ್ ಆತ್ಮಹತ್ಯೆಗೆ ಶರಣಾಗಿರಬಹುದು  ಎಂದು ಶಂಕಿಸಿ ಸುದ್ದಿ ಮಾಡಲಾಗಿತ್ತು. ಮೂವರ ವಿರುದ್ದ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close