Girl in a jacket

ಸಚಿವ ರಹೀಮ್ ಖಾನ್ ಎದರು ಬಿಜೆಪಿ ಬೆಂಬಲಿತ ಅಧಿಕಾರಗಳ ಎತ್ತಂಗಡಿಗೆ ಬೇಡಿಕೆ!


ಸುದ್ದಿಲೈವ್/ಶಿವಮೊಗ್ಗ

ಸಚಿವ ರಹೀಮ್ ಖಾನ್ ಇಂದು ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಭೇಟಿ ನೀಡಿದ ಬೆನ್ನಲ್ಲೇ ಪಕ್ಷದ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇನ್ನೂ ಬಿಜೆಪಿ ಅವಧಿಯ ಅಧಿಕಾರಿಗಳು ನಗರದ ವಿವಿಧ ಇಲಾಖೆಯಲ್ಲಿ ಮುಂದುವರೆದಿರುವ ಬಗ್ಗೆ ಆಕ್ಷೇಪಣೆ ಕೇಳಿ ಬಂದಿದೆ.

ಬಿಜೆಪಿಯ ಅವಧಿಯ ಅಧಿಕಾರುಗಳೆ ಮುಂದುವರೆದಿದ್ದಾರೆ. ಅವರನ್ನ ಎತ್ತಂಗಡಿ ಮಾಡಿ.  ನಮ್ಮನ್ನ ಬೆಂಬಲಿಸುವ ಅಧಿಕಾರಿಗಳನ್ನ ಕೊಡಬೇಕು ಎಂದು ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಭಾನು ಆಕ್ಷೇಪಣೆ ಎತ್ತಿದರು. ಭೋವಿ ಸಮಾಜದ ಅಧ್ಯಕ್ಷ ರವಿ ಕುಮಾರ್ ಸಹ ಬಲ್ಕಿಶ್ ಬಾನು ಅವರ ಆಕ್ಷೇಪಣಕ್ಕೆ ಧ್ವನಿಗೂಡಿಸಿದರು. ಅದರಂತೆ  ಬಿಜೆಪಿ ಕಾಲದ ಅಧಿಕಾರಿಗಳನ್ನ ಬದಲಿಸಿ ಎಂದು ಹೆಚ್ ಸಿ ಯೋಗೀಶ್ ಸಹ ತಿಳಿಸಿದರು.

ಅದರ ಜೊತೆಯಲ್ಲಿ 125 ಜೋಟಿ ಹಣ ಮಹಾತ್ಮಗಾಂಧಿ ನಗರ ಯೋಜನೆ ಅಡಿ ಅನುದಾನ ಬಿಡುಗಡೆಯಾಗಿದೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನ ಸೇರಿಸಿಕೊಂಡು ಅಲ್ಪ ಸಂಖ್ಯಾತರ ಮನೆಯ ಮುಂದೆ ರಸ್ತೆಗಳು ಆಗುವಂತೆ ಮಾಡಿಕೊಡುವಂತೆ ಒತ್ತಾಯಿಸಿದರು. 

ಸಚಿವ ರಹೀಮ್ ಖಾನ್  ಮಾತನಾಡಿ, ಸುಳ್ಳು ಹೇಳುವುದರಲ್ಲಿ ಬ್ರಿಟೀಶರನ್ನ ಹೊರತು ಪಡಿಸಿದರೆ ಬಿಜೆಪಿಗರೆ ನಿಸ್ಸೀಮಾರಾಗಿದ್ದಾರೆ. 

ಬಿಜೆಪಿ ಶಿವಮೊಗ್ಗವನ್ನ ಹೇಗೆ ಬಳಸಿಕೊಳ್ಳಬಹುದೋ ಹಾಗೆ ಬಳಸಿಕೊಂಡಿದೆ. ರಾಮಮಂದಿರ ಆಯಿತು. ಹಿಜಾಬ್ ವಿಷಯ ಎತ್ತಿದರು, ಹಿಜಾಬ್ ಆಯ್ತು ಹಲಾಲ್, ಜಟ್ಕಾ ಎಂದ್ರು,  ಈಗ ವಕ್ಫ್ ಅಂತಾ ಇದ್ದಾರೆ.  ಬಿಜೆಪಿಗೆ ವಕ್ಫ್  ಸಂಬಂಧವಿದೆಯಾ? ಸಂಬಂಧವೇ ಇಲ್ಲ. ನಮ್ಮ‌ಕಮ್ಯೂನಿಟಿ ಯ ಬೋರ್ಡ ಅದು. ಭೂಮಿ ಕಳೆದುಕೊಂಡಿದ್ದು ನಮ್ಮವರೆ, ಅದನ್ನ ಕಬ್ಜಾ ಮಾಡಿಕೊಂಡಿದ್ದು ನಮ್ಮವರೆ ಎಂದರು. 

ದೆಹಲಿಯ ಚುನಾವಣೆ ಇರುವುದರಿಂದ ವಕ್ಫ್ ವಿಚಾರ ಮುಂಚೂಣಿಗೆ ತರಲಾಗುತ್ತಿದೆ ಎಂದ ಸಚಿವರು, ನಿಜವಾದ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುತ್ತಿಲ್ಲ. ಶಾಸಕರಿಗೆ ಸಚಿವರು ಬಂದಾಗ ಬಕೆಟ್ ಹಿಡಿಯುವರು ಶೈನಿಂಗ್ ಆಗ್ತಾ ಇದ್ದಾರೆ. ಹೀಗೆ ಆದಾಗ ಪಕ್ಷ ಬೆಳೆಯಲ್ಲ. ನಿಷ್ಠಾವಂತ ಕಾರ್ಯಕರ್ತರನ್ನ ಗುರುತಿಸುವಂತಾಗಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದರು. ಆದರೆ ಅಧಿಕಾರಿಗಳ ಎತ್ತಂಗಡಿ ಬಗ್ಗೆ ಮಾತನಾಡಲೇ ಇಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close