Girl in a jacket

ಅಡಿಕೆ, ಮೆಕ್ಕೆ ಜೋಳ ಬೆಳೆಗಾರರಲಿ ಆತಂಕ



ಸುದ್ದಿಲೈವ್/ಶಿವಮೊಗ್ಗ

ಬೆಳಿಗ್ಗೆ ಬಿಸಿಲಿದ್ದ ಶಿವಮೊಗ್ಗದ ವಾತಾವರಣ ಸಂಜೆ ಅಷ್ಟು ಹೊತ್ತಿಗೆ ಮೋಡ ಕಟ್ಟಿಕೊಂಡಿದೆ. ಇದರಿಂದ ಫಸಲಿನಿ ನಿರೀಕ್ಷೆಯಲ್ಲಿರುವ ಮೆಕ್ಕೆ ಜೋಳ, ಅಡಿಕೆ ಮತ್ತು ಶುಂಠಿ ಬೆಳೆಗಾರರಿಗೆ ಆತಂಕ ಮೂಡಿದೆ. 

ಈ ಕುರಿತು ಮಾಹಿತಿ ನೀಡಿದ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಸಿಎ‌ಸ್‌ ಪಾಟೀಲ್‌, ಕರಾವಳಿ ಕರ್ನಾಟಕದಲ್ಲಿ ಡಿಸೆಂಬರ್‌೨ ಹಾಗೂ ಮೂರನೇ ತಾರೀಕಿನಂದು ವ್ಯಾಪಕ ಮಳೆಯಾಗಬಹುದು. ಚಾಮರಾಜನಗರ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲವೆಡೆ ಭಾರಿ ಮಳೆಯಾಗಲಿದ್ದು ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಹಗುರ ಮಳೆಯಾಗಬಹುದು ಎಂದು ತಿಳಿಸಿದ್ದಾರೆ. ಶಿವಮೊಗ್ಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಕೆ ಹಾಗೂ ಶುಂಠಿಗೆ ಮಳೆ ಕಂಟಕ ಎದುರಾಗಿದೆ. ಹಸಿ ಅಡಕೆ ಗುತ್ತಿಗೆ ನೀಡಿದ ರೈತರು ದಲ್ಲಾಳಿಗಳ ನಿರೀಕ್ಷೆಯಲ್ಲಿದ್ದು ಅಡಿಕೆ ವ್ಯಾಪರಕ್ಕೆ ತೊಡಕಾಗಿದೆ. 

ಸಾಂಪ್ರದಾಯಿಕ ಶೈಲಿಯಲ್ಲಿ ಅಡಕೆ ಬೇಯಿಸುವವರಿಗೂ ಸಹ ಈ ವಾತಾವಾರಣ ಸಮಸ್ಯೆ ತಂದಿದೆ. ಶುಂಠಿ ಬೆಳೆಗಾರರಿಗೆ ಹೊಲದಲ್ಲಿದ್ದ ಶುಂಠಿ ಮಳೆಗೆ ಚಿಗುರೊಡೆವ ಅಥವಾ ಕೊಳೆವ ಬಾಧೆ ಕಾಡುತ್ತಿದೆ. ಶುಂಠಿಯನ್ನ ಫ್ರೆಬ್ರವರಿ ತಿಂಗಳವರೆಗೆ ಇರಿಸಿ ಮಾರುವ ರೈತರೇ ಅಧಿಕವಾಗಿದ್ದು ಬದಲಾದ ಥಂಡಿ ವಾತಾವಾರಣ ಭಯ ಮೂಡಿಸಿದೆ. 

ಅಹಾರ ಬೆಳೆಗಳಾದ ಭತ್ತ, ಜೋಳದ ಮೇಲೂ ಮಳೆ ಕರಾಳ ಛಾಯೆ ಬೀರಿದೆ. ಬಹುತೇಖ ಮಲೆನಾಡಿನ ಜನರು ಭತ್ತ ಕಟಾವಿಗೆ ಮುಂದಾಗಿದ್ದು ಮಳೆ ವಾತಾವರಣಕ್ಕೆ ಹೆದರಿದ್ದಾರೆ. ಹೊಸಲದಲ್ಲಿ ಬಿಟ್ಟ ಬತ್ತದ ಹುಲ್ಲು ಹಾಳಾಗಬಹುದೆಂಬ ಆತಂಕವಿದೆ. ಈ ವರ್ಷ ಜೋಳದ ಬೆಳೆ ವಿರಳವಾಗಿದ್ದು ಬೆಲೆ ತಕ್ಕಮಟ್ಟಿಗೆ ಇದೆ. ಆದರೆ ಮಳೆಯ ಕಾರಣದಿಂದ ಜೋಳ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಇಡೀ ಮಲೆನಾಡೇ ಕತ್ತಲು ಆವರಿಸಿದಂತೆ ಭಾಸವಾಗಿದ್ದು ವಿಪರೀತ ಚಳಿಗೆ ಜನರು ಹೈರಾಣಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close