ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ವಿನೋಬನಗರದಲ್ಲಿರುವ ಪೃಥ್ವಿ ಮ್ಯಾನ್ಷನ್ ಬಿಲ್ಡಿಂಗ್ ನ ಮಾಲೀಕ ಮೋಹನ್ ಸಿ ಅವರ ಮನೆಯ ಮೇಲೆ ತುಂಗ ನಗರ ಪೊಲೀಸರು ದಾಳಿ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಜನ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ವಿನೋಬನಗರದ ಮಾದೇರ ಕೇರಿಯಲ್ಲಿರುವ ಮಾತೃಶ್ರೀ ನಿಲಯದಲ್ಲಿರುವ ಮೋಹನ್ ಅವರ ಮನೆಯ ಮೇಲೆ ಕಳೆದ ಒಂದು ಗಂಟೆಯಿಂದ ತುಂಗ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ತುಂಗ ನಗರ ಪಿಐ ಗುರುರಾಜ್ ನೇತೃಥ್ವದಲ್ಲಿ ಒಂದು ಬೊಲೆರೋ, ಒಂದು ಶಾವರ್ಲೆಟ್ ಮತ್ತೊಂದು ಇನ್ನೊವಾ ಕಾರಿನಲ್ಲಿ ಬಂದ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಮೂರು ದಿನಗಳ ಹಿಂದೆ ನಗರ ಸಭೆಯ ಮಾಎಜಿ ಸದಸ್ಯ ಲಕ್ಷ್ಮಣ್ ಆರ್ ಬಡ್ಡಿದಂಧೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಮೋಹನ್ ಕಡೆಯವರಿಂದ ನಾಲ್ಕು ವರ್ಷದ ಹಿಂದೆ 2.80 ಲಕ್ಷ ಹಣ ಸಾಲ ಪಡೆದಿದ್ದು ಈಗ ಚಕ್ರಬಡ್ಡಿ ಎಲ್ಲಾ ಸೇರಿ 24 ಲಕ್ಷ ರೂ.ಗೆ ಏರಿಕೆ ಆಗಿದೆ ಎಂದು ಲಕ್ಷ್ಮಣ್ ಕುಟುಂಬ ಆರೋಪಿಸಿದೆ.
ಆದರೆ ಮೋಹನ್ ಮಗ ಪೃಥ್ವಿ ಮತ್ತು ವೆಂಕಟೇಶ್ ರಿಂದ ಆದ ಕಿರುಕುಳದಿಂದ ಲಕ್ಷ್ಮಣ್ ವಿಷ ಸೇವಿಸುವಂತಾಗಿದೆ. 21 ಲಕ್ಷ ರೂ. ಹಣ ಬಾಕಿ ಇತ್ತು. ಜೊತೆಗೆ ಒಂದು ವರ್ಷದಿಂದ ಸರ್ಕಾರದಿಂದ ಯಾವುದೇ ಕಾಮಗಾರಿ ಇಲ್ಲದ ಕಾರಣ ಇವರಿಗೆ ಕೆಲಸ ಇಲ್ಲದಂತಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟು ಬರೆದಿರುವುದಾಗಿ ತಿಳಿದು ಬಂದಿದೆ. ಸಧ್ಯದ ಮಾಹಿತಿ ಪ್ರಕಾರ ಮೋಹನ್ ಮತ್ತು ಅವರ ಮಗ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ.