Girl in a jacket

ಹೈಕಮಾಂಡ್ ಗೆ ವಿಪಕ್ಷಗಳೆ ಅನಮಧೇಯ ಪತ್ರ ಬರೆದಿದ್ದಾರೆ-ಭೈರತಿ ಸುರೇಶ್!


ಸುದ್ದಿಲೈವ್/ಶಿವಮೊಗ್ಗ 

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಪ್ರಶ್ನೆ ಇಲ್ಲಈ ಬಗ್ಗೆ ಸಿಎಂ ಡಿಸಿಎಂ ಸ್ಷಪ್ಟಪಡಿಸಿದ್ದಾರೆ ಎಂದು ಬೈರತಿ ಸುರೇಶ್ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತಾಡದರು. 

ಹಾಸನದಲ್ಲಿ ಸಿದ್ದರಾಮೋತ್ಸವ ಎಂದು ದೊಡ್ಡ ಸಮಾವೇಶ ನಡೆಸುತ್ತೇವೆ.‌ ಆದರೆ ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯ ಕೆಪಿಸಿಸಿ ಅವರ ಬದಲಾವಣೆ, ಸಿದ್ದರಾಮೋತ್ಸವ ಸಚಿವ ಸಂಪುಟ ಪುನರ್ ರಚನೆ ಕುರಿತು  ಹೆಸರು ಇಲ್ಲದೇ ಯಾರೋ ಅರ್ಜಿ ಬರೆದಿದ್ದಾರೆ. ಇದು ವಿರೋಧ ಪಕ್ಷದವರೇ ಬರೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. 

ಸತೀಶ್ ಜಾರಕಿಹೊಳಿ ಸಿಎಂ, ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವರು, ಜಾರಕಿಹೊಳಿಯವರು ಹಿರಿಯರು‌ ಇದ್ದಾರೆ, ಆಸೆಪಡುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್ ಇದೆ ಈ ಬಗ್ಗೆ ನಿರ್ಧಾರ ಮಾಡುತ್ತದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close